May 20, 2024

MALNAD TV

HEART OF COFFEE CITY

ನಿಗಧಿತ ಅವಧಿಯಲ್ಲಿ ಬೆಳೆಸಾಲ ಮರುಪಾವತಿ ಮಾಡಿ: ಸಿ. ಆನಂದ್

1 min read

ಚಿಕ್ಕಮಗಳೂರು-ರೈತರಿಗೆ ವಿತರಿಸುವ ಬೆಳೆಸಾಲವನ್ನು ನಿಗಧಿತ ಅವಧಿಯೊಳಗೆ ಮರುಪಾವತಿ ಮಾಡುವ ಮೂಲಕ ಶೂನ್ಯ ಬಡ್ಡಿದರದ ಲಾಭ ದೊರೆಯಲಿದೆ, ಅವಧಿ ಮೀರಿದ ಬಳಿಕ ಪಾವತಿ ಮಾಡಿದ್ದಲ್ಲಿ ಶೇ ೧೨ ರಷ್ಟು ಸಾಮಾನ್ಯ ಬಡ್ಡಿದರ ಪಾವತಿಸಬೇಕಾಗುತ್ತದೆ ಎಂದು ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ್ ಸಿ. ಹೇಳಿದರು.
ಮೂಗ್ತಿಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರಿಗೆ ಪ್ರಥಮ ಬಾರಿಗೆ ಡಿಜಿಟಲ್ ಸ್ಮಾರ್ಟ್ ಕಾರ್ಡ್ ವಿತರಿಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಏಳು ವರ್ಷಗಳಿಂದ ಸಹಕಾರ ಸಂಘವು ಲಾಭದಾಯವಾಗಿ ಮುನ್ನಡೆಯುತ್ತಿದ್ದು, ಕಳೆದ ವರ್ಷ ಗಳಿಸಿದ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ ೩ ರಷ್ಟು ಡಿವಿಡೆಂಡ್ ಘೋಷಿಸಲಾಗಿದೆ ಸದಸ್ಯರ ಪಾಲಿನ ಲಾಂಭಾoಶವನ್ನು ಸ್ವಯಂಪ್ರೇರಿತವಾಗಿ ಒಪ್ಪಿ ಕಟ್ಟಡ ನಿಧಿಗೆ ವರ್ಗಾಯಿಸಿಕೊಳ್ಳಲು ಸದಸ್ಯರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.
ಕೆಸಿಸಿ ಸಾಲ ವಸೂಲಾತಿಯಲ್ಲಿ ಪ್ರತಿ ವರ್ಷ ಶೇ ೧೦೦ ರಷ್ಟು ಪ್ರಗತಿ ಸಾಧಿಸುತ್ತಿದ್ದು ಈ ವರ್ಷ ಓರ್ವ ಸದಸ್ಯರು ಸುಸ್ಥಿಬಾಕಿ ಉಳಿಸಿಕೊಂಡಿರುವುದು ಬೇಸರದ ಸಂಗತಿ, ರೈತರಿಗೆ ವಿತರಿಸುವ ಬೆಳೆಸಾಲಕ್ಕೆ ಶೇ.೦ ಯಷ್ಟು ಬಡ್ಡಿದರವಿದ್ದು ಪಡೆದ ಸಾಲವನ್ನು ಅವಧಿಯೊಳಗೆ ಮರುಪಾವತಿ ಮಾಡಿದ್ದಲ್ಲಿ ಮಾತ್ರ ಶೂನ್ಯ ಬಡ್ಡಿದರದ ಲಾಭ ದೊರೆಯಲಿದೆ. ಅವಧಿ ಮೀರಿದ ನಂತರ ಮರುಪಾವತಿಸಿದರೆ ಸಾಲ ಪಡೆದ ದಿನದಿಂದಲೇ ಶೇ ೧೨ ರ ಸಾಮಾನ್ಯ ಬಡ್ಡಿದರ ಭರಿಸಬೇಕಾಗುತ್ತದೆ. ಆದ್ದರಿಂದ ಸಾಲ ಪಡೆದ ಸದಸ್ಯರು ನಿಗಧಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುವಂತೆ ತಿಳಿಸಿದರು.

