May 5, 2024

MALNAD TV

HEART OF COFFEE CITY

ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೆ ಚಾಲಕ ಸಾವು

1 min read

.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದ ನಟರಾಜ್ ಎಂಬುವವರ ಪುತ್ರ ಹರೀಶ್ (28) ಮೃತ ದುರ್ದೈವಿ.
ಗುತ್ತಿಗೆ ಅಧಾರದಲ್ಲಿ ಟ್ರ್ಯಾಕ್ಟರ್ ಓಡಿಸುವ ಕೆಲಸ ಮಾಡುತಿದ್ದ ಹರೀಶ್ ಇಂದೂ ಬೆಳಿಗ್ಗೆ ಸಹ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಬಾರದೇ ಮೃತಪಟ್ಟಿದ್ದಾರೆ.

ಮೂಡಿಗೆರೆ ಸಮೀಪದ ಹಳೇಕೊಟೆ ಬಳಿಯಆರ್ ಎಸ್ಎಸ್ ತೋಟದ ಸಮೀಪಟ್ರ್ಯಾಕ್ಟರ್ ಚಾಲನೆ ಮಾಡುತ್ತಿರುವಾಗ ಹಳೆಯದಾದ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಬಾರದೆ ಇಳಿಜಾರಿಗೆ ಉರುಳಿದ ಪರಿಣಾಮ ಹರೀಶ್ ಅವರು ಮೃತಪಟ್ಟಿದ್ದಾರೆ.
ಹರೀಶ್ 45 ದಿನಗಳ ಹಿಂದಷ್ಟೇ ವಿವಾಹವಾಗಿದ್ದರು. ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಗಲಿದ ಗೆಳೆಯನನ್ನು ನೆನೆದು ಸ್ನೇಹಿತರು ಕಣ್ಣೀರಿಡುತ್ತಿದ್ದಾರೆ‌.
ಹರೀಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಡಿಗೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಪೊಲೀಸ್ ವಿಚಾರಣೆಯಲ್ಲಿ‌ ಹೆಚ್ಚಿನ‌ ಮಾಹಿತಿ‌ ತಿಳಿದು ಬರಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!