May 19, 2024

MALNAD TV

HEART OF COFFEE CITY

ದೇಶದ ಏಕತೆಗೆ ವಿಷ ಬೆರೆಸುವ ನಿರಂತರ ಪ್ರಯತ್ನ ನಡೆಯುತ್ತಿದೆ_ಪ್ರೋ.ರಾಚಪ್ಪ

1 min read

 

ಚಿಕ್ಕಮಗಳೂರು: ನೂರಾರು ಭಾಷೆ, ಹಲವು ಸಂಸ್ಕೃತಿ, ವಿವಿಧ ಧರ್ಮದರು ಸೇರಿಕೊಂಡು ವಿಶಿಷ್ಟತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ ಆದರೆ ಇತ್ತೀಚ್ಚಿನ ದಿನಗಳಲ್ಲಿ ಈ ಏಕತೆಗೆ ವಿಷವನ್ನು ಬೆರೆಸುವ ನಿರಂತರ ಪ್ರಯತ್ನ ನಡೆಯುತ್ತಿದೆ ಹಾಗಾಗಿ ಎಚ್ಚರದಿಂದಿರುವ ಅಗತ್ಯ ಇದೆ ಎಂದು ನಿವೃತ್ತ ಪ್ರೋ.ರಾಚಪ್ಪ ಕರೆ ನೀಡಿದರು. 

ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಸಂಜೆ ಮಹಾ ಪರಿನಿಬ್ಬಾಣ ಆಚರಣಾ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ಆಯೋಜಿಸಿದ್ದ ೬೫ನೇ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪರಿನಿಬ್ಬಾಣ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದರು.

ಭಾರತ ಒಂದು ವಿಶಿಷ್ಟವಾದ ದೇಶ ಎಂಬುದನ್ನು ನಾವೆಲ್ಲರು ಮನಗಾಣಬೇಕು. ಪ್ರಪಂಚದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನ ಮಾನ ಇದೆ. ಅರಪ್ಪ ಮಹೆಂಜರದಾರ್ ಸಂಸ್ಕೃತಿ ಕೊಟ್ಟ ಇತಿಹಾಸ ನಮ್ಮದು. ಈ ದೇಶದ ಇತಿಹಾಸವನ್ನು ಓದಿದರೆ ನಮಗೆ ಹಲವು ಅಂಶಗಳು ತಿಳಿಯುತ್ತವೆ. ಸಾಮಾಜಿಕ, ಆರ್ಥಿಕ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ನೂರಾರು ವರ್ಷಗಳ ಹಿಂದೆಯೇ ಸಾಧನೆ ಮಾಡಿದೆ. ಆದರೆ ಆರ್ಯರ ದಾಳಿಯಿಂದ ನಮ್ಮ ದೇಶದ ಅವನತಿ ನಿಧಾನವಾಗಿ ಸಾಗುತ್ತ ಬಂದಿತು. ಆರ್ಯರು ಬಂದ ನಂತರದಲ್ಲಿ ಈ ಮಹಾನ್ ಸಂಸ್ಕೃತಿಗೆ ವಿಷ ಬಿತ್ತುವ ಜೊತೆಗೆ ಅವನತಿಯತ್ತ ತಗೆದುಕೊಂಡು ಹೋದರು ಎಂದು ಹೇಳಿದರು.

 

ಆರ್ಯರ ಇತಿಹಾಸಕ್ಕೆ ಮೂರು ಸಾವಿರ ವರ್ಷದ ಇತಿಹಾಸ ಇದ್ರೆ, ಈ ದೇಶದ ಮೂಲ ನಿವಾಸಿಗಳ ಇತಿಹಾಸಕ್ಕೆ ಐದು ಸಾವಿರ ವರ್ಷದ ಇತಿಹಾಸ ಇದೆ. ಆರ್ಯರು ಯಾವಾಗ ವರ್ಣ ವ್ಯವಸ್ಥೆಯನ್ನು ಪ್ರಾರಂಭ ಮಾಡಿದ್ರೋ ಅಲ್ಲಿಂದ ಈ ದೇಶದಲ್ಲಿ ಮಹಿಳೆಯರು ಸುಖ ಪಡಲಿಲ್ಲ, ಶೇ. ೬೨ ರಷ್ಟಿರುವ ಹಿಂದುಳಿದ ಜಾತಿಯವರು ಸುಖಪಡಲಿಲ್ಲ ಹಾಗೂ ಶೇ.೨೩ರಷ್ಟಿರುವ ಪರಿಶಿಷ್ಟ ಪಂಗಡ ಸುಖ ಪಡಲಿಲ್ಲ ಎಂದು ತಿಳಿಸಿದರು.

