May 18, 2024

MALNAD TV

HEART OF COFFEE CITY

ಬಜರಂಗದಳ ಸ್ಥಾಪನ ದಿನ ಆಚರಣೆ

1 min read
Bajrang Dal's Founding Day Celebration

ಚಿಕ್ಕಮಗಳೂರು : ಬಜರಂಗದಳದ ಸ್ಥಾಪನ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಹನುಮಂತಪ್ಪ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಸಹಿ ಹಂಚಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್ ವಿಶ್ವದಲ್ಲಿ ಇರುವ ಎಲ್ಲಾ ಹಿಂದೂಗಳನ್ನು ಜಾಗೃತಿ ಮೂಡಿಸುವ ಮೂಲಕ ಹಿಂದೂ ಧರ್ಮವನ್ನು ಉಳಿಸಿ ಹಿಂದುತ್ವದ ಆಧಾರದ ಮೇಲೆ ಹಿಂದೂ ರಾಷ್ಟ್ರವನ್ನು ಕಟ್ಟಬೇಕು ಎಂಬ ಗುರಿಯೊಂದಿಗೆ ವಿಶ್ವ ಹಿಂದೂ ಪರಿಷತ್ 1964 ಕೃಷ್ಣ ಜನ್ಮಾಷ್ಟಮಿಯ ದಿನ ಸ್ಥಾಪನೆಯಾಯಿತು. ಅನ್ಯ ಕೋಮಿನವರಿಂದ ಹಿಂದೂ ಯುವತಿಯರ ಮತಾಂತರ, ಹಿಂದುಗಳ ಶ್ರದ್ಧಾ ಕೇಂದ್ರಗಳು ಶ್ರದ್ಧಾ ಬಿಂದುಗಳಾದOತಹ ದೇವಸ್ಥಾನಗಳನ್ನು ದ್ವಂಸ, ಗೋವುಗಳನ್ನು ಹತ್ಯೆ, ಈ ಧರ್ಮ ವಿರೋಧಿ ಕೃತ್ಯಗಳನ್ನು ಗಮನಿಸಿ, ಇದನ್ನು ತಡೆಯುವ ಉದ್ದೇಶದಿಂದ ವಿಶ್ವಹಿಂದೂ ಪರಿಷತ್ 1984 ಅಕ್ಟೋಬರ್ 8 ರಂದು ಯುವಕರ ಪಡೆಯನ್ನು ಸ್ಥಾಪಿಸಿತು. ಆ ಯುವಕರ ಪಡೆಯೇ ಬಜರಂಗದಳವಾಗಿದೆ. ಹುಟ್ಟಿದ ಕೆಲವೇ ದಿನಗಳಲ್ಲಿ ಸಾವಿರಾರು ವರ್ಷದ ಕಳಂಕಿತ ಕಟ್ಟಡವನ್ನು, ದ್ವಂಸಮಾಡಿ ಪುಟ್ಟದೊಂದು ರಾಮ ಮಂದಿರವನ್ನು ನಿರ್ಮಾಣ ಮಾಡಿತು, ಇಷ್ಟು ಮಾತ್ರವಲ್ಲದೆ ದೇಶದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಮತಾಂತರ, ಗೋಹತ್ಯೆ ಹಾಗೂ ಹಿಂದೂ ವಿರೋಧಿ ಮನಸ್ಥಿತಿಯ ವಿರುದ್ಧ ಇಡೀ ದೇಶಾದ್ಯಂತ ಹೋರಾಟವನ್ನು ಮಾಡುತ್ತಿದೆ ಎಂದು ಹೇಳಿದ್ರು.

Bajrang Dal's Founding Day Celebration

ಈ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ, ಜಿಲ್ಲಾ ಸಹ ಕಾರ್ಯದರ್ಶಿ ರಂಗನಾಥ್, , ನಗರ ಅಧ್ಯಕ್ಷ ಶಿವಣ್ಣ, ನಗರ ಉಪಾಧ್ಯಕ್ಷ ದೇವು, ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುರು ನಗರ ಸಂಯೋಜಕ ಶ್ಯಾಮ್ ಗೌಡ, ನಗರ ಸಹ ಸಂಯೋಜಕ ಮಂಜು ನಗರ ಸಂಪರ್ಕ ಪ್ರಮುಖ್ ಪ್ರಸಾದ್ ಕೋಟೆ ಮುಂತಾದವರಿದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!