May 19, 2024

MALNAD TV

HEART OF COFFEE CITY

ಜಿಲ್ಲೆಯಲ್ಲಿ ಶೇ.99.71 ರಷ್ಟು ಮತದಾನ

1 min read

ಚಿಕ್ಕಮಗಳೂರು: ಜಿಲ್ಲಾದ್ಯಂತ ವಿಧಾನ ಪರಿಷತ್ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಕಾಫಿನಾಡಿನಲ್ಲಿ ಶೇ.99.71 ರಷ್ಟು ಮತದಾನ ಮಾಡುವ ಮೂಲಕ ಅಭ್ಯರ್ಥಿಗ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರಪಡಿದ್ದಾರೆ.ಶುಕ್ರವಾರ ಬೆಳಿಗ್ಗೆ 8 ಗಂಟೆಯಿoದ ಸಂಜೆ 4ಗಂಟೆಯವರೆಗೂ ಮತದಾನ ಪ್ರಕ್ರೀಯೆ ನಡೆಯಿತು. ಬೆಳಿಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೇ ಮಧ್ಯಾಹ್ನದ ವೇಳೆಗೆ ಚುರುಕು ಪಡೆದುಕೊಂಡಿತು.

ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು 47, ಮೂಡಿಗೆರೆ 30, ಶೃಂಗೇರಿ 10, ಕೊಪ್ಪ 23, ನರಸಿಂಹರಾಜಪುರ 15, ತರೀಕೆರೆ 26, ಕಡೂರು 62 ಹಾಗೂ ಅಜ್ಜಂಪುರ ತಾಲ್ಲೂ ಕಿನಲ್ಲಿ 18 ಮತಗಟ್ಟೆಗಳನ್ನು ತೆರೆದಿದ್ದು, ಮತದಾರರು ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರ ಪಡಿಸಿದರು. ಚಿಕ್ಕಮಗಳೂರು ತಾಲೂಕು ಕರ್ತಿಕೆರೆ ಗ್ರಾಮ ಪಂಚಾಯತ್‌ನಲ್ಲಿ 16 ಮತದಾರರಿದ್ದು, ಬೆಳಿಗ್ಗೆ 10:15ರ ವೇಳೆಗೆ ಓರ್ವ ಸದಸ್ಯ ಮಾತ್ರ ಮತ ಚಲಾಯಿಸಿದರು. ಉಳಿದ ಸದಸ್ಯರು ತಡವಾಗಿ ತಮ್ಮ ಹಕ್ಕು ಚಲಾಯಿಸಿದರು. ಮುಗುಳವಳ್ಳಿ ಗ್ರಾ.ಪಂ. 9 ಮತದಾರರಲ್ಲಿ 10:30ರ ವೇಳೆಗೆ 6 ಜನ ತಮ್ಮ ಮತ ಚಲಾಯಿಸಿದರು. 3 ಜನರು ತಡವಾಗಿ ತಮ್ಮ ಹಕ್ಕು ಚಲಾಯಿಸಿದರು.

