May 20, 2024

MALNAD TV

HEART OF COFFEE CITY

ಸಂತೋಷ್ ಆತ್ಮಹತ್ಯೆ ತನಿಖೆ ಬಳಿಕ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ:ಸಿ.ಟಿ ರವಿ

1 min read

ಚಿಕ್ಕಮಗಳೂರು: ಸ್ವಾಭಾವಿಕವಾಗಿ ವಿಪಕ್ಷದವರು ರಾಜೀನಾಮೆಗೆ ಆಗ್ರಹಿಸುವುದು ಸಹಜ. ಆ ಸ್ಥಾನದಲ್ಲಿ ನಾವು ಇದ್ದಿದ್ರು ಅದನ್ನೇ ಮಾಡುತ್ತಿದ್ದೆವು, ಸಾರ್ವಜನಿಕ ಜೀವನದಲ್ಲಿ ಕೆಲವೊಮ್ಮೆ ಈ ರೀತಿಯ ಆರೋಪಗಳಿಗೆ ಅನಿವಾರ್ಯವಾಗಿ ತಲೆಕೊಡುವ ಪರಿಸ್ಥಿತಿ ಬರಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ಈಶ್ವರಪ್ಪ ಮಾತುಕತೆ ನಡೆಸಿ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.ನಗರದಲ್ಲಿ ಬುಧವಾರ ಗುತ್ತಿಗೆದಾದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕ ಸಂಶಯಗಳನ್ನು ದೂರಗೊಳಿಸಲು ಮುಖ್ಯಮಂತ್ರಿ ಹಾಗೂ ಕೆ.ಎಸ್ ಈಶ್ವರಪ್ಪ ಸೂಕ್ತ ನಿರ್ಧಾರ ತಗೆದುಕೊಳ್ಳುತ್ತಾರೆ. ಈ ಕುರಿತು ಪಕ್ಷ ಯಾವುದೇ ಸೂಚನೆ ನೀಡಿಲ್ಲ. ಮೇಲ್ನೋಟಕ್ಕೆ ಈ ಘಟನೆಯಲ್ಲಿ ಈಶ್ವರಪ್ಪ ಅವರ ಪಾತ್ರ ಕಂಡು ಬಂದಿಲ್ಲ. ನಾನು ಹೇಳಿದ್ರೆ ಯಾರು ನಂಬಲ್ಲ ಹಾಗಾಗಿ ಕಾಂಗ್ರೆಸ್ ಅಥವಾ ಮತ್ಯಾರೋ ಸೂಕ್ತ ದಾಖಲೆಗಳಿದ್ರೆ ತನಿಖಾ ದಳದ ಮುಂದೆ ಸಲ್ಲಿಸಲಿ. ತನಿಖೆ ಬಳಿಕ ತಪ್ಪುಮಾಡಿದವರು ಸೂಕ್ತ ಶಿಕ್ಷೆ ಅನುಭವಿಸುತ್ತಾರೆ ಎಂದರು.

 

ತನಿಖೆ ನಡೆಸದೇ ಕಾನೂನಲ್ಲಿ ಯಾರಿಗೂ ಶಿಕ್ಷ ನೀಡುವ ಅವಕಾಶ ಇಲ್ಲ. ಹಾಗೇನಾದ್ರು ತನಿಖೆ ನೆಡೆಸದೇ ಗಲ್ಲಿಗೇರಿಸುವುದಾದರೆ ಬಹಳ ಜನ ಕಾಂಗ್ರೆಸ್‍ನವರು ಖಾಲಿಯಾಗಬೇಕಾಗುತ್ತದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ ಮೇಲೂ ಸಹ ಹಲವು ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ರಾಹುಲ್, ಸೋನಿಯಾ ಗಾಂಧಿಜಾಮೀನಿನ ಮೇಲೆ ಹೊರಗೆ ಇದ್ದಾರೆ. ಹಾಗಾಗಿ ತನಿಖೆ ನಡೆಸದೇ ಶಿಕ್ಷ ನೀಡಲು ಅವಕಾಶ ಇಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.ಸಂತೋಷ್ ಪಾಟೀಲ್ ಸಾವು ದುರಾದೃಷ್ಟಕರ ಯಾವುದೇ ಜೀವವಾದ್ರು ಜೀವಕ್ಕೆ ಬೆಲೆ ಇರುತ್ತದೆ. ಅವರು ಆತ್ಮಹತ್ಯೆಯ ದಾರಿಯನ್ನು ಹಿಡಿಯಬಾರದಿತ್ತು.ಈ ಬಗ್ಗ ಸಮಗ್ರ ತನಿಖೆ ನಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇನೆ ಎಂದರು.

