May 19, 2024

MALNAD TV

HEART OF COFFEE CITY

ಮತದಾರರ ನೊಂದಣಿಕಾರ್ಯ ಚುರುಕುಗೊಳಿಸಿ – ಸಿ.ಟಿ.ರವಿ

1 min read

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಚುನಾವಣೆಗೆ ಮತದಾರರನ್ನು ನೊಂದಾಯಿಸುವಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಬಿಜೆಪಿ ಕಾರ್ಯಕರ್ತರಿಗೆಕರೆ ನೀಡಿದರು. ಜಿಲ್ಲಾ ಬಿಜೆಪಿ ಪಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಷತ್‍ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜನಸಂಘದ ಕಾಲದಿಂದಿಂದಲೂ ಪರಿಷತ್ ಚುನಾವಣೆಗಳನ್ನು ನಾವು ಗೆಲ್ಲುತ್ತಾ ಬಂದಿದ್ದೇವೆ. ಪದವೀಧರಕ್ಷೇತ್ರದಲ್ಲಿ 6 ಬಾರಿ ನಿರಂತರಗೆಲುವುದ ಸಾಧಿಸಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲಿ 4 ಬಾರಿಗೆದ್ದಿದ್ದೇವೆ. ಎಷ್ಟು ಜನ ಮತದಾರರನ್ನು ನಾವು ನೊಂದಾಯಿಸುತ್ತೇವೋಅದರ ಮೇಲೆ ನಮ್ಮಗೆಲುವುದಖಾತ್ರಿಯಾಗುತ್ತಾ ಹೋಗುತ್ತದೆ. ಈ ಕಾರಣಕ್ಕೆ ನಮ್ಮ ವಿಚಾರದಲ್ಲಿ ಒಲವಿರುವವರನ್ನ ನೊಂದಣಿಮಾಡಿಸಬೇಕುಎಂದುಕರೆ ನೀಡಿದರು.ಸಂಘಟನಾಜಾಲವೇ ನಮಗಿರುವದೊಡ್ಡ ಸಾಮಥ್ರ್ಯ. ಮತದಾರರನ್ನು ನೊಂದಣಿ ಮಾಡಿಸುವುದು ಸುಲಭವಲ್ಲ. ಬೆನ್ನು ಹಿಡಿದ ಬೇತಾಳದ ರೀತಿ ಬೆನ್ನು ಬಿದ್ದು ಕೆಲಸ ಮಾಡಬೇಕು. ನಮ್ಮ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯ 29 ವಿಧಾನಸಭಾ ಕ್ಷೇತ್ರಗಳ ಪೈಕಿ 1 ಜೆಡಿಎಸ್‍ಇದೆ. 14 ಬಿಜೆಪಿ ಹಾಗೂ 14 ಕಾಂಗ್ರೆಸ್‍ಇದೆ. ಈಗಿರುವ ಸ್ಥಿತಿಯಲ್ಲಿ ಒಂದೊಂದೇ ಸ್ಥಾನ ಇದ್ದಾಗಲೂಗೆದ್ದು ಬಂದಿದ್ದೇವೆ. ಈಗ ನೊಂದಣಿಯನ್ನುಇನ್ನಷ್ಟುಚೆನ್ನಾಗಿ ಮಾಡಿದರೆ ಸುಲಭವಾಗಿಗೆಲ್ಲಬಹುದುಎಂದು ತಿಳಿಸಿದರು.ಸೆಪ್ಟೆಂಬರ್ 30 ರಿಂದ ಮತದಾರರ ನೋಂದಣಿ ಪ್ರಕ್ರಿಯೆಅಧಿಕೃತವಾಗಿ ಪ್ರಾರಂಭವಾಗುತ್ತದೆ. ನವೆಂಬರ್ 6 ಕ್ಕೆ ಮೊದಲ ಹಂತ ಮುಕ್ತಾಯಗೊಳ್ಳಲಿದೆ. ನಂತರ ಪರಿಶೀಲನೆ, ಕರಡು ಮತದಾರರ ಪಟ್ಟಿ ಬಿಡುಗಡೆ ನಂತರಡಿಸೆಂಬರ್‍ನಲ್ಲಿಅಂತಿಮ ಮತದಾರರ ಪಟ್ಟಿ ಬಿಡುಗಡೆಆಗಲಿದೆ. ಡಿಸೆಂಬರ್ ನಂತರ ಮತ್ತೊಂದು ಅವಕಾಶ ಸಿಗಬಹುದುಎಂದುಯಾರೂಕಾಯಬಾರದುಕಾರಣ ನಾವೆಲ್ಲರೂ ಲೋಕಸಭಾಚುನಾವಣೆ ಮೂಡ್‍ಗೆ ಬಂದುಬಿಡುತ್ತೇವೆ.ಈ ಕಾರಣಕ್ಕೆ ಏನೇ ಮಾಡುವುದಿದ್ದರೂ ನವೆಂಬರ್ 6 ರೊಳಗಾಗಿ ಮಾಡಬೇಕುಎಂದರು.ಪದವೀಧರರು, ಶಿಕ್ಷಕರು ಹೆಚ್ಚಾಗಿ ಒಂದೇ ಸ್ಥಳದಲ್ಲಿ ಸಿಗುವ ಬ್ಯಾಂಕ್, ಕೋರ್ಟ್, ಕಾಲೇಜು, ಪಾಲಿಟೆಕ್ನಿಕ್‍ಇನ್ನಿತರೆ ಖಾಸಗಿ, ಸರ್ಕಾರಿ ಸಂಸ್ಥೆಗಳಿಗೆ ತೆರಳಿ ಅವರ ಮನವೊಲಿಸಿ ನೊಂದಣಿ ಮಾಡಿಸಬೇಕು.

