May 18, 2024

MALNAD TV

HEART OF COFFEE CITY

ಸದೃಢ, ಸುಭದ್ರ ಸರ್ಕಾರ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ : ಸಿದ್ದರಾಮಯ್ಯ

1 min read

ಚಿಕ್ಕಮಗಳೂರು-ಸಖರಾಯಪಟ್ಟಣ- ಜನರ ಉತ್ಸಾಹ ಕಾರ್ಯಕರ್ತರ ಶ್ರಮ ನೋಡಿದರೆ ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಪ್ರತಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ದೃಢವಿಶ್ವಾಸ ವ್ಯಕ್ತಪಡಿಸಿದರು.ಅವರು ಇಂದು ಸಖರಾಯಪಟ್ಟಣದಲ್ಲಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಡಿ ತಮ್ಮಯ್ಯ ಪರವಾಗಿ ಮತಯಾಚನೆ ಮಾಡಿ ನಂತರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದರು.ಈ ಕ್ಷೇತ್ರದಲ್ಲಿ ಸಿ.ಟಿ ರವಿ ಕಳೆದ 20 ವರ್ಷಗಳಿಂದ ಸೋಲಿಸುವವರೇ ಇಲ್ಲ ಎಂದು ಮೆರೆಯುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಅವನೆಷ್ಟು ಭ್ರಷ್ಠ ಎಂದು ಹೆಚ್.ಡಿ ತಮ್ಮಯ್ಯಗೆ ಗೊತ್ತಿದೆ. ಲೂಟಿ ರವಿ ಎಂದು ಜನ ತೀರ್ಮಾನಿಸಿದ್ದಾರೆ ಅವರ ರಾಜಕೀಯ ಜೀವನ ಈ ಚುನಾವಣೆಯಲ್ಲಿ ಅಂತ್ಯ ಆಗಲಿದೆ ಎಂದು ಭವಿಷ್ಯ ನುಡಿದರು.ವಿಧಾನ ಸಭೆಗೆ ಬರಬೇಕೆಂದು ಗಾಯಿತ್ರಿ ಶಾಂತೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ನೀನು ವಿಧಾನ ಪರಿಷತ್ ಸದಸ್ಯೆ ಆಗೇ ಆಗುತ್ತೀಯ ಎಂದು ಸಲಹೆ ನೀಡಿದೆ. ಇವರು ಸೇರಿದಂತೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಹೆಚ್.ಡಿ ತಮ್ಮಯ್ಯ ಖಂಡಿತವಾಗಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.ಸಿ.