May 19, 2024

MALNAD TV

HEART OF COFFEE CITY

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ

1 min read

ಕಳಸ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಭರವಸೆ ನೀಡಿದರು. ಕಳಸ ತಾಲ್ಲೂಕು ಮರಸಣಿಗೆ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಮನವಿ ಸ್ವೀಕರಿಸಿ ನಂತರ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಹಾಗೂ ಖಾಯಂ ವೈದ್ಯರ ನೇಮಕ ಸೇರಿದಂತೆ ಸಿಬ್ಬಂದಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಚೆನ್ನಡ್ಲು ಗ್ರಾಮದಲ್ಲಿ ಅತಿವೃಷ್ಟಿ ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ಮರಸಣಿಗೆ ಗ್ರಾಮ ಪಂಚಾಯತ್ ಸದಸ್ಯ ವಿನ್ಸೆಂಟ್ ಫರ್ತಾಡೋ ಮಾತನಾಡಿ, ಕಳಸ ತಾಲ್ಲೂಕು ಅತೀ ಹೆಚ್ಚು ಕಾರ್ಮಿಕರನ್ನು ಹೊಂದಿದ್ದು, ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ದೂರಿದರು.ಎಕ್ಸ್ರೇ ವಿಭಾಗದ ಸಿಬ್ಬಂದಿ ಮಂಜುಳಾ ಎಂಬುವರ ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ಬಂದಿಲ್ಲ. ಹಾಜರಾತಿ ಪುಸ್ತಕದಲ್ಲಿ ಅವರ ಸಹಿ ಇದೆ. ಕರ್ತವ್ಯಕ್ಕೆ ಹಾಜರಾಗದೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ಹೇಗೆ ಸಾಧ್ಯ. ಕಳಸ ತಾಲ್ಲೂಕು ಕೇಂದ್ರವಾಗಿದ್ದು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದರು.

ಸಿಪಿಐ ಪಕ್ಷದ ಮುಖಂಡ ಗೋಪಾಲ್ ಶೆಟ್ಟಿ ಮಾತನಾಡಿ, ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಈ ಹಿಂದೆ ಪಕ್ಷದ ವತಿಯಿಂದ ಚಳವಳಿ ನಡೆಸಿದ್ದು, ಇಲಾಖಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ವೈದ್ಯರ ನೇಮಕ ಸೇರಿದಂತೆ ಆಸ್ಪತ್ರೆಯ ಸಮಸ್ಯೆ ಗಳು ಪರಿಹಾರ ಕಂಡಿಲ್ಲ. ಇದರಿಂದ ಈ ಭಾಗದ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಜಿಲ್ಲಾಧಿಕಾರಿ ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಪ್ರತಿಕ್ರಿಯಿಸಿ, ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ಸಲು ಜಿಲ್ಲಾಡಳಿತದಿಂದ ಸಾಧ್ಯವಿಲ್ಲ. ಸರ್ಕಾರ ಮಟ್ಟದಲ್ಲಿ ಆಗಬೇಕಿದೆ. ಈ ಸಂಬAಧ ಸರ್ಕಾರದ ಗಮನಕ್ಕೆ ತರಲಾಗುವುದು. ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಎಕ್ಸ್ರೇ ಸಿಬ್ಬಂದಿ ರಜೆಮೇಲೆ ತೆರಳಿದ್ದರೂ ಹಾಜರಾತಿ ಹಾಕುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮವಹಿಸ ಲಾಗುವುದು ಎಂದರು.

ಕಳಸ ತಾಲ್ಲೂಕು ಚೆನ್ನಡ್ಲು ಗ್ರಾಮದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸಂಭವಿಸಿದ ಅತಿವೃಷ್ಟಿಗೆ 17 ಕುಟುಂಬಗಳು ಮನೆ, ಜಮೀನು ಕಳೆದುಕೊಂಡಿದ್ದಾರೆ. ಮೂರು ವರ್ಷ ಕಳೆ ದರೂ ಸಂತ್ರಸ್ಥರಿಗೆ ಇನ್ನೂ ಪುನರ್ವಸತಿ ಒದಗಿಸಿಲ್ಲ. ಸಂತ್ರಸ್ಥರಿಗೆ ನಿವೇಶನ ಜಾಗ ಗುರುಸಿ ದ್ದರೂ ನಿವೇಶನ ಹಕ್ಕುಪತ್ರ ವಿತರಿಸಿಲ್ಲ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಅತಿವೃಷ್ಟಿ ಸಂತ್ರಸ್ಥರ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಚೆನ್ನಡ್ಲು ಗ್ರಾಮದ 17ಸಂತ್ರಸ್ಥರಿಗೆ ನಿವೇಶನ ಜಾಗ ಗುರುತಿಸ ಲಾಗಿದ್ದು, ಮುಂದಿನ ಒಂದು ವಾರದೊಳಗೆ ಎಲ್ಲರಿಗೂ ಹಕ್ಕುಪತ್ರ ವಿತರಣೆ ಮಾಡಲಾಗು ವುದು ಎಂದು ತಿಳಿಸಿದರು.

ಮರಸಣಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸ.ನಂ.155ರಲ್ಲಿ 7ಎಕರೆ ಜಮೀನು ಗುರುತಿಸಲಾಗಿದೆ. ಆದರೆ ಜಾಗಕ್ಕೆ ಇದುವರೆಗೂ ಮಂಜೂರಾತಿ ಸಿಕ್ಕಿಲ್ಲ. ಇದರಿಂದ ನಿವೇಶನ ಒದಗಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ ಎಂದು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ್ ಹಾಗೂ ಸದಸ್ಯ ವಿನ್ಸೆಂಟ್ ಫುರ್ತಾಡೋ ತಿಳಿಸಿದರು.

ಜಿಲ್ಲಾಧಿಕಾರಿ ರಮೇಶ್ ಮಾತನಾಡಿ, ನಿವೇಶನಕ್ಕೆ ಗುರುತಿಸಿರುವ ಜಾಗಕ್ಕೆ ಸಂಬoಧಿಸಿದ0ತೆ ಅರಣ್ಯ ಇಲಾಖೆಯಿಂದ ಎನ್‌ಓಸಿ ಕೊಡಿಸಲಾಗುವುದು. ನಿವೇಶನ ಹಂಚಿಕೆ ಸಂಬAಧ ಪ್ರಕ್ರಿಯೆಗಳಿಗೆ ಶೀಘ್ರ ಕ್ರಮವಹಿಸಲಾಗುವುದು ಎಂದರು.ಹಿರೇಬೈಲು ಗ್ರಾಮದಲ್ಲಿ ಆಟೋ ನಿಲ್ದಾಣಸಮಸ್ಯೆ ಸಂಬ0ಧ ಆಟೋನಿಲ್ದಾಣ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದರು. ಕಳಸ ತಾಲ್ಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಗಳ ಜಾಗಕ್ಕೆ ಸಂಬoಧಿಸಿದoತೆ ದಾಖಲಾತಿ ಗಳಿಲ್ಲದಿರುವು, ಡೀಮ್ಡ್ ಅರಣ್ಯ ಸಮಸ್ಯೆ, ಫಾರಂ ನಂ.53ರ ಅರ್ಜಿಗಳಿಗೆ ಕಂದಾಯ ಅಧಿಕಾರಿಗಳಿಂದ ನಕಲಿ ಸಾಗುವಳಿ ಚೀಟಿ ವಿತರಣೆ, ವಿದ್ಯುತ್ ಸಮಸ್ಯೆ, ಮರಸಣಿಗೆ ಗ್ರಾ.ಪಂ. ಘನತ್ಯಾಜ್ಯ ವಿಲೇವಾರಿ ಸಮಸ್ಯೆ, ಕಳಸ ಗ್ರಾಮಠಾಣಾ ಜಾಗದ ಸಮಸ್ಯೆ, ಪ್ರವಾಸಿಗರಿಂದ ಮಲೆನಾಡಿನ ಪರಿಸರ ಹಾಳಾಗುತ್ತಿರುವುದು ಮತ್ತಿತರ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಸಭೆಯಲ್ಲಿ ವಿವಿಧ ಗ್ರಾಮಗಳ ಜನರು ಅಹವಾಲುಗಳನ್ನು ಸಲ್ಲಿಸಿದರು. ಈ ಪೈಕಿ 25 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು. ಬಾಕೀ ಅರ್ಜಿಗಳ ಶೀಘ್ರ ವಿಲೇ ವಾರಿಗೆ ಕ್ರಮಕೈಗೊಳ್ಳುವಂತೆ ಸಂಬoಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಮುಖಂಡರಾದ ಶ್ರೇಣಿಕ್, ತಾಪಂ ಮಾಜಿ ಸದಸ್ಯ ರಫೀಕ್, ಗ್ರಾಪಂ ಅಧ್ಯಕ್ಷ ವಿಶ್ವನಾಥ್, ಸದಸ್ಯ ವಿನ್ಸೆಂಟ್, ಎಡಿಎಲ್‌ಆರ್ ರುದ್ರೇಶ್, ತಹಶೀಲ್ದಾರ್ ನಾಗರಾಜ್, ಉಪತಹಶೀಲ್ದಾರ್ ಹೇಮಂತ್, ಕಳಸ ವಲಯದ ಅರಣ್ಯಾಧಿಕಾರಿ, ಗ್ರಾಪಂ ಪಿಡಿಒ ಸೇರಿ ದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!