May 20, 2024

MALNAD TV

HEART OF COFFEE CITY

ಇ-ಸ್ವತ್ತು ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಹೆಚ್ ಡಿ ತಮ್ಮಯ್ಯ ಚಾಲನೆ

1 min read

ಚಿಕ್ಕಮಗಳೂರು: ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಮನೆ ಮನೆಗೆ ಹೋಗಿ ಇ-ಸ್ವತ್ತು ವಿತರಣೆ ಮಾಡುವ ಕಾರ್ಯಕ್ರಮವನ್ನು ಇಂದು ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದು ಇದಕ್ಕೆ ಶಾಸಕ ಹೆಚ್ ಡಿ ತಮ್ಮಯ್ಯ ಚಾಲನೆ ನೀಡಿದರು. ಸಾಂಕೇತಿಕವಾಗಿ ಇ-ಸ್ವತ್ತು ವಿತರಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದವರು ಅವರು ಜನರ ಮನೆ ಬಾಗಿಲಿಗೆ ಇ-ಸ್ವತ್ತು ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆಯೇ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ, ಜನಸ್ನೇಹಿ ಆಡಳಿತ ಮಾಡುವುದಾಗಿ ತಿಳಿಸಿದ್ದೆವು. ಅದಕ್ಕಾಗಿ ಜನ ಸಂಪರ್ಕ ಸಭೆಗಳನ್ನು ಸಹ ಕರೆದು ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಸಹ ಮಾಡಿದ್ದೇವೆ ಎಂದರು.

ಜಿಲ್ಲೆಯ ಜನತೆಯು -ಖಾತೆ ಗಳನ್ನು ಪಡೆಯುವುದಕ್ಕಾಗಿ ನಗರಸಭೆಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಮನೆ ಮನೆಗೆ ಹೋಗಿ ಇ-ಖಾತೆಗಳನ್ನು ತಲುಪಿಸುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ.  ಈ ಹಿಂದೆ 1 ರಿಂದ 2 ತಿಂಗಳು ಇ-ಸ್ವತ್ತಿಗಾಗಿ ನಗರಸಭೆಗೆ ಅಲೆಯಬೇಕಾಗಿತ್ತು, ಇದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆಗಳನ್ನು ನೀಡಿದರೆ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.

ಈ ಖಾತೆಯನ್ನು ಪಡೆಯಬೇಕಾದಲ್ಲಿ ಕಂದಾಯ ಚುಕ್ತಾ ರಶೀದಿ, ಆಸ್ತಿ ಮಾಲಿಕನ ಫೋಟೋ, ಮೂಲ ದಾಖಲೆಗಳು, ವಿಭಾಗ ಪತ್ರ, ಕ್ರಯ ಪತ್ರದ ನಕಲು, ಪಿತ್ರಾರ್ಜಿತ ಆಸ್ತಿಯಿಂದ ಬಂದಿದ್ದರೆ ಅದರ ನಕಲು, ಆಧಾರ ಕಾರ್ಡ್, ಬಿಪಿಎಲ್ ಕಾರ್ಡ್ ಈ ಎಲ್ಲಾ ದಾಖಲೆಗಳನ್ನು ನಗರಸಭೆಗೆ ಕೊಟ್ಟರೆ 7 ದಿನದೊಳಗಾಗಿ ಮನೆ ಬಾಗಿಲಿಗೆ ಇ-ಸ್ವತ್ತು ತಲುಪುತ್ತದೆ ಎಂದು ಹೇಳಿದರು.