ಟಿ ರವಿಗೆ ನಾಲಿಗೆ ಹಿಡಿತ ಇಲ್ಲ ಜೊತೆಗೆ ಸಂಸ್ಕøತಿಯೂ ಇಲ್ಲ ಬಾಯಿಗೆ ಬಂದಂತೆ ಮಾತನಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ನನ್ನ ರಾಜಕೀಯ ಜೀವನದಲ್ಲಿ ಅಪ್ಪಟ ಜಾತ್ಯಾತೀತವಾಗಿದ್ದೇನೆ. ಎಲ್ಲಾ ಧರ್ಮ ಜಾತಿಯವರನ್ನು ಸಮಾನವಾಗಿ ಕಾಣುವುದನ್ನು ಮೈಗೂಡಿಸಿಕೊಂಡಿದ್ದೇನೆ ಏಕೆಂದರೆ ನಾವೆಲ್ಲಾ ಮನುಷ್ಯರು ಎಂದು ವಿಶ್ಲೇಷಿಸಿದರು.ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತಿ ಸಮಾಜ ಒಡೆಯುವುದು ದ್ರೋಹದ ಕೆಲಸ ಸರ್ವಜನಾಂಗದವರಾದ ನಾವೆಲ್ಲಾ ಭಾರತೀಯರು ಆದರೆ ಮೋದಿಯವರು ಹೇಳುತ್ತಾರೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಹೇಳುವುದು ಒಂದು ಮಾಡುವುದು ಒಂದು ನರೇಂದ್ರ ಮೋದಿಯವರೆ, ಬಸವರಾಜ್‍ಬೊಮ್ಮಾಯಿಯವರೆ ಮುಸಲ್ಮಾನರು, ಕ್ರಿಶ್ಚಿಯನ್ನರು ಈ ರಾಜ್ಯದಲ್ಲಿ ಇದ್ದಾರೆ, ಅವರಿಗೆ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ ಹೀಗೆ ಹೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬಿಜೆಪಿಯನ್ನು ಸೋಲಿಸಬೇಕೆಂಬ ಇಚ್ಚೆ ಇದ್ದರೆ ಮುಸಲ್ಮಾನರು ಜೆಡಿಎಸ್‍ಗೆ ಮತ ಹಾಕಬೇಡಿ ಎಲ್ಲ ಸಮುದಾಯದ ಮತ ಕಾಂಗ್ರೆಸ್ ಅಭ್ಯರ್ಥಿಗೆ ನೀಡಬೇಕು ಜೆಡಿಎಸ್‍ಗೆ ಮತ ಹಾಕಿದರೆ ಅದು ಬಿಜೆಪಿಗೆ ಹೋಗುತ್ತದೆ. ಸಿ.ಟಿ ರವಿ ನನ್ನನ್ನು ಸಿದ್ದರಾಮುಲ್ಲಾಖಾನ್ ಎಂದು ಕರೆಯುತ್ತಾರೆ ನಾನು ಹಿಂದು ಅಲ್ಲವ ಸಿ.ಟಿ ರವಿ ಒಬ್ಬನೇ ನಾ ಹಿಂದು ಧರ್ಮದಲ್ಲಿ ಹುಟ್ಟಿದ್ದಾನೆಯೇ ಗಾಂಧಿ, ಅಂಬೇಡ್ಕರ್, ಸ್ವಾಮಿವಿವೇಕಾನಂದರು ಹೇಳಿದ ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಈ ಇತಿಹಾಸ ಗೊತ್ತಿಲ್ಲದ ಸಿ.ಟಿ ರವಿಗೆ ಮನೆಗೆ ಕಳಿಸಿ ಪಾಠ ಕಲಿಸಲು ಕಾಂಗ್ರೆಸ್‍ಗೆ ಮತ ನೀಡಿ ಹೆಚ್.ಡಿ ತಮ್ಮಯ್ಯನನ್ನು ವಿಧಾನ ಸಭೆಗೆ ಬರುವಂತೆ ಮಾಡಲು ಮನವಿ ಮಾಡಿದರು.

