May 19, 2024

MALNAD TV

HEART OF COFFEE CITY

ದೇವಸ್ಥಾನ ಪ್ರವೇಶ, ಬಿಡಿಎಂಇ ಅಧ್ಯಕ್ಷ ಸ್ಥಾನದಿಂದ ಅಕ್ಮಲ್ ಪದಚ್ಯುತಿ

1 min read

 

 

ಚಿಕ್ಕಮಗಳೂರು: ಹಿಂದೂ ದೇವಾಲಯಕ್ಕೆ ತೆರಳಿದ ಕಾರಣಕ್ಕೆ ನನ್ನನ್ನು ಕಾನೂನು ಬಾಹಿರವಾಗಿ ಬೋರ್ಡ್ ಆಫ್ ಟ್ರಸ್ಟ್ ಮುಸ್ಲೀಂ ಎಂಡೋಲ್ಮೆoಟ್ ಸಂಘದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಜಾಮೀಯಾ ಮಸೀದಿ ಅಧ್ಯಕ್ಷ ಸಿ.ಎನ್ ಅಕ್ಮಲ್ ಹೇಳಿದ್ದಾರೆ.

 

ಈ ಕುರಿತು ಮಾಧ್ಯಮದವರ ಜೊತೆಗೆ  ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ರಾಮನಹಳ್ಳಿ ಆಂಜನೇಯ ದೇವಸ್ಥಾನದ ನೂತನವಾಗಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಅನ್ನದಾನವನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಕ್ಕೆ ತೆರಳಿದ ವೇಳೆ ದೇವರ ದರ್ಶನಕ್ಕೆ ತೆರಳಿ ಅರ್ಚಕರು ನೀಡಿದ ಆರತಿಯನ್ನು ತಗೆದುಕೊಂಡಿದ್ದೆ. ಇದನ್ನೆ ಇಟ್ಟುಕೊಂಡು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದೆ ಎಂದು ಅಕ್ಮಲ್ ಆರೋಪಿಸಿದ್ದಾರೆ.

 

ಈ ಕುರಿತು ಹಲವರು ತಮ್ಮೊಳಗೆ ಚರ್ಚೆಮಾಡಿಕೊಂಡು ನನ್ನ ಗಮನಕ್ಕೆ ಬಾರದೇ, ನನಗೆ ಯಾವುದೇ ನೋಟಿಸ್ ನೀಡದೇ ಬೋರ್ಡ್ ಆಫ್ ಟ್ರಸ್ಟ್ ಮುಸ್ಲೀಂ ಎಂಡೋಲ್ಮೆoಟ್ ಸಂಘದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿದ್ದು ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

 

ಸಂಘದ ಕೆಲವರು ಪಿತೂರಿ ಮಾಡಿ ಈ ನಿರ್ಧಾರ ತಗೆದುಕೊಂಡಿದ್ದಾರೆ. ಸಂಘದ ಬೈಲಾದಲ್ಲಿ ಇದ್ಯಾವುದೇ ಅಂಶಗಳಿಲ್ಲ ಹಾಗೂ ಬೈಲಾದಲ್ಲಿ ಸರ್ವಧರ್ಮ ಒಂದೇ ಎಂದು ಇರುತ್ತದೆ. ಆದರೆ ದೇವಸ್ಥಾನಕ್ಕೆ ಹೋದ ವಿಚಾರವನ್ನು ಪ್ರಮುಖ ಅಂಶವನ್ನಾಗಿ ಇಟ್ಟುಕೊಂಡು ನನ್ನ ಮೇಲೆ ಸುಖಾಸುಮ್ಮನೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿರುವ ಅವರು ಸಂಘದ ನಿಯಮದ ಪ್ರಕಾರ ಮೂರು ಬಾರಿ ನೋಟಿಸ್ ನೀಡಬೇಕು ಹಾಗೂ ಸಭೆಗೆ ನನ್ನನ್ನು ಕರೆದು ಚರ್ಚೆ ನಡೆಸಬೇಕು ಆದರೆ ಇದ್ಯಾವುದನ್ನು ಮಾಡದೇ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

* ವಕ್ಫ್ ಬೋರ್ಡ್ ಕಚೇರಿಗೆ ತೆರಳಿ ತರಾಟೆ

 

ಘಟನೆಗೆ ಸಂಬoಧಪಟ್ಟoತೆ ಬುಧವಾರ ಜಿಲ್ಲಾ ವಕ್ಫ್ ಬೋರ್ಡ್ ಕಚೇರಿಗೆ ಅಕ್ಮಲ್ ನೇತೃತ್ವದಲ್ಲಿ ಹಲವು ಸದಸ್ಯರು ತೆರಳಿ ವಕ್ಫ್ ಬೋರ್ಡ್ ಕಾನೂನನ್ನು ಉಲ್ಲಂಘಿಸಿ ರಾಜ್ಯ ಮಂಡಳಿಗೆ ಪತ್ರ ರವಾನಿಸಿದ್ದು ಇದರ ಹಿಂದೆ ವಕ್ಫ್ ಬೋರ್ಡ್ ಆಡಳಿತಾಧಿಕಾರಿಯ ಕೈವಾಡವೂ ಇದೆ ಎಂದು ಆರೋಪಿಸಿದರು. ಈ ವೇಳೆ ಕೆಲಕಾಲ ಆಡಳಿತಾಧಿಕಾರಿಯ ಜೊತೆಗೆ ಮಾತಿನ ಚಕಮಕಿ ನಡೆಯಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!