April 28, 2024

MALNAD TV

HEART OF COFFEE CITY

75ನೇ ಸ್ವಾತಂತ್ರ್ಯೋತ್ಸವ : ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಧ್ವಜರೋಹಣ

1 min read

ಚಿಕ್ಕಮಗಳೂರು: 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ನಗರದ ನೇತಾಜಿ ಸುಭಾಷ್ ಚಂದ್ರ ಬೋಷ್ ಜಿಲ್ಲಾಆಟದ ಮೈದಾದಲ್ಲಿ ಆಚರಣೆ ಮಾಡಲಾಯಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಧ್ವಜರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿ ಬಳಿಕ ತೆರೆದ ವಾಹನದಲ್ಲಿ ಪರೇಡ್ ವೀಕ್ಷಣೆ ಮಾಡಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಪಥ ಸಂಚಲನದಲ್ಲಿ ಜಿಲ್ಲಾ ಶಸಸ್ತ್ರ ಪಡೆ, ಸಿಟಿ ಪೊಲೀಸ್ ಪಡೆ, ಮಹಿಳಾ ಪೊಲೀಸ್ ಪಡೆ, ಪೊಲೀಸ್ ಬ್ಯಾಂಡ್, ಗೃಹ ರಕ್ಷಕ ದಳ ಅರಣ್ಯ ಪಡೆ. ಅಗ್ನಶಾಮಕ ದಳ ಪರೇಡ್ ನಡೆಸಿದರು.

ಬಳಿಕ‌ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾತಂತ್ರ್ಯ ದಿನಾಚರಣೆ ಕೇವಲ ಯಾಂತ್ರಿಕ ಆಚರಣೆ ಅಲ್ಲ ಸ್ವಾತಂತ್ರ್ಯ ಹೋರಾಟಕ್ಕೆ ಯಾರೆಲ್ಲ ತ್ಯಾಗ, ಬಲಿ ದಾನ‌ಮಾಡಿದರು ಅವರನ್ನ ನೆನೆಯುವ ದಿನ ಇಂದು. ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಡಿದ ಹೋರಾಟಗಾರರು ಸಾವಿನ ಕೊನೆ ಗಳಿಯಲ್ಲೂ ದೇಶಕ್ಕೆ ಪ್ರಾಣ ಎಂದವರು ನಮ್ಮ ಹೋರಾಟಗಾರರು. ನಾವು ಇವತ್ತು ಹಾರಿಸಿರೋ ಈ ತ್ರಿವರ್ಣಕ್ಕೆ ಅಪಮಾನ‌ ಮಾಡಿದರೆ ಸಹಿಸಲ್ಲ ಅನ್ನೋ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಕೃಷಿ ಬೆಳೆಗಳ ವಿಮೆ ಕುರಿತು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ 2015-16 ನೇ ಸಾಲಿನಿಂದ 24,392 ರೈತರು 427. 85 ಲಕ್ಷ ಪ್ರೀಮಿಯಂ ಕಟ್ಟಿದ್ದು. ಈ ವರೆಗೂ  23,490  ರೈತರಿಗೆ 862.00 ಲಕ್ಷ ಮೊತ್ತದ ವಿಮೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. 2020 ನೇ ಸಾಲಿನ ಅತೀವೃಷ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಸ್ತಿಗಳ ದುರಸ್ಥಿ ಮತ್ತು ಪುನಶ್ಚೇತನಕ್ಕಾಗಿ 28 ಕೋಟಿ ವೆಚ್ಚ ಭರಿಸಲಾಗಿದೆ. 1307 ಕಾಮಗಾರಿಗಳಿಗೆ ಕ್ರಿಯಾಯೋಜನೆ ಅನುಮೋದಿಸಲಾಗಿದೆ. ಜಲ ಜೀವನ್ ಮೀಷನ್ ಯೋಜನೆ ಯಡಿಯಲ್ಲಿ 264  ಕುಡಿಯುವ ನೀರಿನ ಕಾಮಗಾರಿಗಳನ್ನ 103 ಕೋಟಿ ರೂ.ಗಳಲ್ಲಿ ಅನುಷ್ಟಾನ ‌ಮಾಡಿ 47.386 ಗ್ರಾಮೀಣ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಕ್ರಮ ವಹಿಸಿಲಾಗಿದೆ.

ಇನ್ನು ಸಾರ್ವಜನಿಕ ಶಾಂತಿ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಬಂದೋಬಸ್ಥ್ ಮಾಡಲಾಗಿದೆ. ಮಕ್ಕಳಿಗೆ ಪೊಲೀಸ್ ಠಾಣೆ ಪರಿಚಯ ಮಾಡುವ ದೃಷ್ಠಿಯಿಂದ ‘ತೆರೆದ ಮನೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒನ್ ನೇಷನ್ ಒನ್ ಹೆಲ್ಪಲೈನ್ ಭಾಗವಾಗಿ 112 ಕರೆ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು  ಜಿಲ್ಲಾ ಪೊಲೀಸ್ ಕಚೇರಿ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್ ಟೇಬಲ್ ಶ್ರೀ. ರಾಜಪ್ಪ ಕುಮಾರ್ ರವರು ರಾಷ್ಟ್ರ ಪತಿ ಪೊಲೀಸ್ ಪದಕಕ್ಕೆ ಆಯ್ಕೆಯಾದ  ಹಿನ್ನೆಲೆ ಸನ್ಮಾನ ಮಾಡಲಾಯಿತ್ತು.

ಕಾರ್ಯಕ್ರಮದಲ್ಲಿ ಶಾಸಕ ಸಿಟಿ ರವಿ , ಗೃಹ ಸಚಿವ ಆರಗ ಜ್ಞಾನೇಂದ್ರ. ಉಪಸಭಾಪತಿ ಎಂ.ಕೆ ಪ್ರಾಣೇಶ್. ವಿಧಾನ‌ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ . ಹೆಚ್ ಅಕ್ಷಯ್, ಜಿಲ್ಲಾಧಿಕಾರಿ ರಮೇಶ್, ಅಪಾರ ಜಿಲ್ಲಾಧಿಕಾರಿ ರೂಪ ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!