May 6, 2024

MALNAD TV

HEART OF COFFEE CITY

ನಮ್ಮ ಪ್ರತಿಷ್ಠೆಯನ್ನು ಈ ಚುನಾವಣೆಯಲ್ಲಿ ಪ್ರದರ್ಶಿಸಬೇಕು ಮಾಜಿ ಜಿ.ಪಂ ಅಧ್ಯಕ್ಷ ಎ.ಎನ್ ಮಹೇಶ್

1 min read

ಚಿಕ್ಕಮಗಳೂರು-ಕುರುಬ ಸಮಾಜವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಗಿಲೆತ್ತರಕ್ಕೆ ಬೆಳೆಸಿದ್ದಾರೆ ಅಂತಹರಿಗೆ ಅವಮಾನಿಸುವ ರೀತಿ ಹೇಳಿಕೆ ನೀಡುತ್ತಿರುವ ಶಾಸಕ ಸಿ.ಟಿ ರವಿಯನ್ನು ಸೋಲಿಸುವ ಮೂಲಕ ನಮ್ಮ ಪ್ರತಿಷ್ಠೆಯನ್ನು ಈ ಚುನಾವಣೆಯಲ್ಲಿ ಪ್ರದರ್ಶಿಸಬೇಕೆಂದು ಮಾಜಿ ಜಿ.ಪಂ ಅಧ್ಯಕ್ಷ ಎ.ಎನ್ ಮಹೇಶ್ ಕರೆ ನೀಡಿದರು.ಅವರು ಕ್ಷೇತ್ರದ ಬೀಕನಹಳ್ಳಿ, ಹಂಪಾಪುರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಅವರ ಪರವಾಗಿ ಮತ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ದಲಿತರು, ಹಿಂದುಳಿದವರ ಆಶಾ ಕಿರಣವಾಗಿರುವ ಸಿದ್ದರಾಮಯ್ಯನವರಿಗೆ ಅವಮಾನಿಸಿ ನಮ್ಮ ಸ್ವಾಭಿಮಾನವನ್ನು ಕೆದಕಿರುವಂತ ಬಿಜೆಪಿ ಅಭ್ಯರ್ಥಿಯನ್ನು ಮೇ.10 ರಂದು ನಡೆಯಲಿರುವ ಚುನಾವಣೆಯಲ್ಲಿ ಕುರುಬ ಸಮಾಜ ಪ್ರತಿಷ್ಠೆಯಾಗಿ ತೆಗೆದುಕೊಂಡು ತಕ್ಕ ಪಾಠ ಕಲಿಸಲು ಸೋಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯನವರ ಹಸ್ತದ ಗುರುತಿಗೆ ಮತ ನೀಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.ಹಿಂದುಳಿದ ವರ್ಗದವರಿಗೆ ವಿಶೇಷವಾದ ಕಾರ್ಯಕ್ರಮ ರೂಪಿಸಿ ಸಮಾಜದ ಎಲ್ಲಾ ವರ್ಗದವರನ್ನು ಮೇಲೆತ್ತುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಕಾಂಗ್ರೆಸ್ ಪಕ್ಷ ಜನ್ಮ ತಾಳಿದ್ದೇ ಎಲ್ಲಾ ಶೋಷಿತರು, ಬಡವರಿಗೆ ಅನ್ನ ನೀಡುವ ಕೆಲಸ ಮಾಡಲು. 4 ಭಾರಿ ನಗರಸಭಾ ಸದಸ್ಯರಾಗಿ, ಅಧ್ಯಕ್ಷರಾಗಿ ಹೆಚ್.ಡಿ ತಮ್ಮಯ್ಯ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ವಿನಂತಿಸಿದರು.ಪಕ್ಷದಲ್ಲಿ ನಾಲ್ಕು ಹುದ್ದೆಗಳು ಪ್ರಮುಖವಾಗಿವೆ. ಎಐಸಿಸಿ, ಕೆಪಿಸಿಸಿ, ಡಿ.ಸಿ.ಸಿ ಹಾಗೂ ಬ್ಲಾಕ್ ಕಾಂಗ್ರೆಸ್‌ನಲ್ಲಿ ಹೆಚ್.ಪಿ ಮಂಜೇಗೌಡರನ್ನು ಪಕ್ಷ ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿದೆ. ಈ ನಿಟ್ಟಿನಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಶಕ್ತಿ ತುಂಬಬೇಕೆ0ದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್ ವಿಜಯ್‌ಕುಮಾರ್ ಮಾತನಾಡಿ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜನಪರವಾದ 165 ಕಾರ್ಯಕ್ರಮಗಳ ಪೈಕಿ 162 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಎಲ್ಲಾ ಸಮಾಜದವರನ್ನು ಸಮಾನವಾಗಿ ಕಂಡ ಸರ್ಕಾರ ಕಾಂಗ್ರೆಸ್ ಪಕ್ಷ, ಆದರೆ ಬಿಜೆಪಿಯ ಭ್ರಷ್ಠಾಚಾರ, ಕೋಮುದಳ್ಳುರಿ, ಜಾತಿ ಜಾತಿ ಮಧ್ಯೆ ವಿಷ ಬೀಜ ಬಿತ್ತಿ ಸಂಘರ್ಷ ನಡೆಸುತ್ತಿದ್ದಾರೆ ಇವೆÀಲ್ಲವಕ್ಕೂ ತಿಲಾಂಜಲಿ ನೀಡಬೇಕು ಬದಲಾವಣೆ ಬಯಸುವುದಾದರೆ ಈ ಭಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ಮನವಿ ಮಾಡಿದರು.ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಮಾತನಾಡಿ ಈವರೆಗೆ ನಾನು ಗುತ್ತಿಗೆದಾರನಾಗಲಿಲ್ಲ ಶಾಸಕ ಸಿ.ಟಿ ರವಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿಲ್ಲ ಅವರ ಕುಟುಂಬ, ಭಾವಮೈದ ಉದ್ದಾರವಾದರು. ನಾನು ಎಂಬ ಅಹಂಕಾರ ಬಂದು ಜನರ ಬಗ್ಗೆ ಕೇವಲವಾಗಿ ಮಾತನಾಡುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಸ್ಥಳೀಯವಾಗಿ ನಿಮ್ಮ ಜೊತೆ ಸದಾ ಇರುವ ನಿಮ್ಮ ಸೇವೆಗೆ ಸಮರ್ಪಿಸಿಕೊಂಡ ವ್ಯಕ್ತಿಯಾದ ನನಗೆ ಮತ ನೀಡಬೇಕೆಂದು ವಿನಂತಿಸಿ ರಾಜ್ಯದ ಮಾಸ್ ಲೀಡರ್‌ಗಳಾದ ಸಿದ್ದರಾಮಯ್ಯ,ಹೆಚ್.ಡಿ ದೇವೇಗೌಡ, ಬಿ.ಎಸ್ ಯಡಿಯೂರಪ್ಪ ಇವರ ಬಗ್ಗೆ ಹಗುರವಾಗಿ ಮಾತನಾಡುವ ವ್ಯಕ್ತಿಯನ್ನು ತಿರಸ್ಕರಿಸಿ ಮನೆಗೆ ಕಳಿಸಬೇಕು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಗಾಯಿತ್ರಿ ಶಾಂತೇಗೌಡ, ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್ ದೇವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿದರು. ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಿತೈಷಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!