May 20, 2024

MALNAD TV

HEART OF COFFEE CITY

ನೀರು ಸರಬರಾಜು ಘಟಕ ಪರಿಶೀಲನೆ

1 min read

ಚಿಕ್ಕಮಗಳೂರು: ನಗರದ ಹೊರಲವಯದಲ್ಲಿರುವ ಮುಗುಳವಳ್ಳಿ ಪಂಪ್‍ಹೌಸ್ ಮತ್ತು ಯಗಚಿ ನೀರು ಸರಬರಾಜು ಘಟಕಕ್ಕೆ ಮಂಗಳವಾರ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಭೇಟಿ ನೀಡಿ ಪರಿಶೀಲಿಸಿದರು.ಕಳೆದ 2 ತಿಂಗಳಿನಿಂದ ನಗರಕ್ಕೆ ನೀರು ಸರಬರಾಜು ಮಾಡುವ ಮೋಟಾರ್ ಹಾಳಾಗಿದ್ದು, ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿತ್ತು. ಈ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಬೆಂಗಳೂರಿನ ಕಂಪನಿಯೊಂದು ಮೋಟಾರ್ ದುರಸ್ಥಿಪಡಿಸಿದೆ ಮುಂದಿನ ದಿನ ಗಳಲ್ಲಿ ಸುವ್ಯವಸ್ಥಿತವಾಗಿ ನಗರಕ್ಕೆ ನೀರು ಸರಬರಾಜಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಅಮೃತ್ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಈ ತಿಂಗಳ ಅಂತ್ಯದಲ್ಲಿ ಮನೆ ಮನೆಗೂ ನೀರು ಪೂರೈಕೆಯಾಗಲಿದೆ, ಕೆಲವೊಂದು ವಾರ್ಡ್‍ಗಳಲ್ಲಿ ಅಮೃತ್ ನೀರು ಸರಬರಾಜಾಗುತ್ತಿದ್ದು ಪರಿಶೀಲನೆ ಕಾರ್ಯವೂ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.ನಗರಸಭೆಗೆ ಹೊಸ ಆಡಳಿತ ವ್ಯವಸ್ಥೆ ಬಂದ ಬಳಿಕ ಅಭಿವೃದ್ಧಿ ಪರ್ವಶುರುವಾಗಿದೆ. ವಿಪಕ್ಷಗಳು ಟೀಕೆ ಮಾಡುವಲ್ಲಿ ತಮ್ಮ ಸಮಯ ವ್ಯರ್ಥ ಮಾಡುತ್ತಿವೆ ಎಂದು ಟೀಕಿಸಿದರು.

ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ನಗರಕ್ಕೆ ನೀರು ಸರಬರಾಜಾಗುವ ಮುಗುಳುವಳ್ಳಿ ಪಂಪ್‍ಹೌಸ್ ಹಾಗೂ ಯಗಚಿ ಜಾಕ್‍ವೆಲ್ ಮೋಟಾರ್ ಅಳವಡಿಕೆ ಸ್ಥಳಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಂಜಿನಿಯರ್ ಜತೆಗೆ ತೆರಳಿ ಪರಿಶೀಲಿಸಲಾಗಿದೆ. ಮೋಟಾರ್ ತಾಂತ್ರಿಕ ಸಮಸ್ಯೆಯಿಂದಾಗಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು, ಇದೀಗ ಸರಿಪಡಿಸಲಾಗಿದೆ. ಮುಂದಿನ ಮೇ 15 ರೊಳಗೆ ಎಲ್ಲಾ ವಾರ್ಡ್‍ಗಳಲ್ಲಿ ಪೈಪ್‍ಲೈನ್ ಅಳವಡಿಕೆ ಸೇರಿದಂತೆ ಸಂಪೂರ್ಣ ಅಮೃತ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ನಗರಸಭೆ ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್‍ಗಳಾದ ಕುಮಾರ್, ಚಂದನ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಂಜಿನಿಯರ್ ಶಿಲ್ಪಾ ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!