May 5, 2024

MALNAD TV

HEART OF COFFEE CITY

ಬಿ.ಎಸ್.ಪಿ ಧನಂಜಯ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

1 min read

-ಹಿರೇಮಗಳೂರಿನ ಬಿ.ಎಸ್.ಪಿ ಮುಖಂಡರಾದ ಧನಂಜಯ್ ಮತ್ತು ಅನೇಕ ಯುವಕರನ್ನು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಶಾಸಕ ಸಿ.ಟಿ.ರವಿ ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ನ0ತರ ನಡೆದ ಸಭೆಯಲ್ಲಿ ಸಿ.ಟಿ ರವಿ ಮಾತನಾಡಿ ಭಾರತೀಯ ಜನತಾ ಪಾರ್ಟಿ ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಪಾರ್ಟಿ, ನಮ್ಮನ್ನು ಸಂವಿಧಾನ ವಿರೋಧಿ ಎಂದು ನಮ್ಮ ವಿರುದ್ಧ ಅಪಪ್ರಚಾರ ಮಾಡುವವರು ನಮ್ಮನ್ನು ಗಮನಿಸಬೇಕು, ಸಂವಿಧಾನವನ್ನು ಗೌರವಿಸುವುದನ್ನು ದೇಶದಲ್ಲಿ ಆಚರಣೆಗೆ ತಂದದ್ದು ಭಾರತೀಯ ಜನತಾ ಪಾರ್ಟಿ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂವಿದಾನಕ್ಕೆ ನಮಿಸಿ ನಂತರ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು, ಅಂಬೇಡ್ಕರ್ ರವರ ಪಂಚ ದಾಮಗಳನ್ನು ಪಂಚ ತೀರ್ಥವನ್ನಾಗಿ ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ ಎಂದರು.ಬಿಜೆಪಿ ಸರ್ಕಾರವನ್ನು ಅಂಬೇಡ್ಕರ್ ವಿರೋಧಿ ಎಂದು ಹೇಳುವ ಕಾಂಗ್ರೆಸ್ ಪಕ್ಷ ವಾಸ್ತವಿಕವಾಗಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರನ್ನು ಲೋಕಸಭೆಗೆ ಬರದಂತೆ ತಡೆದು ವಿರೋಧಿಸಿದ್ದು ಕಾಂಗ್ರೆಸ್ ಪಾರ್ಟಿ, ಅವರು ಬದುಕಿದ್ದಾಗ ಅಪಮಾನಿಸಿ ಸತ್ತ ನಂತರ ಅವರಿಗೆ ಸಲ್ಲಬೇಕಾದ ಗೌರವವನ್ನು ಕೊಡಲಿಲ್ಲ ಎಂದರು.

ಕರ್ನಾಟಕ ರಾಜ್ಯದಲ್ಲಿ ಎಸ್.ಇ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಎಸ್.ಟಿ ಮೀಸಲಾತಿಯನ್ನು ಶೇ 3 ರಿಂದ 7ಕ್ಕೆ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ, ಜತೆಗೆ ಒಳ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯದ ಸಮಪಾಲನ್ನು ಕೊಡಲಾಗಿದ್ದು, ಬಡವರ್ಗದವರಿಗೆ ಶಕ್ತಿ ತುಂಬುವ ಸಲುವಾಗಿ ಹಲವಾರು ಯೋಜನೆಗಳನ್ನು ತರಲಾಗಿದೆ ಜನದನ್ ಖಾತೆ, ಗರೀಬಿ ಕಲ್ಯಾಣ್ ಅನ್ನ ಯೋಜನೆ, ಗ್ಯಾಸ್ ಸಂಪರ್ಕ, ಪೌರ ಕಾರ್ಮಿಕರಿಗೆ ಖಾಯಂ ಕೆಲಸ ಕಲ್ಪಿಸುವ ಹಾಗೂ ಉಚಿತ ಕೋವಿಡ್ ಇಂಜೆಕ್ಷನ್, ಆಯುಷ್ ಮಾನ್ ಭಾರತ್ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆ, ಸೌಭಾಗ್ಯ ಯೋಜನೆಯನ್ನು ಜಾರಿಗೆ ತಂದದ್ದು ಬಿಜೆಪಿ ಸರ್ಕಾರ ಎಂದರು.

