May 21, 2024

MALNAD TV

HEART OF COFFEE CITY

ಬಾಬಾಬುಡನ್ ದರ್ಗಾ ವ್ಯವಸ್ಥಾಪನ ಸಮಿತಿ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ

1 min read

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದ ವ್ಯವಸ್ಥಾಪನ ಸಮಿತಿ ರದ್ದು ಪಡಿಸಬೇಕು ಎಂದು ಒತ್ತಾಯಿಸಿ ಬಾಬ ಬುಡನ್ ಗಿರಿ ಹೋರಾಟ ಸಮಿತಿಯಿಂದ ನಗರದ ಅಜಾದ್ ವೃತ್ತದ ಬಳಿ ಪ್ರತಿಭಟನೆ ಮಾಡಲಾಯಿತು.
ಹಜ್ರತ್ ದಾದ ಹಯಾತ್ ಮೀರ್ ಖಾಲಂದರ್, ಬಾಬ ಬುಡನ್ ಗಿರಿ ಹೋರಾಟ ಸಮಿತಿಯ ಮುಖ್ಯಸ್ಥ ಸೈಯದ್ ಫಾಕ್ರುದ್ದೀನ್ ಶಾ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದ ವ್ಯವಸ್ಥಾಪನ ಸಮಿತಿಯನ್ನು ಹಲವು ವಿರೋಧ ಇದ್ದರೂ ಕೂಡ ಅನಧಿಕೃತವಾಗಿ ರಚನೆ ಮಾಡಲಾಗಿದೆ ಎಂದು ಆರೋಪಿಸಿದರು.

ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎರಡು ಮಹಿಳೆಯರನ್ನು ಸೇರಿಸಿ ಸಮಿತಿಯನ್ನು ರಚನೆ ಮಾಡಬೇಕಿತ್ತು. ಆದರೆ ಒಂದೇ, ಸಮುದಾಯದ 7 ಸದಸ್ಯರು ಮತ್ತು ಬಿ.ಜೆ.ಪಿ. ಯ ಕಾರ್ಯಕರ್ತ ಬಾಷ ಎಂಬ ವ್ಯಕ್ತಿಯನ್ನು ಸೇರಿಸಿ ಒಟ್ಟು 8 ಜನರ ಸಮಿತಿ ರಚನೆ ಮಾಡಿದ್ದಾರೆ. ಆದ್ದರಿಂದ ಈ ಸಮಿತಿಯು ಯಾವ ಮಾನದಂಡದಿಂದ ನೋಡಿದರೂ ಕ್ರಮ ಬದ್ಧವಾಗಿಲ್ಲ ಎಂದು ಹೇಳಿದರು.

ಅಲ್ಲದೇ ದತ್ತ ಜಯಂತಿ ನಡೆಸುವ ಸಂದರ್ಭದಲ್ಲಿ ಗುಹೆಯ ಹೊರಗೆ ಆವರಣದಲ್ಲಿ ಪೂಜೆ ನಡೆಸಲು ಎರಡು ದಿನಕ್ಕೆ ಮಾತ್ರ ಆರ್ಚಕರನ್ನು ನೇಮಿಸಿಕೊಂಡು ಕಾನೂನು ಬಾಹಿರವಾಗಿ ಅರ್ಚಕರನ್ನು ಮುಂದುವರೆಸಿದ್ದಾರೆ. ಹಾಗೂ ಆವರಣದಲ್ಲಿ ಹೋಮಗಳನ್ನು ನಡೆಸುವುದಾಗಿ ಹೇಳಿ, ಮೊದಲ ಬಾರಿಗೆ ಕಾನೂನುಬಾಹಿರವಾಗಿ ಗುಹೆಯ ಒಳಭಾಗದಲ್ಲಿ ಹೋಮವನ್ನು ನಡೆಸಿ ಮುಜರಾಯಿ ಇಲಾಖೆಯ ಮೊಹಮದನ್ ಸಂಸ್ಥೆಯ ಆಚರಣೆಗಳಿಗೆ ದಕ್ಕೆ ಉಂಟು ಮಾಡಿದ್ದಾರೆ ಎಂದರು.

ಮೊಹಮ್ಮದೀಯ ಸಂಸ್ಕೃತಿಯ ಪ್ರಕಾರ ನಡೆಸುವ ಆಚರಣೆಗಳ ಬದಲು ಕೋಮುವಾದಿ ಸಂಘಟನೆಗಳು ನಡೆಸುವ ಹೊಸ ಹೊಸ ಆಚರಣೆಗಳನ್ನು ಜಿಲ್ಲಾ ಆಡಳಿತ ತಡೆಹಿಡಿಯುವ ಬದಲು ಅವರಿಗೆ ಅವಕಾಶ ನೀಡುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ದುಃಖದ ವಿಷಯ. ದಯವಿಟ್ಟು ಜಿಲ್ಲಾಡಳಿತ ಇದರ ಬಗ್ಗೆ ಗಮನಿಸಿ ಇಂತಹ ಕೃತ್ಯವನ್ನು ನಡೆಸುತ್ತಿರುವ ಕೋಮುವಾದಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಎಂದ ಅವರು ಈ ವ್ಯವಸ್ಥಾಪನ ಸಮಿತಿಯನ್ನು ರದ್ದುಪಡಿಸಬೇಕಾಗಿ ಮನವಿ ಮಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!