ಕಳಸಾಪುರ ಗ್ರಾ.ಪಂ. 11:30ರ ವೇಳೆಗೆ 14 ಜನ ಮತದಾರರಿದ್ದು, 13ಜನ ಹಕ್ಕು ಚಲಾಯಿಸಿದ್ದು, ಓರ್ವ ವ್ಯಕ್ತಿ ಮತ ಚಲಾಯಿಸುವುದು ಬಾಕೀ ಇತ್ತು. ಕೆ.ಬಿ.ಹಾಳ್, ಸಿಂದಿಗೆರೆ, ಬೆಳವಾಡಿ ಈಶ್ವರಹಳ್ಳಿ ಸೇರಿದಂತೆ 10 ಗ್ರಾ.ಪಂ. ವ್ಯಾಪ್ತಿಯಲ್ಲಿ 102 ಮತದಾರರಿದ್ದು, ಮಧ್ಯಾಹ್ನದೊಳಗೆ 52ಮತದಾರರು ಹಕ್ಕು ಚಲಾಯಿಸಿದ್ದರು.ಇನ್ನು ಹುಲಿಕೆರೆ ಗ್ರಾಮ ಪಂಚಾಯಿತಿಯಲ್ಲಿ 13 ಮತದಾರರಿದ್ದು ಎಲ್ಲರೂ ಒಟ್ಟಿಗೆ ಆಗಮಿಸಿ 11:30ಕ್ಕೆ ತಮ್ಮ ಮತ ಚಲಾವಣೆ ಮಾಡುವ ಶೇ.100ರಷ್ಟು ಮತದಾನ ಅಂತ್ಯಗೊoಡಿತ್ತು ಕಡಿಮೆ ಮತದಾರರಿರುವ ಮತಗಟ್ಟೆಗಳಲ್ಲಿ ಬಹುತೇಕ 12 ಗಂಟೆಗೆ ಮತದಾನ ಪ್ರಕ್ರಿಯೇ ಪೂರ್ಣಗೊಂಡು ಚುನಾವಣಾಧಿಕಾರಿಗಳು ಅವಧಿ ಪೂರ್ಣಗೊಳ್ಳುವರೆಗೂ ಕಾದುಕುಳಿತ್ತಿದ್ದ ದೃಶ್ಯಗಳು ಕಂಡು ಬಂದವು. ಮತಕೇಂದ್ರಗಳ ಸಮೀಪ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದು ಮತದಾರರ ಓಲೈಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಬೆಳಿಗ್ಗೆ 8ಗಂಟೆಯಿoದ 12ಗಂಟೆ ವೇಳೆಗೆ ಚಿಕ್ಕಮಗಳೂರು ತಾಲ್ಲೂಕಿನ 483 ಮತದಾರ ರಲ್ಲಿ 326 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಮೂಡಿಗೆರೆ ತಾಲ್ಲೂಕಿನಲ್ಲಿ 319 ಮತದಾರರಲ್ಲಿ 233 ಮತದಾನ ಮಾಡಿದರು. ಶೃಂಗೇರಿ ತಾಲ್ಲೂಕಿನಲ್ಲಿ 101 ಮತದಾರ ರಲ್ಲಿ 99ಜನರು ಮತದಾನ ಮಾಡಿದರು. ಕೊಪ್ಪ 225ರಲ್ಲಿ 220, ನರಸಿಂಹರಾಜಪುರ 168 ಮತದಾರರಲ್ಲಿ 159, ತರೀಕೆರೆ 297 ಮತದಾರರಲ್ಲಿ 158, ಅಜ್ಜಂಪುರ 169 ಮತ ದಾರರಲ್ಲಿ 33 ಹಾಗೂ ಕಡೂರು ತಾಲ್ಲೂಕಿನ 655 ಮತದಾರರಲ್ಲಿ 420 ಮತದಾರರು ಮತ ಚಲಾಯಿಸಿದ್ದು, ಶೇ. 68.18ರಷ್ಟು ಮತದಾನ ಪ್ರಕ್ರಿಯೇ ಪೂರ್ಣಗೊಂಡಿತ್ತು.

 

ಮಧ್ಯಾಹ್ನ 2ಗಂಟೆ ವೇಳೆಗೆ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಮತದಾನ ಪ್ರಕ್ರಿಯೇ ಪೂರ್ಣಗೊಂಡಿದ್ದು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಶೇ.93.58, ಮೂಡಿಗೆರೆ ಶೇ.99.37, ಶೃಂಗೇರಿ ಶೇ.98.2, ಕೊಪ್ಪ ಶೇ.97.78, ತರೀಕೆರೆ ಶೇ.86.53, ಅಜ್ಜಂಪುರ ಶೇ.64.50 ಹಾಗೂ ಕಡೂರು ತಾಲ್ಲೂಕಿನಲ್ಲಿ 93.28 ರಷ್ಟು ಮತದಾನವಾಗಿದ್ದು ಜಿಲ್ಲಾದ್ಯಂತ ಶೇ.92.39ರಷ್ಟು ಮತದಾನ ಪ್ರಕ್ರಿಯೇ ಪೂರ್ಣಗೊಂಡಿತ್ತು.

ಇನ್ನು ದಿನದ ಅಂತ್ಯಕ್ಕೆ ಚಿಕ್ಕಮಗಳೂರು ತಾಲೂಕಿನಲ್ಲಿ ಶೇ. 99.79, ಮೂಡಿಗೆರೆ ಶೇ.100, ಶೃಂಗೇರಿ ಶೇ.100, ಕೊಪ್ಪ ಶೇ.100, ಎನ್.ಆರ್ ಪುರ ಶೇ.1ಒಒ, ತರೀಕೆರೆ ಶೇ.100, ಅಜ್ಜಂಪುರ ಶೇ.99.41, ಕಡೂರು ಶೇ.99.24 ರಷ್ಟು ಮತದಾನ ನಡೆದಿದ್ದು ಜಿಲ್ಲೆಯಲ್ಲಿ ಒಟ್ಟು ಶೇ. 99.71 ರಷ್ಟು ಮತದಾನ ನಡೆದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!