April 27, 2024

MALNAD TV

HEART OF COFFEE CITY

ಅಕಾಲಿಕ ಮಳೆಯಿಂದ ಹೈರಾಣಾದ ಬೆಳೆಗಾರರು

1 min read

ಚಿಕ್ಕಮಗಳೂರು : ಕಾಫಿನಾಡ ಮಲೆನಾಡು ಭಾಗದಲ್ಲಿ ಜನವರಿಯಲ್ಲೇ ಅಕಾಲಿಕ ಮಳೆ ಅಬ್ಬರ ಜೋರಾಗಿದ್ದು, ಕೈಗೆ ಬಂದ ಬೆಳೆ ಉಳಿಸಿಕೊಳಲು ರೈತರು ಪರದಾಡುವಂತಾಗಿದ್ದು, ಅಕಾಲಿಕ ಮಳೆಯಿಂದ ಕಂಗಾಲಾಗಿದ್ದಾರೆ.

 

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಮತ್ತಿಕಟ್ಟೆ, ನಿಡುವಾಳೆ, ಗುತ್ತಿ, ಭೈರಾಪುರ, ಕಂದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ಗಂಟೆಯಿಂದ ಧಾರಾಕಾರ ಮಳೆಯು ಸುರಿದಿದೆ. ಜನವರಿಲ್ಲೇ ಅಕಾಲಿಕ ಮಳೆ ಕಂಡು ಮಲೆನಾಡಿಗರು ಕಂಗಾಲಾಗಿದ್ದು,  ಈ ಮಳೆಯಿಂದ ಭತ್ತ ಅಡಿಕೆ ಕಾಫಿ ಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಮಳೆಯಿಂದ ರೈತರು, ಕೂಲಿ ಕಾರ್ಮಿಕರು, ಬೆಳೆಗಾರರು ಹೈರಾಣಾಗಿದ್ದಾರೆ. ಕಳೆದ ವರ್ಷ 2022ರಲ್ಲೂ ವರ್ಷ ಪೂರ್ತಿ ಮಳೆ ಸುರಿದಿತ್ತು, ಈ ವರ್ಷವೂ ಜನವರಿಯಲ್ಲೇ ಮಳೆ ಕಂಡು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದು, ಅಳಿದುಳಿದ ಬೆಳೆಯನ್ನೂ ಉಳಿಸಿಕೊಳ್ಳಲಾಗದೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!