 

ನಲವತ್ತು ಪರ್ಸೆಂಟ್ ಕಮಿಷನ್ ಎಂಬುದು ಸುಳ್ಳಿನ ಸಂಗತಿ. ನಲವತ್ತು ಪರ್ಸೆಂಟ್ ನೀಡಿದ್ರೆ ಕಳ್ಳ ಬಿಲ್ ಬರೆಯಬೇಕು ಕೆಲಸ ಮಾಡಲು ಸಾಧ್ಯವಿಲ್ಲ ನಲವತ್ತು ಪರ್ಸೆಂಟ್ ಎಂಬುದು ಆರೋಪಗಳಷ್ಟೇ ಎಂದು ತಿಳಿಸಿದರು.ಈ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಭಿತ್ತಿ ಬೆಳೆಸಿದ್ದು ಕಾಂಗ್ರೆಸ್ ಪಕ್ಷ, ಅವರು ಈಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ, ಅದು ಸುಳ್ಳಿನ ಸಂಗತಿ. ಇವತ್ತಿನ ಸಿಮೆಂಟ್, ಡಾಂಬರು, ಕಬ್ಬಿಣದ ದರದಲ್ಲಿ ಎಸ್‍ಆರ್ ರೇಟ್‍ಗೆ ಕೆಲಸ ಮಾಡುವುದು ಕಷ್ಟ. ಇಂತಹ ಸಂದರ್ಭದಲ್ಲಿ ನಲವತ್ತು ಪರ್ಸೆಂಟ್ ಕಮಿಷನ್ ಕೊಟ್ಟು ಕಾಮಗಾರಿ ಮಾಡುವುದು ಹಾಸ್ಯಾಸ್ಪದ ಸಂಗತಿ. ಕಾಂಗ್ರೆಸ್ ಮೇಲಿನ ಹತ್ತು ಪರ್ಸೆಂಟ್ ಆರೋಪ ಮರೆಮಾಚಲು ಹಾಗೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಹೇಳಿದರು.

 

ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಆತ ಪತ್ರ ಬರೆದ ಸಂದರ್ಭದಲ್ಲಿ ನಾನು ಈಶ್ವರಪ್ಪ ಅವರ ಬಳಿ ಚರ್ಚೆ ಮಾಡಿದ್ದೆ. ಆಗ ಅವರು ವರ್ಕ್ ಆರ್ಡರ್ ತಗೆದುಕೊಂಡಿಲ್ಲ, ಸ್ಯಾಂಕ್ಷನ್ ಲೆಟರ್ ಇಲ್ಲ ಕೆಲಸ ಮಾಡಿರುವುದಾಗಿ ಹೇಳಿದ್ದರು. ನಾನು ಅಧಿಕಾರಿಗಳ ಬಳಿ ಮಾತನಾಡಿದಾಗ ವರ್ಕ್ ಆರ್ಡರ್ ಇಲ್ಲದೇ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಅಂತಾ ಹೇಳುತ್ತಿದ್ದಾರೆ ಅಂತಾ ತಿಳಿಸಿದ್ದರು. ಕೆಲವೊಮ್ಮೆ ಸ್ಥಳೀಯವಾಗಿ ಜನರ ಪ್ರೀತಿ ಗಳಿಸುವ ಹಿನ್ನೆಲೆ ಉತ್ಸಾಹದಲ್ಲಿ ಕೆಲಸ ಮಾಡಿರುತ್ತಾರೆ. ಆದ್ರೆ ಸರ್ಕಾರದ ನಿಯಮದ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು. ಆತ ಯಾರ ಮಾತು ಕೇಳಿ ಕೆಲಸ ಮಾಡಿದ್ದಾರೆ ಎಂದು ತನಿಖೆ ಆದ್ರೆ ತಿಳಿಯುತ್ತದೆ ಎಂದು ತಿಳಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!