May 19, 2024

MALNAD TV

HEART OF COFFEE CITY

ಆ.14ರಂದು ಮೆಗಾ ಲೋಕ್ ಅದಾಲತ್

1 min read

ಚಿಕ್ಕಮಗಳೂರು: ಜಿಲ್ಲಾ ನ್ಯಾಯಾಲಯದಲ್ಲಿ ಬಾಕೀ ಇರುವ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆ.14ರಂದು ಮೆಗಾಲೋಕ್ ಅದಾಲತ್ ಆಯೋಜಿಸಲಾ ಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನಾಯಾಧೀಶರಾದ ಶುಭಗೌಡರ್ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೆಗಾ ಅದಾಲತ್ ರಾಜ್ಯಾದ್ಯಂತ ನಡೆಯುತ್ತಿದ್ದು, ಈ ಮೆಗಾ ಲೋಕ್ ಅದಾಲತ್‍ನಲ್ಲಿ ನೇರವಾಗಿ ಅಥವಾ ಆನ್‍ಲೈನ್, ವಿಡೀಯೋ ಕಾನ್ಪರೆನ್ಸ್, ಇ-ಮೇಲ್, ಎಸ್‍ಎಂಎಸ್, ವಾಟ್ಸ್‍ಆಪ್, ಎಲೆಕ್ಟ್ರಾನಿಕ್ ಮೋ ಡ್ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.ಅದಾಲತ್‍ನಲ್ಲಿ ಭಾಗವಹಿಸುವ ಪಕ್ಷಗಾರರಿಗೆ ನ್ಯಾಯಸಮ್ಮತವಾಗಿ ಪ್ರಕರಣ ಇತ್ಯಾರ್ಥ ಗೊಳಿಸುವುದರಿಂದ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದ ಅವರು ತ್ವರಿತಗತಿಯಲ್ಲಿ ಪರಿಹಾರ ದೊರಕುತ್ತದೆ. ಸಮಯ ಮತ್ತು ಬಾಂಧವ್ಯಗಳು ಉಳಿಯು ತ್ತದೆ ಎಂದರು.ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 14,179 ಸಿವಿಲ್ ಪ್ರಕರಣ, 17,250 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ 31,433 ಪ್ರಕರಣಗಳು ಬಾಕೀ ಇದ್ದು, ಅದಾಲತ್‍ನಲ್ಲಿ ಇತ್ಯರ್ಥಪಡಿಸಬಹುದಾಗಿದೆ ಎಂದ ಅವರು, 11,774 ಪ್ರಕರಣಗಳನ್ನು ಅದಾಲತ್‍ನಲ್ಲಿ ಇತ್ಯರ್ಥಗೊಳಿಸಲು ಗುರುತಿಸಲಾಗಿದ್ದು, 3,347 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿ ಕೊಳ್ಳಲಾಗಿದೆ ಎಂದರು ತಿಳಿಸಿದರು.

ಮೆಗಾ ಲೋಕ್ ಅದಾಲತ್‍ನಲ್ಲಿ 170 ಕ್ರಿಮಿನಲ್ ಪ್ರಕರಣ, 804 ಎನ್‍ಐ ಕಾಯ್ದೆ, ಪ್ರಕರಣಗಳು, 148 ಬ್ಯಾಂಕ್ ಪ್ರಕರಣಗಳು, 93 ಹಣವಸೂಲಿ ಪ್ರಕರಣ, 232 ಮ್ಯಾಕ್ಟ್ ಪ್ರಕರಣಗಳು, 13ಉದ್ಯೋಗದ ಪರಿಹಾರ, 15ಕಾರ್ಮಿಕ ವ್ಯಾಜ್ಯಗಳು, 55 ಎಮ್‍ಎಮ್ ಡಿಆರ್ ಕಾಯ್ದೆ ಸಂಬಂಧಿತ ಪ್ರಕರಣ, 02 ಭೂ ವಶೀಕರಣ, 380 ಭೂ ವಿಭಾಗೀಯ ಪ್ರಕರಣ, 239 ಎಕ್ಸಿಕ್ಯೂಷನ್ ಪ್ರಕರಣ, 282 ಇತರೆ ಸಿವಿಲ್ ಪ್ರಕರಣ, 35 ಇತರೆ ಪ್ರಕರಣಗಳು, 56 ಜನನ ಮರಣ ಪ್ರಕರಣಗಳು, 339 ಮೋಟಾರ್ ಕಾಯ್ದೆ ಅದಾಲತ್ ನಲ್ಲಿ ಇತ್ಯಾರ್ಥಪಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.ಅಪಘಾತಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ವಿಮಾ ಕಂಪನಿಗಳು ಮತ್ತು ಬ್ಯಾಂಕ್‍ಗಳೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಪ್ರಕರಣಗಳ ಇತ್ಯರ್ಥಕ್ಕೆ ಯಾವುದೇ ಗುರಿ ನಿಗದಿಪಡಿಸಿಲ್ಲ ಎಂದ ಅವರು ಎಷ್ಟೇ ಪ್ರಕರಣಗಳು ಬಂದರೂ ವಿಚಾರಣೆ ನಡೆಸಲಾಗುವುದು ಎಂದರು. ಸಾರ್ವಜನಿಕರು ಈ ಮೆಗಾ ಲೋಕ್ ಅದಾಲತ್‍ನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಪ್ರಧಾನ ಸಿವಿಲ್ ನ್ಯಾಯಾ ಧೀಶ ವೀರಣ್ಣಸೋಮಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್ ಸೋಮ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಟಿ ಥೋಮಸ್ ಇದ್ದರು.

 

ಮಾರ್ಚ್ 27 ರಂದು ಮೆಘ ಲೋಕ್ ಅದಾಲತ್

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!