ಬಿಜೆಪಿ ಪಕ್ಷ ಬಡವರ, ದಲಿತರ, ಮೀಸಲಾತಿ, ಸಾಮಾಜಿಕ ನ್ಯಾಯ ಮತ್ತು ಅಂಬೇಡ್ಕರ್ ರವರ ನ್ಯಾಯವನ್ನು ಎತ್ತಿ ಹಿಡಿಯುವ ಪರವಾದ ಪಕ್ಷ, ಚಿಕ್ಕಮಗಳೂರು ಜಿಲ್ಲೆ, ರಾಜ್ಯ ಮತ್ತು ದೇಶದಲ್ಲಿ ಬಡವರು ಮತ್ತು ದಲಿತರು ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ, ಸಾಮಾಜಿಕ ನ್ಯಾಯ ನಮ್ಮ ಬದ್ಧತೆ, ಹಾಲಿನ ಜೊತೆ ಜೇನು ಸೇರಿದಾಗ ಹಾಲಿನ ರುಚಿ ಹೆಚ್ಚಿಸುವ ಹಾಗೆ, ಹಾಲುಜೇನಿನಂತೆ ಪಕ್ಷದ ಸಾಮರ್ಥ್ಯವನ್ನು ಹೆಚ್ಚಲಿ, ಚುನಾವಣೆ ಎನ್ನುವುದು ಜನಾಂದೋಲನದ ಪ್ರಜಾಪ್ರಭುತ್ವದ ಹಬ್ಬ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ ಮಾತನಾಡಿ ಭಾರತೀಯ ಜನತಾ ಪಾರ್ಟಿಯ ಸಿ.ಟಿ.ರವಿ ಅವರ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಹಿರೇಮಗಳೂರಿನ ಬಿ.ಎಸ್.ಪಿ ಪಕ್ಷದ ಧನಂಜಯ್ ಮತ್ತು ಬೆಂಬಲಿಗರು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದು, ನಮ್ಮ ನಾಯಕರಾದ ಸಿ.ಟಿ.ರವಿ ರವರ ಕನಸ್ಸಿನಂತೆ ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್, ಸರ್ವ ಸ್ಪರ್ಶಿ ಸರ್ವ ವ್ಯಾಪಿ ಎಂಬುದು ಅವರ ಜೀವನದ ಆಚರಣೆ, ಎಲ್ಲರನ್ನು ನಮ್ಮವರು ಎಂದು ಹೃದಯದಿಂದ ಪ್ರೀತಿ ಮಾಡುವವರು ಎಂದರು.
ಬಿಜೆಪಿಗೆ ಸೇರ್ಪಡೆಗೊಂಡ ಧನಂಜಯ್ ಮಾತನಾಡಿ ಹಿರೇಮಗಳೂರಿನ ರೇವನಾಥ್, ಕೇಶವಮೂರ್ತಿ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ, ಶಾಸಕ ಸಿ.ಟಿ.ರವಿ ಅವರ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳಲಾಗಿದೆ, ಹಿರೇಮಗಳೂರಿನ ಕೆರೆ, ಬಾವಿ, ದೇವಸ್ಥಾನ, ಸಮುದಾಯ ಭವನ ಮತ್ತು ಆಸ್ಪತ್ರೆ ಅಭಿವೃದ್ಧಿಗಾಗಿ ಪ್ರಾಮುಖ್ಯತೆಯನ್ನು ನೀಡಿದ್ದಾರೆ, ಅವರ ಅಭಿವೃದ್ಧಿ ಕೆಲಸದಲ್ಲಿ ನಾವು ಕೈ ಜೊಡಿಸಿ ಕೆಲಸವನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಮಧುಮುಮಾರ್ ರಾಜ್ ಅರಸ್, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಹಿರೇಮಗಳೂರಿನ ರೇವನಾಥ್, ಕೇಶವಮೂರ್ತಿ ಶಾಂತಕುಮಾರ್, ಮಲ್ಲೇಶ್, ರವಿಕುಮಾರ್, ವಿಜಯ್‌ಕುಮಾರ್, ರಾಜು, ವಿಶ್ವನಾಥ್, ರಾಜಣ್ಣ, ರಾಮಬಸವೇಗೌಡ, ಗೋಪಾಲ್, ಶಾಂತಣ್ಣ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!