May 20, 2024

MALNAD TV

HEART OF COFFEE CITY

ಪಿ.ಪಿ. ಸುದ್ದಿಗಳನ್ನೆ ಅವಲಂಭಿಸಿರುವ ಕೆಲ ದೃಶ್ಯ ಮಾಧ್ಯಮ ಮತ್ತು ಮುದ್ರಣಾ ಮಾಧ್ಯಮಗಳ ನಿರ್ವಾಹಕರೇ ಎಚ್ಚರ! ಎಚ್ಚರ!

1 min read

ಚಿಕ್ಕಮಗಳೂರು : ಪಿ.ಪಿ. ಸುದ್ದಿಗಳನ್ನೆ ಅವಲಂಭಿಸಿರುವ ಕೆಲ ದೃಶ್ಯ ಮಾಧ್ಯಮ ಮತ್ತು ಮುದ್ರಣಾ ಮಾಧ್ಯಮಗಳ ನಿರ್ವಾಹಕರೇ ಎಚ್ಚರ! ಎಚ್ಚರ!

ಇತ್ತಿಚೆಗೆ ಎಲ್ಲರಿಗಿಂತ ಮುನ್ನ ಸುದ್ದಿ ನೀಡುವ ಅಮಲಿನಲ್ಲಿ ಸುದ್ದಿಯ ಸತ್ಯಾಸತ್ಯಾತೆಯನ್ನು ಅವಲೋಕಿಸದೆ ಸುದ್ದಿ ಮಾಡುವ ಭರದಲ್ಲಿ ಪಿ.ಪಿ.ಗಳು  ನೀಡುವ ಸುದ್ದಿಯನ್ನು ಹಾಕುವುದರಿಂದ ಕುಟುಂಬವೊಂದು ಬೀದಿಗೆ ಬಿದ್ದಿದೆ. ಈ ಬಗ್ಗೆ ಆತ್ಮಹತ್ಯೆ ಮಾಡಿಕೊಂಡ ರೈತನ ಮಗನು ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದು, ತನ್ನ ತಂದೆಯ ಆತ್ಮಹತ್ಯೆಗೆ ಕಾರಣವನ್ನು ದೂರಿನಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಆರದವಳ್ಳಿ ಗ್ರಾಮದಲ್ಲಿ ವೈಯುಕ್ತಿಕ ದ್ವೇಷದಿಂದ ಗ್ರಾಮದ ಉಮೇಶ್, ಕೀರ್ತಿರಾಜ್, ಎ.ಎಸ್. ಮೋಹನ್ ಕುಮಾರ್, ಎ.ಯು. ಪ್ರಕಾಶ್, ಸುಪ್ರೀತ್ ಹಾಗೂ ರಜನೀಕಾಂತ್ ಎಂಬುವವರು ಅಕ್ರಮವಾಗಿ ತೋಟಕ್ಕೆ ಪ್ರವೇಶಿಸಿ, ಬೆಳಗಿನ ಜಾವದಲ್ಲಿ ಸುಮಾರು ಎರಡು ವರ್ಷದ ಪ್ರಾಯದ 120 ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಡಿದು ಹಾಕಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನ ಬಂಧಿಸಬೇಕೆಂಬ ತೋಟದ ಮಾಲೀಕರಾದ ಎ.ಎಂ, ಶಿವಾನಂದ್ ರವರು ನೀಡಿದ ಸುದ್ದಿಯನ್ನು ದುಡ್ಡಿನ ಆಸೆಗಾಗಿ ಯಾವುದೇ ಸತ್ಯಾಸತ್ಯತೆಯನ್ನು ಯೊಚಿಸದೆ, ಪಿ.ಪಿ.ಗಳು ನೀಡಿದ್ದ ಸುದ್ದಿಯನ್ನು ಕೆಲವು ಮುದ್ರಣಾ ಮಾಧ್ಯಮಗಳು ಹಾಗೂ ಸ್ಥಳೀಯ ದೃಶ್ಯ ಮಾಧ್ಯಮಗಳು ವರದಿ ಮಾಡಿದ್ದವು. ಅಲ್ಲದೆ ಎ.ಎಂ, ಶಿವಾನಂದ್ ಹಾಗೂ ಅವರ ಕುಟುಂಬಸ್ಥರು ಉಮೇಶ್ ರವರ ಮನೆ ಬಳಿಗೆ ಹೋಗಿ ಅವ್ಯಾಚ್ಯವಾಗಿ ಸಾರ್ವಜನಿಕವಾಗಿ ಬೈಯ್ದು ಅಪಮಾನಿಸಿದ್ದರು.

ಏಕಾಏಕಿ ತೋಟದ ಮಾಲೀಕ ಎ.ಎಂ, ಶಿವಾನಂದ್ ಹಾಗೂ ಅವರ ಕುಟುಂಬಸ್ಥರು  ಯಾವುದೇ ಸೂಕ್ತ ಸಾಕ್ಷ್ಯಧಾರಗಳಿಲ್ಲದೆ ನಿರಾಧಾರವಾಗಿ ರೈತ ಉಮೇಶ್ ಮನೆಯ ಮುಂದೆ ಬಂದು ಸಾರ್ವಜನಿಕವಾಗಿ ಅವ್ಯಾಚ್ಯವಾಗಿ ಬೈಯ್ದು ಅಪಮಾನಿಸಿದ್ದು ಹಾಗೂ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿಯಿಂದ ಮನನೊಂದು ರೈತ ಉಮೇಶ್ ಬುಧವಾರದಂದು ಕೊಟ್ಟಿಗೆಯಲ್ಲಿ ನೇಣುಬಿಗಿದುಕೊಂಡು ಸಾವನಪ್ಪಿದ್ದಾರೆ.

ಕೇವಲ ದೂರುದಾರರು ಪೊಲೀಸ್ ಠಾಣೆಗೆ ಅನುಮಾನದಿಂದ ನೀಡಿದ ದೂರಿನ ನಕಲನ್ನೇ ಸತ್ಯವೆಂದು ಪರಿಭ್ರಮಿಸಿ ಹಣದ ಆಮೀಷಕ್ಕೆ ಬಲಿಯಾಗಿ ಪಿ.ಪಿ. ಗಳು ನೀಡಿದ ಸುದ್ದಿಯನ್ನು ಮುದ್ರಿಸಿದ ಪತ್ರಿಕೆಗಳು ಹಾಗೂ ಪ್ರಸಾರ ಮಾಡಿದ ದೃಶ್ಯ ಮಾಧ್ಯಮಗಳ ಎಡವಟ್ಟಿನಿಂದಾಗಿ ಅಮಾಯಕ ರೈತ ಮರ್ಯಾದೆಗೆ ಅಂಜಿ ಕುಣಿಕೆಗೆ ಕೊರಳೊಡ್ಡಿದರೆ, ಆತನನೆ ನಂಬಿದ ಕುಟುಂಬ ಬೀದಿಗೆ ಬಿದ್ದಿದೆ.

ರೈತ ಉಮೇಶ್ ಆತ್ಮಹತ್ಯೆಯಿಂದ ಬೇಸತ್ತ ರೈತ ಉಮೇಶನ ಮಗ ಎ.ಯು. ಪ್ರಕಾಶ್ ಸಾವಿನ ಕಾರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪಿ.ಪಿ.ಗಳು ಸುದ್ದಿಯನ್ನೇ ಅವಲಂಭಿಸಿರುವ ಸುದ್ದಿಗಾರರು ಈ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!