ಕಸದ ಡಂಪಿಂಗ್ ಯಾರ್ಡ್ ಕಾಮಗಾರಿ ತಡೆದ ನಗರಸಭೆ ಉಪಾಧ್ಯಕ್ಷ
1 min readಚಿಕ್ಕಮಗಳೂರು: ನಗರಸಭೆ ಕಸದ ಡಂಪಿಂಗ್ ಯಾರ್ಡ್ ಕಿತ್ತಾಟ ಜೋರಾಗಿದ್ದು ಖುದ್ದು ನಗರಸಭೆ ಉಪಾಧ್ಯಕ್ಷರೇ ಆಮರಾಂತ ಉಪವಾಸ ಕುಳಿತು ಪ್ರತಿಭಟನೆ ವೇಳೆ ಜೆಸಿಬಿ ತಡೆದು ಕೆಲಸ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ನಗರದೊಳಗೆ ಕಸದ ಡಂಪಿಂಗ್ ಯಾರ್ಡ್ ಆರಂಭಿಸುತ್ತಿರುವುದಕ್ಕೆ ಖುದ್ದು ನಗರಸಭೆ ಉಪಾಧ್ಯಕ್ಷ ಅಮೃತೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಡಂಪಿಂಗ್ ಯಾರ್ಡ್ ಸ್ಥಳಾಂತರಿಸುವವರೆಗೂ ಅಮರಣಾಂತ ಉಪವಾಸ ಆರಂಭಿಸಿದ್ದು, ಜೆಸಿಬಿ ಕಾಮಗಾರಿಯನ್ನು ತಡೆಯುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.
ನೆಹರು ನಗರದ ಸಹರಾ ಶಾದಿ ಮಹಲ್ ಪಕ್ಕ ಕಸದ ಡಂಪಿಂಗ್ ಯಾರ್ಡ್ ನಿರ್ಮಾಣ ವಾಗುತ್ತಿದ್ದು, ಎರಡು ವರ್ಷದ ಹಿಂದೆಯೇ ಈ ವಿಚಾರವಾಗಿ ವಿರೋಧವಿತ್ತು. ಇದು ತಾತ್ಕಾಲಿಕ ಬದಲಾವಣೆ ಮಾಡಿ, ಬದಲಿ ವ್ಯವಸ್ಥೆಯನ್ನು ಮಾಡುವುದಕ್ಕೆ ಅಧ್ಯಕ್ಷರು ಹಾಗೂ ಶಾಸಕರು ಕೂಡ ತಿಳಿಸಿದಕ್ಕೆ ಅವರು ಸ್ಥಳಾಂತರ ಮಾಡುವುದಾಗಿ ಹೇಳಿದರು. ಆದರೆ ಇದೀಗ ಮತ್ತೆ ಕೆಲಸ ಆರಂಭಿಸಿದ್ದು, ಈ ಜಾಗವು ಡೋಬಿ ಜನಾಂಗದವರಿಗೆ ಸೇರಿದ್ದು, ಎಂದು ಅವರು ತಂತಿ ಬೇಲಿ ಹಾಕಿದ್ದರು. ಈ ಸಂಬಂಧ ಅಧ್ಯಕ್ಷರು ಒಂದು ಮಾತು ಸಹಾ ಕೇಳದೆ ಏಕಾಏಕಿ ಅದನ್ನ ತೆರವುಗೊಳಿಸಿದ್ದಾರೆ. ಎಂದು ಅಮೃತೇಶ್ ಆರೋಪಿಸಿದರು. ಅಧ್ಯಕ್ಷರ ದರ್ಬಾರ್ ಕೇಳೋರು ಯಾರು ಇಲ್ಲ ಅಂತ ಹೀಗೆ ಮಾಡುತ್ತಿದ್ದಾರಾ..? ಸಾರ್ವಜನಿಕರಿಗೆ ಯಾಕೆ ಸಮಸ್ಯೆ ಮಾಡಬೇಕು..? ಊರಿನ ಹೊರವಲಯದದಲ್ಲಿ ಜಾಗ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡುತ್ತಾರೆ ಎಂದು ಅಧ್ಯಕ್ಷರು ಮತ್ತೊಮ್ಮೆ ಖಚಿತ ಮಾಡುತ್ತಿದ್ದಾರೆ, ಸುಮಾರು ವರ್ಷಗಳ ಹಿಂದೆ ಇಲ್ಲಿ ದೇವಸ್ಥಾನ ಕೂಡ ಇತ್ತು ಹಾಗಾಗಿ ಇಲ್ಲಿ ಮರು ದೇವಸ್ಥಾನ ಮತ್ತು ಡೋಬಿ ಘಾಟ್ ವ್ಯವಸ್ಥೆ ಆಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ಮಹಿಳಾ ಮುಖಂಡರಾದ ಸುಜಾತ ಎಚ್ಚರಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g