 

ದೇಶದ ಮಹುಳೆಯರು, ಹಿಂದುಳಿದವರು (ಲಿಂಗಾಯತ, ಕುರುಬ,ಒಕ್ಕಲಿಗರ) ಆದಿಯಾಗಿ ಇವರೆಲ್ಲರು ಸಹ ಮೂರು ಸಾವಿರ ವರ್ಷಗಳಿಂದ ಸುಖ ಪಟ್ಟಿಲ್ಲ. ಅಂದರೆ ಸುಮಾರು ೬೦ ತಲೆಮಾರುಗಳಿಂದ ಮಹಿಳೆಯರು, ಶೂದ್ರರು, ಪರಿಶಿಷ್ಟ ಪಂಗಡದವರು ಗುಲಾಮರಾಗಿ ಬದುಕು ಸವೆಸುತ್ತಾ ಬಂದಿದ್ದಾರೆ. ಹಿಂದುಳಿದ ವರ್ಗಗಳ ಈ ಗುಲಾಮಗಿರಿಗೆ ಇತಿಶ್ರಿಗೆ ಹಾಡಿದವರು ಅಂಬೇಡ್ಕರ್ ಹಾಗಾಗಿ ಅವರು ಎಲ್ಲಾ ವರ್ಗಗಳಿಗೆ ದೇವರಷ್ಟೇ ಶ್ರೇಷ್ಠ ಎಂದರು.

 

ಮಹಿಳೆಯರ, ಹಿಂದುಳಿದ, ಪರಿಶಿಷ್ಟ ವರ್ಗದ ಸ್ಥಾನಮಾನಗಳನ್ನು ಸರಿಪಡಿಸಲು ಬುದ್ಧ, ಮಾಹಾವೀರ, ಬಸವಣ್ಣ, ಕಬೀರ, ಪುರಂದರಸಾರು. ಕುವೆಂಪು ಪೆರಿಯಾರ್,ನಾರಯಣ ಗುರು ಸಮಾಜ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದು, ಅಂತಿಮವಾಗಿ ಎಲ್ಲಾ ಸಮಾಜ ಸುಧಾರಕರ ಸಾರವನ್ನು ಸಂವಿಧಾನದ ಮೂಲಕ ಅಳವಡಿಸಿದವರು ಅಂಬೇಡ್ಕರ್ ಹಾಗಾಗಿ ಅವರು ದೇವರು ಎಂದು ಹೇಳಿದರು.

 

ನೂರಾರು ಭಾಷೆ, ಹಲವು ಸಂಸ್ಕೃತಿ ವಿವಿಧ ಧರ್ಮದರು ಸೇರಿರುವ ವಿಶಿಷ್ಟ ದೇಶ ಭಾರತ. ಆದರೆ ಇತ್ತೀಚಿನ ದಿನಗಳಲ್ಲಿ ಈ ಏಕತೆಗೆ ವಿಷವನ್ನು ಬೆರೆಸುವ ನಿರಂತರ ಪ್ರಯತ್ನ ನಡೆಯುತ್ತಿದೆ ಹಾಗಾಗಿ ನಾವೆಲ್ಲರೂ ಎಚ್ಚರದಿಂದಿರುವ ಅಗತ್ಯ ಇದೆ ಎಂದರು.

ನಾವು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದವರನ್ನು ಸಮಾಜ ಸುಧಾರಕರು ಅಂತೀರಾ ಅಥವಾ ಬಯೋತ್ಪಾದಕರು ಅಂತೀರೋ ಎಂದು ಪ್ರಶ್ನಿಸಿದರು.

ಈ ಸಮಿತಿ ಸೈನಿಕರಂತೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಐತಿಹಾಸಿಕ ದಿನವಾಗಿದೆ ಎಂದು ಭಾವಿಸುತ್ತೇನೆ ಎಂದು ಇದೇ ವೇಳೆ ಸಂಘಟಕರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ನಾಗೇಶ್ ಸಂವಿಧಾನ ಪ್ರಸ್ತಾವನೆಯನ್ನು ಓದುವ ಮೂಲಕ ಪ್ರತಿಜ್ಞಾವಿಧಿ ಭೋದಿಸಿದರು. ಈ ವೇಳೆ ಎಲ್ಲರೂ ಎದ್ದು ನಿಂತು ಪ್ರತಿಜ್ಞಾವಿಧಿಯನ್ನು ನುಡಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಬಿ ನಿಂಗಯ್ಯ, ಕಾಂಗ್ರೆಸ್ ಮುಖಂಡೆ ನಾಗರತ್ನ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ದಲಿತ ಮುಖಂಡರು ಇದ್ದರು. ಪ್ರಾಸ್ತಾವಿಕವಾಗಿ ಹೊನ್ನೇಶ್ ಮಾತನಾಡಿದರು, ಜಗದೀಶ್ ಸ್ವಾಗತಿಸಿದರು.

೬೫ನೇ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ಸುಮಾರು ೨೦೦೦ ಜನರು ನಗರದ ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ವೃತ್ತದ ವರಗೆ ಮುಂಬತ್ತಿ ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಹಾಸ್ಟೇಲ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!