May 18, 2024

MALNAD TV

HEART OF COFFEE CITY

ಕಾಫಿನಾಡಿನಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬಗೆ ಸನ್ಮಾನ

1 min read

ಚಿಕ್ಕಮಗಳೂರು: ನನ್ನೂರಿನ ಮಕ್ಕಳು ಶಿಕ್ಷಣವಂತರಾಗಬೇಕೆoದು ಶಾಲೆ ನಿರ್ಮಾಣಕ್ಕೆ ಮುಂದಾದೆ. ಒಂದು ರೂಪಾಯಿ ಆದಾಯದಲ್ಲಿ ಹಸಿವನ್ನು ತಾಳಿಕೊಂಡು ಈ ಕಾಯಕಕ್ಕೆ ಮುಂದಾದೆ. ಇಂದು ನನ್ನೊಂದಿಗೆ ಸಾವಿರಾರು ಜನರು ಕೈಜೋಡಿಸಿದ್ದಾರೆ. ಅವರ ಋಣವನ್ನು ನಾನೆಂದು ಮರೆಯುವುದಿಲ್ಲ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಪ್ಪ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.  ನಗರದ ಸಹರಾ ಶಾದಿ ಮಹಾಲ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟ ಹಾಗೂ ವಿವಿಧ ಸಂಘಸoಸ್ಥೆಗಳಿoದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ಅತ್ಯಂತ ಬಡತನದಲ್ಲಿ ಬೆಳೆದವನು, ಮಂಗಳೂರಿನ ಬಸ್‌ನಿಲ್ದಾಣದಲ್ಲಿ ಕಿತ್ತಳೆ ಹಣ್ಣು ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ನನಗೆ ನನ್ನೂರಿನ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕೆಂಬ ಆಸೆ ಮನದಲ್ಲಿ ಮೂಡಿತು. ಕಿತ್ತಳೆ ಹಣ್ಣು ವ್ಯಾಪಾರದಲ್ಲಿ ಬಂದ ಹಣವನ್ನು ಶಾಲೆ ನಿರ್ಮಾಣಕ್ಕೆ ಮುಡುಪಿಟ್ಟೆ ಎಂದರು. ಸರ್ಕಾರಿ ಕಚೇರಿಗಳಿಗೆ ಅಲೆದು, ಉನ್ನತ ಅಧಿಕಾರಿಗಳನ್ನು ಭೇಟಿಮಾಡಿ ನನ್ನೂರಿಗೆ ಶಾಲೆಬೇಕೆಂದು ಅವರ ಮನವೊಲಿಸಿದ ನಂತರ ೧೯೯೯ರಲ್ಲಿ ನನ್ನೂರಿಗೆ ಸರ್ಕಾರಿ ಶಾಲೆ ಮಂಜೂರಾಯ್ತು ಆದರೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಕಟ್ಟಡ ಇರಲಿಲ್ಲ, ಆಗ ಅಲ್ಲೇ ಸಮೀಪದಲ್ಲಿದ್ದ ಮಸೀದಿಯಲ್ಲಿ ಮನವಿ ಮಾಡಿಕೊಂಡಾಗ ಅವರು ಒಪ್ಪಿ ಅಲ್ಲೇ ಪ್ರಥಮ ಭಾರೀಗೆ ೨೮ಮಕ್ಕಳೊಂದಿಗೆ ಶಾಲೆ ಆರಂಭವಾಯ್ತು ಎಂದು ಅಂದಿನ ದಿನಗಳನ್ನು ನೆನೆದರು.

ನನ್ನ ಮಗಳನ್ನು ಅದೇ ಶಾಲೆಗೆ ಸೇರಿಸಿದೆ. ಅಲ್ಲಿ ಎಸ್‌ಡಿಎಂಸಿ ಅಧ್ಯಕ್ಷನಾಗಿ ಶಾಲೆಗೆ ಸ್ವಂತ ಕಟ್ಟಡಕ್ಕಾಗಿ ಮತ್ತೇ ಸರ್ಕಾರಿ ಕಚೇರಿ ಅಲೆದಾಟದ ನಂತರ ಸರ್ಕಾರ ಸ್ವಂತ ಕಟ್ಟಡ ಮಂಜೂರು ಮಾಡಿತು. ಇದರೊಟ್ಟಿಗೆ ಅನೇಕ ದಾನಿಗಳ ನೆರವಿನೊಂದಿಗೆ ಶಾಲೆಯ ಸ್ವಂತ ಕಟ್ಟಡ ನಿರ್ಮಾಣವಾಯ್ತು. ಈ ನನ್ನ ಕಾರ್ಯಕ್ಕೆ ಅನೇಕರು ನನ್ನೊಟ್ಟಿಗೆ ಕೈಜೋಡಿ ಸಿದ್ದಾರೆ ಎಂದರು.ನಾನು ನಿಮ್ಮಂತೆ ಓದಿಲ್ಲ, ಬಡತನವು ಇತ್ತು. ನಮ್ಮೂರಿನ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದು ಎಂದು ನಾನು ಪಟ್ಟಶ್ರಮಕ್ಕೆ ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದೇಶದ ರಾಷ್ಟçಪತಿ, ಪ್ರಧಾನಮಂತ್ರಿ, ವಿತ್ತ ಸಚಿವೆ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪಡೆಯಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಹರೆಕಳ ಹಾಜಪ್ಪ ಅವರು ಅಕ್ಷರಜ್ಞಾನ ಬಲ್ಲವರಲ್ಲ, ಅವರ ಸರಳ ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸೇವೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿದೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಕಿತ್ತಳೆಹಣ್ಣು ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ ವಿದೇಶಿಗರೊಬ್ಬರು ಈ ಹಣ್ಣಿನ ಬೆಲೆಎಷ್ಟು ಎಂದು ಇಂಗ್ಲೀಷ್‌ನಲ್ಲಿ ಕೇಳಿದಾಗ ಹಾಜಪ್ಪ ಅವರು ಅರ್ಥ ವಾಗದೆ ಪಕ್ಕದಲ್ಲಿದ್ದವರಿಂದ ಕೇಳಿ ತಿಳಿದುಕೊಂಡರು. ಇದರಿಂದ ಬೇಸರಗೊಂಡ ಹಾಜಪ್ಪ ಅವರು ನನ್ನ ಪರಿಸ್ಥಿತಿ ನಮ್ಮೂರಿನ ಮಕ್ಕಳಿಗೆ ಬರಬಾರದು ಅವರು ಶಿಕ್ಷಣ ವಂತರಾಬೇಕು ಎಂದು ತಾವು ಮಾರಾಟ ಮಾಡುತ್ತಿದ್ದ ಕಿತ್ತಳೆ ಹಣ್ಣಿನಿಂದ ಬಂದ ಹಣ ದಿಂದ ಶಾಲೆ ಪ್ರಾರಂಭಿಸಲು ಶ್ರಮಿಸಿದರು. ೧೯೯೯ರಲ್ಲಿ ೧ನೇ ತರಗತಿ ಆರಂಭವಾಯ್ತು, ೨೦೧೧ರಲ್ಲಿ ಶಾಲಾಕಟ್ಟಡ ನಿರ್ಮಾಣವಾಯ್ತು ಎಂದರು.

