May 19, 2024

MALNAD TV

HEART OF COFFEE CITY

ಕಸದ ಜೊತೆ ಕಸದ ಗುಂಡಿಗೆ ಬಿದ್ದ ಕಸದ ಆಟೋ

1 min read

ಕಸವನ್ನ ಡಂಬಿಂಗ್ ಯಾರ್ಡ್‍ನಲ್ಲಿ ಡಂಪ್ ಮಾಡುವಾಗ ಕಸದ ಸಮೇತ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್‍ನಲ್ಲಿ ಬಿದ್ದರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮತ್ತಿಗಟ್ಟೆ ಮಾರ್ಗದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಡಂಪಿಂಗ್ ಯಾರ್ಡ್ ನಿರ್ಮಿಸಿದೆ. ಗ್ರಾಮದ ಕಸವನ್ನ ಡಂಪಿಂಗ್ ಯಾರ್ಡ್‍ನಲ್ಲಿ ಡಂಪ್ ಮಾಡುವ ವೇಳೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್ ಒಳಕ್ಕೆ ಬಿದ್ದಿದೆ. ಕಸ ವಿಲೇವಾರಿ ಘಟಕದ ಬಳಿ ಸೂಕ್ತವಾದ ರಸ್ತೆ ಇಲ್ಲ. ಮಳೆ ಬಂದು ಸಾಕಷ್ಟು ಕೆಸರು ತುಂಬಿತ್ತು. ಹಾಗಾಗಿ, ಈ ವೇಳೆ ಕಸದ ಜೊತೆ ಕಸದ ಆಟೋ ಕೂಡ ಡಂಪಿಂಗ್ ಯಾರ್ಡ್‍ನಲ್ಲಿ ಬಿದ್ದಿದೆ. ಬಳಿಕ, ಸಾವನ್ನಪ್ಪಿದ್ದ ಹಸುವನ್ನ ಮಣ್ಣು ಮಾಡಲು ಬಂದಿದ್ದ ಜೆಸಿಬಿಯನ್ನ ಕರೆಸಿ ಸುಮಾರು 12 ಅಡಿ ಆಳದ ಗುಂಡಿಯೊಳಕ್ಕೆ ಬಿದ್ದಿದ್ದ ಆಟೋವನ್ನ ಮೇಲೆ ಎತ್ತಿದ್ದಾರೆ. ಕಸದ ಆಟೋ ಜೊತೆ ಆಟೋ ಡ್ರೈವರ್ ಕೂಡ ಗುಂಡಿಯೊಳಗೆ ಬಿದ್ದಿದ್ದಾನೆ. ಆದರೆ, ಆತನಿಗೆ ಏನೂ ಆಗಿಲ್ಲ. ಸಣ್ಣ-ಪುಟ್ಟ ಗಾಯಗಳಾಗಿವೆ. ಆಟೋ ಗುಂಡಿಯೊಳಕ್ಕೆ ಬಿದ್ದ ಕೂಡಲೇ ಚಾಲಕ ಮೇಲೆ ಎದ್ದು ಬಂದಿದ್ದಾನೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!