ಸರ್ಕಾರ ಸವಲತ್ತುಗಳು ಜನರಿಗೆ ತಲುಪಬೇಕು. ನಗರಸಭೆಯಲ್ಲಿ ಕುಂಠಿತವಾಗಿರುವ ಅಭಿವೃದ್ಧಿ ಕೆಲಸಗಳಿಗೆ ವೇಗ ಕೊಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನ ಹಾಕಿಕೊಳ್ಳಲಾಗಿದೆ. ನಗರೋತ್ತನ ಯೋಜನೆ ಅಡಿಯಲ್ಲಿ ಕಾಮಗಾರಿ ಮಂಜೂರಾಗಿದ್ದು ಆದರೆ ಕೆಲಸಗಳು ಮುಂದುವರೆದಿಲ್ಲ ಎಂದಾದರೆ ಆ ಕಾಮಗಾರಿಕೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರನ್ನು ಕರೆಸಿ ಸಭೆ ಮಾಡಿ ತಕ್ಷಣವಾಗಿ ಕಾಮಗಾರಿಗಳನ್ನು ಪ್ರಾರಂಭ ಮಾಡುತ್ತೇವೆ ಎಂದರು.

ಅಮೃತ್ ಯೋಜನೆ ಅಡಿ 2-3 ವಾರ್ಡ್ಗಳನ್ನು ಹೊರತುಪಡಿಸಿ ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದೇವೆ. ಶೇಕಡ 90 ರಷ್ಟು ಒಳಚರಂಡಿ ಕಾಮಗಾರಿಗಳು ಮುಗಿದಿದೆ. ಜನತೆಯು ವಿಶ್ವಾಸವಿಟ್ಟು ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ. ಸರಿಯಾಗಿ ದಾಖಲೆಗಳನ್ನು ನೀಡಿ ಇ -ಖಾತೆಗಳನ್ನು ಪಡೆಯಿರಿ ಎಂದ ಅವರು ದಾಖಲೆಗಳನ್ನು ಕೊಟ್ಟು ಇ -ಖಾತೆ ಬರಲಿಲ್ಲ ಎಂದಾದರೆ ಇದನ್ನ ನಮ್ಮ ಅಥವಾ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಿ ತಕ್ಷಣ ಇ -ಖಾತೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸರಿಯಾಗಿ ಕಸದ ವಿಂಗಡಣೆ ಆಗಬೇಕು. ಇದಕ್ಕೆ ನಿಮ್ಮ ಸಹಕಾರದೊಂದಿಗೆ ನಮ್ಮ ಜೊತೆ ಸದಾ ಇರಬೇಕೆಂದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಬಿ ಸಿ ಬಸವರಾಜ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಇ-ಸ್ವತ್ತು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಗೆ ಬೇಕಾದ ಸೌಲಭ್ಯಗಳನ್ನ ಮನೆ ಮನೆಗೆ ಹೋಗಿ ತಲುಪಿಸಬೇಕು ಎಂದು ಶಾಸಕರು ಸೂಚಿಸಿದ್ದರು. ಈ ಹಿನ್ನೆಲೆ ಅಧ್ಯಕ್ಷರು ಸಿಬ್ಬಂದಿಗಳು ಒಳಗೊಂಡಂತೆ ಏಳು ದಿನಗಳ ಒಳಗೆ ಇ-ಸ್ವತ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತೇವೆ. ಆಸ್ತಿ ತೆರಿಗೆಗಳನ್ನು ಪಾವತಿ ಮಾಡಿ ನಗರಸಭೆಗೆ ಅರ್ಜಿ ಕೊಟ್ಟರೆ ಏಳು ದಿನಗಳ ಒಳಗಾಗಿ ನಿಮಗೆ ಇ- ಸ್ವತ್ತುಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಕಳೆದ 20 ತಿಂಗಳಿಂದ ಹಲವಾರು ದೂರುಗಳು ನಗರಸಭೆಗೆ ಕೇಳಿ ಬಂದ ಹಿನ್ನೆಲೆ ಮನೆ ಬಾಗಿಲಿಗೆ ಇ-ಖಾತೆಯನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಬೇರೆ ಯಾವುದೇ ದೂರುಗಳಿದ್ದರೂ ನಮ್ಮ ಕಚೇರಿಗೆ ಬಂದು ದೂರು ನೀಡಿದ್ದಲ್ಲಿ ತಕ್ಷಣವಾಗಿ ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!