May 19, 2024

MALNAD TV

HEART OF COFFEE CITY

ಬೆಳಿಗ್ಗೆ8 ಗಂಟೆಗೆ ಎಸ್‍ಟಿಜೆ ಕಾಲೇಜಿನಲ್ಲಿ ವಿಧಾನಪರಿಷತ್ ಚುನಾವಣೆಯ ಮತಎಣಿಕೆ

1 min read

ಚಿಕ್ಕಮಗಳೂರು: ನಗರದ ಎಸ್‍ಟಿಜೆ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಸ್ಥಳೀಯ ಸಂಸ್ಥೆಯ ವಿಧಾನಪರಿಷತ್ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಒಟ್ಟು 14 ಟೇಬಲ್‍ಗಳನ್ನು ಹಾಕಲಾಗಿದ್ದು, 7 ಟೇಬಲ್‍ನಲ್ಲಿ ಮತ ಎಣಿಕೆ ಮಾಡಲಾಗುತ್ತದೆ. ಪ್ರತಿಟೇಬಲ್‍ಗೆ ಮೂರು ಮಂದಿ ಸಿಬ್ಬಂದಿಯಂತೆ ಒಟ್ಟು 21 ಜನರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ  ಮಾತನಾಡಿ, ನಾಳೆ ಬೆಳಿಗ್ಗೆ 7.30ಕ್ಕೆ ಅಭ್ಯರ್ಥಿಗಳು ಅಥವಾ ಏಜೆಂಟರ ಸಮ್ಮುಖದಲ್ಲಿ ಮತಪೆಟ್ಟಿಗೆಗಳನ್ನು ಇಡಲಾಗಿರುವ ಸ್ಟ್ರಾಂಗ್ ರೂಂ ಬಾಗಿಲು ತೆರೆಯಲಾಗುವುದು. ಅವುಗಳನ್ನೆಲ್ಲ ಒಂದು ಕೊಠಡಿಗೆ ತಂದು ಸಂಪೂರ್ಣವಾಗಿ ಕಲಸಲಾಗುತ್ತದೆ. ಇನ್ನೊಂದು ಕೊಠಡಿಯಲ್ಲಿ ಮತಎಣಿಕೆ ಕಾರ್ಯ ನಡೆಯುತ್ತದೆ ಎಂದರು.
ಒಂದು ಟೇಬಲ್‍ಗೆ 16 ಮತಪೆಟ್ಟಿಗೆಗಳ ಮತ ಎಣಿಕೆಗೆ ಬರುತ್ತವೆ. ಒಟ್ಟು 2410 ಮತಪತ್ರಗಳ ಮಿಕ್ಸಿಂಗ್ ಕಾರ್ಯ ಮುಗಿಸಲು ಕನಿಷ್ಟ 2-3 ಗಂಟೆಗಳ ಕಾಲಾವಕಾಶಬೇಕಾಗುತ್ತದೆ. ಒಟ್ಟು 16 ಸುತ್ತುಗಳಲ್ಲಿ ಮತ ಎಣಿಕೆ ನಡೆಯುತ್ತದೆ ಎಂದು ಮಾಹಿತಿ ನೀಡಿದರು.

ಅಸಿಂಧುಗೊಂಡಿರುವ ಮತಪತ್ರಗಳನ್ನು ಪ್ರತ್ಯೇಕಿಸಲಾಗುತ್ತದೆ. ಮತದಾನಮಾಡುವಾಗ ಬೇರೆ ಪೆನ್ನನ್ನು ಬಳಕೆಮಾಡಿದ್ದರೆ, ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಸಂಖ್ಯೆಯನ್ನು ನಮೂದಿಸದಿದ್ದರೆ ಅಂತಹ ಮತಗಳನ್ನು ಅಸಿಂಧುಗೊಳಿಸಲಾಗುವುದು. ಮೊದಲನೇ ಪ್ರಾಶಸ್ತ್ಯದ ಮತಗಳನ್ನು ಮೊದಲು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಏಜೆಂಟರುಗಳಿಗೆ ಗುರುತಿನಚೀಟಿ ನೀಡಲಾಗಿದೆ. ಗುರುತಿನ ಚೀಟಿ ಇಲ್ಲದೆ ಬರುವ ಏಜೆಂಟರುಗಳಿಗೆ ಮತಎಣಿಕೆ ಕೇಂದ್ರದಲ್ಲಿ ಪ್ರವೇಶನೀಡಲಾಗದು. ಏಜೆಂಟರುಗಳು ಒಂದು ಟೇಬಲ್‍ನಿಂದ ಮತ್ತೊಂದು ಟೇಬಲ್‍ಗೆ ಓಡಾಡಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದರು. ಮೊಬೈಲ್ ನಿಷೇಧ: ಅಭ್ಯರ್ಥಿಗಳಾಗಲಿ ಅಥವಾ ಏಜೆಂಟರುಗಳಿಗಾಗಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ.ಮತ ಎಣಿಕೆಗೂ ಮೊದಲು ಗೌಪ್ಯತೆಯನ್ನು ಓದಿಹೇಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

* ಮಾಸ್ಕ್ ಕಡ್ಡಾಯ

ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂತ್ರಗಳನ್ನು ತಪ್ಪದೆ ಪಾಲಿಸಬೇಕಾಗಿದೆ. ಮತಎಣಿಕೆ ಕೇಂದ್ರಕ್ಕೆ ಬರುವಾಗ ಮಾಸ್ಕಧರಿಸಿ, ಸ್ಯಾನಿಟೈಸರ್ ಹಚ್ಚಿಕೊಂಡು ಬರಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ನುಡಿದರು. ಅಪರ ಜಿಲ್ಲಾಧಿಕಾರಿ ರೂಪ, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಇದ್ದರು.
ಈಗಾಗಲೇ ಚುನಾವಣಾಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಹಾಗೂ ಇಬ್ಬರು ಪಕ್ಷೇತರರು ಸೇರಿದಂತೆ 5 ಮಂದಿ ಚುನಾವಣಾಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಕಂಡುಬರುವ ಸಾಧ್ಯತೆಗಳಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬುದು ಮಂಗಳವಾರ ಗೊತ್ತಾಗಲಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!