May 20, 2024

MALNAD TV

HEART OF COFFEE CITY

ಕೃಷಿ ಅಭಿವೃದ್ಧಿ ಬ್ಯಾಂಕ್‌ಗಳ ಮೂಲಕ ಹೆಚ್ಚಿನ ಪ್ರಮಾಣದ ಸಾಲ ನೀಡಲು ಕ್ರಮ: ಮಹೇಶ್

1 min read

ಚಿಕ್ಕಮಗಳೂರು-ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲು ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಗ್ರಾಮೀಣ ಅಭಿವೃದ್ಧಿ ಕೃಷಿ ಬ್ಯಾಂಕ್‌ಗಳಿಗೆ ಪಿಕಾರ್ಡ್ ಬ್ಯಾಂಕ್‌ಗಳ ಜಿಲ್ಲಾ ನಿರ್ದೇಶಕರಾದ ಈಶ್ವರಹಳ್ಳಿ ಮಹೇಶ್ ಅವರು ಕರೆ ನೀಡಿದರು.ಅವರು ಇಂದು ಇಲ್ಲಿನ ಪಿ.ಸಿ.ಎ.ಆರ್.ಡಿ ಬ್ಯಾಂಕ್ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಪಿಕಾರ್ಡ್ ಬ್ಯಾಂಕುಗಳ ಜಿಲ್ಲಾಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಎಂಟು ಕೃಷಿ ಮತ್ತು ಪ್ರಾಥಮಿಕ ಅಭಿವೃದ್ಧಿ ಬ್ಯಾಂಕ್ ಗಳಿದ್ದು ಎಲ್ಲಾ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು ಈವರೆಗೆ ಜಿಲ್ಲೆಯ ಎಂಟು ಬ್ಯಾಂಕುಗಳಲ್ಲಿ ಒಟ್ಟು 18.09 ಕೋಟಿ ರೂ ಕೃಷಿ ಅಭಿವೃದ್ಧಿ ಸಾಲ ನೀಡಲಾಗಿದೆ ಎಂದರು.ಇದೀಗ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ಹಾಗೂ ಶೇ. ಮೂರರ ಬಡ್ಡಿ ದರದಲ್ಲಿ 15 ಲಕ್ಷ ದವರೆಗೆ ಕೃಷಿ ಸಾಲ ನೀಡಲು ಘೋಷಣೆ ಮಾಡಿದ್ದು ಅದರಂತೆ ಎಲ್ಲಾ ಬ್ಯಾಂಕಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

 

ಇಲ್ಲಿನ ಪಿ.ಸಿ.ಎ.ಆರ್.ಡಿ ಬ್ಯಾಂಕ್ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ ಈ ಬ್ಯಾಂಕ್ ಮೂಲಕ ಎಲ್ಲಾ ರೈತರಿಗೆ ಅಗತ್ಯವಿರುವಷ್ಟು ಸಾಲ ಮಂಜೂರು ಮಾಡಲಾಗಿದ್ದು ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ವಸೂಲತಿಯಲ್ಲಿ ಉತ್ತಮ ಸಾಧನೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ನೆರವು ನೀಡುವುದಾಗಿ ಹೇಳಿದರು.
ಡಿಡಿಎಂ ನಬಾರ್ಡ್ನ ಪ್ರತಾಪ್ ಮಾತನಾಡಿ ಈ ವರ್ಷ ಜಿಲ್ಲೆಯ ಎಂಟು ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕುಗಳ ಮೂಲಕ 18.09 ಕೋಟಿ ಸಾಲ ನೀಡಲು ಗುರಿ ಹೊಂದಿದ್ದು ಜೂನ್ ಅಂತ್ಯದವರೆಗೆ 2.5 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ ಸಾಲ ಮರುಪಾವತಿಗೆ ಹೆಚ್ಚು ಕ್ರಮ ವಹಿಸಬೇಕಾಗಿದ್ದು ಮರುಪಾವತಿಯಾದ   ಮೊತ್ತಕ್ಕೆ ತಕ್ಕಂತೆ ನಬಾರ್ಡ್ ನಿಂದ ಕೃಷಿ ಬ್ಯಾಂಕುಗಳಿಗೆ ಸಾಲದ ನೆರವು ದೊರೆಯಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಳಸೆ ಶಿವಣ್ಣ, ನಯನ, ರಂಗನಾಥ್, ನಟರಾಜ್, ರಾಮಣ್ಣಗೌಡ, ಪೀಕರ್ಡ್ ಬ್ಯಾಂಕ್‌ಗಳ ಜಿಲ್ಲಾ ವ್ಯವಸ್ಥಾಪಕರಾದ ಪುಟ್ಟರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!