ಸದಸ್ಯತ್ವ ಗುರುತಿನ ಚೀಟಿಗಾಗಿ ಬಾರ್‌ಕೋಡ್ ವ್ಯವಸ್ಥೆ ಇರುವ ಬಹುಪಯೋಗಿ ಸ್ಮಾರ್ಟ್ ಕಾರ್ಡ್ನ್ನು ಸಂಘದಲ್ಲಿಯೇ ಮುದ್ರಣಗೊಳಿಸಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಎಲ್ಲಾ ರೀತಿಯ ಹಣಕಾಸು ವ್ಯವಹಾರ ಸೇರಿದಂತೆ ಮಹಾಸಭೆ ಹಾಜರಾತಿ ಸಂಘದ ಗುರುತಿನ ಚೀಟಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಪ್ರಸ್ತುತ ವರ್ಷ ಹೊಸದಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಸದಸ್ಯರ ಕೆಸಿಸಿ ಬೆಳೆಸಾಲದ ಅರ್ಜಿಗಳನ್ನು ಪರಿಶಿಲೀಸಿ ಡಿಸಿಸಿ ಬ್ಯಾಂಕ್‌ಗೆ ಸಲ್ಲಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಬೆಳೆಸಾಲ ವಿತರಿಸಲಾಗುವುದು ಮತ್ತು ಹೆಚ್ಚುವರಿ ಸಾಲಕ್ಕೆ ಅರ್ಹ ಸದಸ್ಯರು ಅರ್ಜಿ ಸಲ್ಲಿಸಿದ್ದಲ್ಲಿ ಮಂಜೂರಾತಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಹೊಸ ಕಟ್ಟಡದಲ್ಲಿ ಬ್ಯಾಂಕಿoಗ್ ವ್ಯವಹಾರ ಪ್ರಾರಂಭಿಸಲು ಉದ್ದೇಶಿಸಿದ್ದು ಕಟ್ಟಡ ನಿರ್ಮಾಣಕ್ಕೆ ಹಲವು ಸದಸ್ಯರು ದೇಣಿಗೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರಪ್ಪ ೧ ಲಕ್ಷ ರೂ ಅನುದಾನ ನೀಡಿದ್ದಾರೆ ಇನ್ನು ಮಾಜಿ ಸದಸ್ಯ ಹಿರಿಗಯ್ಯ ೨ ಲಕ್ಷ ಅನುದಾನ ನೀಡಿದ್ದಾರೆ. ಇದರ ಕಾಮಗಾರಿ ಪೂರ್ಣಗೊಳ್ಳಲು ಹೆಚ್ಚಿನ ಹಣದ ಅವಶ್ಯತೆ ಇದ್ದು ಕೈಲಾದಷ್ಟು ದೇಣಿಗೆ ನೀಡಿ ಸಹಕರಿಸುವಂತೆ ಕೋರಿದರು.ಸಂಘವು ಉತ್ತಮವಾಗಿ ನಡೆಯುವಲ್ಲಿ ಠೇವಣಿದಾರರು, ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಸಂಘದ ವ್ಯವಸ್ಥಾಪಕ ನಿರ್ದೇಶಕರು, ಮೇಲ್ವಿಚಾರಕರು, ಸಿಬ್ಬಂದಿಗಳು ಶ್ರಮವಹಿಸಿ ದುಡಿಯುತ್ತಿದ್ದು ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು.
ಮಹಾಸಭೆಯಲ್ಲಿ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಸಹಕಾರ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ. ನಿರ್ದೇಶಕರಾದ ಕುಮಾರೇಗೌಡ, ಪ್ರಭಾಕರ್ ಎಂ.ಟಿ., ಉಮೇಶ್, ಅಂಬಿಕಾ ಕೆ.ಆರ್., ಹರೀಶ್‌ರಾಜ್ ಟಿ.ಹೆಚ್. ಗಿರೀಶ್ ಜೆ.ಸಿ, ದೇವರಾಜ್ ಎಸ್.ಎಸ್, ಡಿಸಿಸಿ ಬ್ಯಾಂಕ್ ಪದನಿಮಿತ್ತ ನಿರ್ದೇಶಕ ನಾಗೇಶ್ ಡಿ, ಇದ್ದರು. ಸಭೆಯಲ್ಲಿ ಉಪಾಧ್ಯಕ್ಷ ಎಂ.ಎಸ್ ಗುರುಮೂರ್ತಿ ಸ್ವಾಗತಿಸಿ, ಸಿಇಒ ರಾಜೇಶ್ ನಿರೂಪಿಸಿ, ನಿರ್ದೇಶಕರಾದ ದಿನೇಶ್ ರಾಜ್‌ಅರಸ್ ವಂದಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!