ಕರಡು ಮತದಾರರ ಪಟ್ಟಿ ಬಂದಕೂಡಲೇಅದನ್ನೊಮ್ಮೆ ಪರಿಶೀಲನೆ ನಡೆಸಬೇಕು. ಬೇನಾಮಿ ಸಂಸ್ಥೆಗಳ ಹೆಸರಲ್ಲಿ ಶಿಕ್ಷಕರೇ ಅಲ್ಲದ ಮತದಾರರನ್ನು ನೊಂದಾಯಿಸುವ ಕೆಲಸವನ್ನು ಕೆಲವರು ಮಾಡುತ್ತಾರೆಅಂತಹದ್ದನ್ನುಗುರುತಿಸುವ ಕೆಲಸವೂ ಆಗಬೇಕು ಎಂದರು.ಹೊಂದಾಣಿಕೆಇತ್ಯಾದಿ ವಿಚಾರಇದ್ದರೂ ನಮ್ಮ ಕೆಲಸ ನೊಂದಣಿ ಮಾಡಿಸುವುದು. ಆ ಕೆಲಸವನ್ನುಚೆನ್ನಾಗಿ ಮಾಡಿದ್ದರೆಟಿಕೆಟ್‍ನ್ನೂ ನಮಗೇ ಕೊಡಿಎಂದು ಕೇಳಬಹುದು. ಹೊಂದಾಣಿಕೆ ಲೋಕಸಭೆಗೆ ಮಾತ್ರವೋಅಥವಾಎಲ್ಲಚುನಾವಣೆಗೆಅನ್ವಯಿಸುತ್ತದೋಎನ್ನುವುದುಇನ್ನೂ ಮಾತುಕತೆ ಹಂತದಲ್ಲಿದೆ. ಆ ಕಾರಣಕ್ಕೆ ಆ ಗೋಜಲಿಗೆ ನಾವು ಹೋಗುವುದು ಬೇಡಎಂದರು.ಮತ್ತೋರ್ವ ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಶಿಕ್ಷಕರಾಗಿದ್ದವರು. ಬಹುತೇಕ ಪದವೀಧರರೇಆಗಿರುತ್ತಾರೆ. ಹಾಗಾಗಿ ಅವರು ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರಕ್ಷೇತ್ರಎರಡಕ್ಕೂ ಮತದಾರರಾಗಿರುತ್ತಾರೆ. ಈ ಕಾರಣಕ್ಕೆಅವರಿಂದಎರಡು ಫಾರಂ ಸಂಗ್ರಹಿಸಬೇಕಾಗುತ್ತದೆಎಂದರು.ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮಾಜಿ ಶಾಸಕ ಡಿ.ಎಸ್.ಸುರೇಶ್, ಮುಖಂಡರುಗಳಾದ ದೀಪಕ್‍ದೊಡ್ಡಯ್ಯ, ಸಿಆರ್.ಪ್ರೇಂಕುಮಾರ್, ಹಂಪಾಪುರಪುಟ್ಟೇಗೌಡ, ದೇರಾಜ್‍ಶೆಟ್ಟಿ, ಅವಿನಾಶ್‍ಇತರರುಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!