 

ಹಿಂದೆ ಜೆಡಿಎಸ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ಸ್ಮರಿಸಿದ ಸಿದ್ದರಾಮಯ್ಯ ನಂತರದಲ್ಲಿ ಮೂವರು ಮುಖ್ಯ ಮಂತ್ರಿಗಳಾದರು ಸುಭದ್ರ ಸರ್ಕಾರ ನೀಡಲು ಆಗಲಿಲ್ಲ 2018 ರಲ್ಲಿಯೂ ಅತಂತ್ರ ವಿಧಾನ ಸಭೆಗೆ ಜನಾದೇಶವಾಯಿತು ಆದರೆ ಈ ಭಾರಿ ಅಭಿವೃದ್ದಿಗಾಗಿ ಜನಪರವಾದ ಸುಭದ್ರ ಸದೃಢ ಕಾಂಗ್ರೆಸ್ ಸರ್ಕಾರ ರಚಿಸಲು ಸ್ಪಷ್ಠ ಬಹುಮತ ಕೊಡಿ ಎಂದು ವಿನಂತಿಸಿದರು.ರಾಜ್ಯದ ಅಭಿವೃದ್ದಿಗಾಗಿ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬರಬೇಕೆಂದು ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ, ನಾವು ಕೊಟ್ಟ ಭರವಸೆಗಳನ್ನು ಪೂರ್ವ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತಂದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಆದರೆ ಬಿಜೆಪಿ ಭರವಸೆ ಈಡೇರಿಸದೆ ಜನರಿಗೆ ವಚನ ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ 24 ಗಂಟೆಯಲ್ಲಿ ಅನುಷ್ಠಾನಕ್ಕೆ ತಂದು ಜಾರಿ ಮಾಡಲು ಬದ್ದರಾಗಿದ್ದೇವೆ ಎಂದು ಹೇಳಿದರು.
ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ ಈಗಿರುವ ಬಿಜೆಪಿ ಸರ್ಕಾರದ ಭ್ರಷ್ಠಾಚಾರದಿಂದ ಬೇಸತ್ತು ಮತದಾರರು ಜನಪರವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಬದಲಾವಣೆ ತರಬೇಕೆಂದು ಮತದಾರರು ಬಯಸಿದ್ದು ಚಿಕ್ಕಮಗಳೂರು ಕ್ಷೇತ್ರವೂ ಸೇರಿದಂತೆ ಜಿಲ್ಲೆಯಲ್ಲಿ ಬದಲಾವಣೆಗೆ ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಿದ್ದಾರೆ ಅಲ್ಲದೆ ಇಲ್ಲಿಯವರೆಗೆ ಕಾಂಗ್ರೆಸ್ ಪರವಾಗಿಲ್ಲದ ಅನೇಕ ಸಮುದಾಯದವರು ಭಾಗವಹಿಸುತ್ತಿರುವುದು ನೋಡಿದರೆ ನಿಶ್ಚಳ ಬಹುಮತದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಎಂದರು.
ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಿ.ಪಿ.ಐ. ಸೇರಿದಂತೆ ಎಲ್ಲಾ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿರುವುದರಿಂದ 20 ವರ್ಷಗಳ ನಂತರ ಈ ವಿಧಾನ ಸಭಾಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಹಜ ವಾತಾವರಣ ಮಾಡಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.ಬೆಲೆ ಏರಿಕೆ, ನಿರುದ್ಯೋಗ ಈ ಚುನಾವಣೆಯಲ್ಲಿ ದೊಡ್ಡ ವಿಚಾರವಾಗಿದ್ದು ಭಾವನಾತ್ಮಕವಾದ ವಿಚಾರಗಳಿಗೆ ಮನ್ನಣೆ ನೀಡುವುದಿಲ್ಲ ಮುಂದಿನ ಮುಖ್ಯ ಮಂತ್ರಿ ಅರ್ಹರು ಎಂಬ ಮಾಧ್ಯಮದವರ ಪ್ರಶ್ನೆಗೆ ಶೇ100ಕ್ಕೆ 40ಜನ ಸಿದ್ದರಾಮಯ್ಯನವರ ಹೆಸರನ್ನು ಹೇಳಿರುವ ಅವರ ಜನ ಪ್ರಿಯತೆಗೆ ಹಿಡಿದ ಸಾಕ್ಷಿ ಎಂದರು.ಅಭ್ಯರ್ಥಿ ಹೆಚ್.ಡಿ. ತಮ್ಮಯ್ಯ ಮಾತನಾಡಿ ಮೇ10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಕ್ರಮ ಸಂಖ್ಯೆ 2 ಹಸ್ತದ ಗುರುತ್ತಿಗೆ ಮತ ನೀಡುವ ಮೂಲಕ ತಮ್ಮ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್ ಮಾಜಿ ಎಂಎಲ್‍ಸಿ ಗಾಯಿತ್ರಿಶಾಂತೇಗೌಡ, ಎಐಸಿಸಿ ಕಾರ್ಯದರ್ಶಿ ಬಿ.ಎಂ ಸಂದೀಪ್, ಡಾ. ಡಿ.ಎಲ್ ವಿಜಯ ಕುಮಾರ್, ಎ.ಎನ್ ಮಹೇಶ್, ಹೆಚ್.ಪಿ ಮಂಜೇಗೌಡ, ರೇಖಾಹುಲಿಯಪ್ಪಗೌಡ, ಬಿ.ಹೆಚ್ ಹರೀಶ್, ಮಹಡಿಮನೆಸತಿಶ್, ನಯಾಜ್‍ಅಹಮದ್, ಸಿ.ಎನ್ ಅಕ್ಮಲ್, ಹೆಚ್.ಎಂ ರೇಣುಕಾರಾಧ್ಯ ಸೇರಿದಂತೆ ಜಿ.ಪಂ, ತಾ.ಪಂ ಮಾಜಿ ಸದಸ್ಯರು ಭಾಗವಹಿಸಿದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!