ಹಾಜಪ್ಪ ಅವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ದೇಶದ ಶ್ರೇಷ್ಠ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಲಭಿಸಿದ ನಂತರ ಅವರ ಹೆಸರು ದೇಶ ವಿದೇಶಗಳಲ್ಲಿ ರಾರಾಜಿಸುತ್ತಿದೆ. ಹಾಜಪ್ಪ ಅವರಿಗೆ ವೇದಿಕೆ ಇರಲಿಲ್ಲ, ಆದರೆ ಅವ ಕಾಶವಿತ್ತು. ಅವರ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯಿಂದ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಪತ್ರಕರ್ತ ಗುರುವಪ್ಪ ಬಾಳೆಪುಣಿ ಮಾತನಾಡಿ, ಹಾಜಪ್ಪ ಅವರು ಜಾತಿ, ಧರ್ಮ ಮೀರಿ ಬೆಳೆದ ವ್ಯಕ್ತಿತ್ವದವರು. ಅವರ ಸರಳ ಜೀವನ, ಮುಗ್ಧಮನಸ್ಸು, ನಿಸ್ವಾರ್ಥ ಸೇವೆ ಗೆ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದಿದೆ ಎಂದರು.

ಆಸ್ತಿ, ಹಣ, ಸಂಪತ್ತಿನಿoದ ಯಾರು ದೊಡ್ಡವರಾಗಲು ಸಾಧ್ಯವಿಲ್ಲ, ಗುಣದಿಂದ ದೊಡ್ಡ ವರಾಗುತ್ತಾರೆ ಎನ್ನುವುದಕ್ಕೆ ಹಾಜಪ್ಪ ಅವರೇ ನಮ್ಮ ಮುಂದಿರುವ ನಿದರ್ಶನ, ಇವರ ಸಾಧನೆ ಮೂರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದೆ. ದೇಶ ವಿದೇಶಗಳಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅನೇಕ ಪ್ರಶಸ್ತಿಗಳು ಲಭಿಸಿವೆ ಇದಕ್ಕೆ ಅವರ ನಿಸ್ವಾರ್ಥ ಸೇವೆಯೇ ಕಾರಣ ಎಂದರು.

ಪದ್ಮಶ್ರೀ ಪ್ರಶಸ್ತಿ ಪಡೆಯಲು ಶಿಫಾರಸ್ಸು ಮಾಡುತ್ತಾರೆ. ಹಣದ ವ್ಯಯಕ್ಕೂ ಮುಂದಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಇಂತಹ ಎಲೆಮರೆ ಕಾಯಿಗಳಂತೆ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸಿ ಪದ್ಮಶ್ರೀ ನೀಡುತ್ತಿರುವುದು ಶ್ಲಾಘನೀಯ ಎಂದ ಅವರು ಈ ಕಾರ್ಯ ಹೀಗೆ ಮುಂದೂವರೆಯಲಿ ಎಲೆಮರೆಕಾಯಿ ಯಂತೆ ಸೇವೆ ಸಲ್ಲಿಸುತ್ತಿರುವರನ್ನು ಗುರುತಿಸುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಹಾಜಪ್ಪ ಅವರನ್ನು ಸನ್ಮಾನಿಸಿ ದರು. ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಕೆ.ಇಬ್ರಾಹಿಂ, ಮುಖಂಡ ಜಾಕೀರ್ ಹುಸೇನ್, ಕಲ್ಕಟ್ಟೆ ಪುಸ್ತಕ ಮನೆ ನಾಗರಾಜ್ ಕಲ್ಕಟ್ಟೆ ಸೇರಿದಂತೆ ಅನೇಕರು ಇದ್ದರು. ಅಬುಬೂಕರ್ ಸಿದ್ದಿಕ್ಕಿ ಸ್ವಾಗತಿಸಿದರು. ಶಲೀ ಅಸನ್ ಪ್ರಾರ್ಥಿಸಿದರು. ಅಬ್ಬಾಸ್ ಕಿರು ಗುಂದ ನಿರೂಪಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!