May 20, 2024

MALNAD TV

HEART OF COFFEE CITY

ಅಕ್ರಮ ಕಾಸಾಯಿಖಾನೆ ಮೇಲೆ ನಗರಸಭೆ ಅಧಿಕಾರಿ ಸಿಬ್ಬಂದಿ ದಾಳಿ

1 min read

ಚಿಕ್ಕಮಗಳೂರು: ನಗರದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆ ಮೇಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಎರಡು ಶೆಡ್‍ಗಳನ್ನು ತೆರವುಗೊಳಿ ಸಿದ್ದಾರೆ.ಬೆಳಿಗ್ಗೆ ಸಂತೆಮೈದಾನದ ಸಮೀಪದಲ್ಲಿರುವ ತಮಿಳು ಕಾಲೋನಿಯಲ್ಲಿ ಅಕ್ರಮ ವಾಗಿ ಕಾಸಾಯಿಖಾನೆ ನಡೆಸುತಿದ್ದು ಬೆಳಕಿಗೆ ಬಂದಿದ್ದು, ಜೆಸಿಬಿಯೊಂದಿಗೆ ತೆರಳಿದ ಅಧಿ ಕಾರಿ ಮತ್ತು ಸಿಬ್ಬಂದಿಗಳ ತಂಡ ಶೆಡ್‍ಗಳನ್ನು ನಾಶಗೊಳಿಸಿದ್ದಾರೆ. ಶೆಡ್ ಮಾಲೀಕ ಸೇರಿ ದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ವಾರ್ಡ್ 22ರಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ಮನೆಗೆ ತೆರಳುವ ವೇಳೆ ಶೆಡ್‍ವೊಂದರಲ್ಲಿ 4 ರಿಂದ 5 ಜನ ಇಣುಕಿ ನೋಡುತ್ತಿದ್ದರು. ಇದರಿಂದ ಅನು ಮಾನಗೊಂಡ ಅಧಿಕಾರಿಗಳ ತಂಡ ಪೊಲೀಸರಿಗೆ ಮಾಹಿತಿ ನೀಡಿ ಶೆಡ್ ಸಮೀಪ ತೆರಳಿದಾಗ ಕೌಂಪೌಂಡ್ ಎಗರಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಶೆಡ್ ಒಳಗೆ ಪರಿಶೀಲನೆ ನಡೆಸಿದಾಗ 3 ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂ ದಿದೆ. ಅಕ್ರಮವಾಗಿ ನಿರ್ಮಿಸಿರುವ ಶೆಡ್‍ನಲ್ಲಿ ಕಾಸಾಯಿಖಾನೆ ನಡೆಸುತ್ತಿರುವುದು ಕಂಡು ಬಂದಿದ್ದು, ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಶೆಡ್ ತೆರವುಗೊಳಿಸಿ ಸೈಟ್ ಮಾಲೀಕ ಹಾಗೂ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ಜಾಗದಲ್ಲಿ ಪೊಲೀಸರು ದಾಳಿ ನಡೆಸಿ ಗೋಹತ್ಯೆ ಮಾಡಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ದಾಳಿ ವೇಳೆ ನಗರಸಭೆ ಪೌರಾಯುಕ್ತ ಬಸವರಾಜ್, ಆರೋಗ್ಯ ನಿರೀಕ್ಷಕರಾದ ಶಶಿಧರ್, ಈಶ್ವರ, ರಂಗಪ್ಪ, ಮೇಲ್ವಿಚಾರಕ ಅಣ್ಣಯ್ಯ, ವೆಂಕಟೇಶ್, ಸತೀಶ್, ರಮೇಶ್, ಮುರುಗೇಶ್, ಶ್ರೀನಿ ವಾಸ್ ಇದ್ದರು.

‘ನಗರದಲ್ಲಿ ಅಕ್ರಮ ಕಾಸಾಯಿಖಾನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಇಂದು ದಾಳಿ ನಡೆಸಿ 2 ಶೆಡ್‍ಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಗಿದೆ. ಇಂದಿನಿಂದಲೇ ಗೋಹತ್ಯೆ ಯನ್ನು ನಿಲ್ಲಿಸದಿದ್ದರೇ ಮುಂದಿನ ದಿನಗಳಲ್ಲಿ ದಾಳಿ ನಡೆಸಿ ಕಾಸಾಯಿಖಾನೆ ನಡೆಸುತ್ತಿರುವ ಶೆಡ್‍ಗಳನ್ನು ತೆರವುಗೊಳಿಸಲಾಗುವುದು.’
-ವರಸಿದ್ಧಿ ವೇಣುಗೋಪಾಲ್, ನಗರಸಭೆ ಅಧ್ಯಕ್ಷ.

‘ಎಂದಿನಂತೆ ವಾಡ್ 22ರಲ್ಲಿ ಸ್ವಚ್ಛತೆ ಕಾರ್ಯ ನಡೆಸಲು ನಗರಸಭೆ ಸಿಬ್ಬಂದಿ ಮತ್ತು ಅಧಿ ಕಾರಿಗಳ ತಂಡ ತಮಿಳು ಕಾಲೋನಿಗೆ ತೆರಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ತೆರಳುವ ವೇಳೆ ಶೆಡ್‍ವೊಂದರಲ್ಲಿ 4 ರಿಂದ 5 ಜನರು ಅನುಮಾನಸ್ಪದವಾಗಿ ನಡೆದು ಕೊಳ್ಳುತ್ತಿರುವು ದು ಕಂಡು ಬಂದಿದ್ದು, ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಶೆಡ್ ಮೇಲೆ ದಾಳಿ ನಡೆಸಲಾಯಿತು. ಅಧಿಕಾರಿಗಳ ತಂಡ ಶೆಡ್ ಬಳಿ ತೆರಳುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಿ ದ್ದು, ಶೆಡ್ ಪ್ರವೇಶಿಸಿ ನೋಡಿದಾಗ ಅಕ್ರಮವಾಗಿ ಗೋಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಶೆಡ್ ತೆರವುಗೊಳಿಸಲಾಗಿದೆ. ಜಾಗದ ಮಾಲೀಕ ಸೇರಿದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’
-ಬಿ.ಸಿ.ಬಸವರಾಜ್, ನಗರಸಭೆ ಪೌರಾಯುಕ್ತ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!