May 20, 2024

MALNAD TV

HEART OF COFFEE CITY

ಜನರ ಆರೋಗ್ಯ ರಕ್ಷಣೆ ಇಲಾಖೆಯ ಪ್ರಥಮ ಆಧ್ಯತೆ – ದಿನೇಶ್ ಗುಂಡೂರಾವ್

1 min read

ಚಿಕ್ಕಮಗಳೂರು – ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಗರೀಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಬದ್ದರಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಭರವಸೆ ನೀಡಿದರು.

ಅವರು ಇಂದು ನಗರಕ್ಕಾಗಮಿಸಿ ಜಿಲ್ಲಾ ಕಾಂಗ್ರೆಸ್‌ ಕಛೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಗರೀಕರು ಭೇಟಿ ನೀಡಿದಾಗ ಪ್ರಥಮವಾಗಿ ಕಾಯಿಲೆಯ ಬಗ್ಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಬಹಳ ಮುಖ್ಯ ಚಿಕಿತ್ಸೆ ಸರಿಯಾಗಿ ಸಿಗದಿದ್ದಾಗ ಭಾವೋದ್ವೇಗದಿಂದ ಮಾತನಾಡುವ ಸೂಕ್ಷ್ಮ ಇಲಾಖೆಯಾಗಿದ್ದು ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಗುರಿ ಹೊಂದಲಾಗಿದೆ ಎಂದರು.

ಜನರ ಆರೋಗ್ಯ ರಕ್ಷಣೆ ಮಾಡುವುದು ಇಲಾಖೆಯ ಪ್ರಥಮ ಆಧ್ಯತೆಯಾಗಿದೆ ರೋಗಕ್ಕೆ ತುತ್ತಾಗುವ ಮುನ್ನ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ವ್ಯವಸ್ತೆ ಆಗಬೇಕು. ಇದು ಕಾರ್ಯರೂಪಕ್ಕೆ ಬಂದಾಗ ಆರೋಗ್ಯ ಸುಧಾರಣೆ ಆಗುತ್ತದೆ ಜೊತೆಗೆ ಕಾಯಿಲೆ ಪತ್ತೆಯಾದರೆ ಗುಣಪಡಿಸುವುದು ಸುಲಭವಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವ ಜೊತೆಗೆ ಎಲ್ಲಾ ರೀತಿಯ ಔಷಧಗಳು ಇಲ್ಲಿಯೇ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರಿಯಾದ ಸಮಯಕ್ಕೆ ಔಷಧಿಗಳನ್ನು ಸರಬರಾಜು ಮಾಡಲು ಕ್ರಮವಹಿಸುವುದಾಗಿ ತಿಳಿಸಿದ ಅವರು ಖಾಸಗಿ ಮೆಡಿಕಲ್‌ಗಳಿಂದ ಔಷಧಿಗಳನ್ನು ಖರೀದಿಸುವುದು ನಿಲುತ್ತದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ತಂಡ ಹಾಗೂ ಕಾರ್ಯಕರ್ತರ ಪರಿಶ್ರಮದಿಂದಾಗಿ 5 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಭೂತ ಪೂರ್ವ ಗೆಲುವಿಗೆ ಕಾರಣವಾಗಿರುವ ಎಲ್ಲರನ್ನುಗೌರವಿಸುವುದಾಗಿ ತಿಳಿಸಿದ ಅವರು ಪಕ್ಷದ ಗೆಲುವಿಗೆ ಶ್ರಮಿಸಿದ ಮುಖಂಡರುಗಳಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಲು ಬದ್ಧವಾಗಿರುವುದಾಗಿ ಬರವಸೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಸರಳ ಸೌಜನ್ಯದ ಸಚಿವರಾಗಿರುವ ದಿನೇಶ್‌ಗುಂಡೂರಾವ್‌ರವರು ಉತ್ತಮ ಸ್ನೇಹಜೀವಿಯಾಗಿದ್ದಾರೆ. ಆಹಾರ ಸಚಿವರಾಗಿದಾಗ ಅನ್ನಭಾಗ್ಯ ಯೊಜನೆ ಅನುಷ್ಠಾನ ಮಾಡಿದಾಗ ಜನರಲ್ಲಿ  ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು ಈಗ ಜಿಲ್ಲೆಯಲ್ಲಿರುವ ವೈದ್ಯರ ಕೊರತೆಯನ್ನು ನೀಗಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ|| ಕೆ.ಪಿ ಅಂಶುಮಂತ್ ಮಾತನಾಡಿ ಸಚಿವರು ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಪಕ್ಷ ಸಂಘಟನೆ ಮಾಡಿ ಯುವಕರ ಕಣ್ಮಣಿಯಾಗಿ ಸ್ಪೂರ್ತಿ ತುಂಬಿದರು. ಪಕ್ಷದಲ್ಲಿ ಎಲ್ಲರನ್ನೂ ಗೌರವಿಸುವ ಜೊತೆಗೆ ಜಿಲ್ಲೆಗೆ ವಿಶೇಷವಾದ ಆಸಕ್ತಿ, ಪ್ರೀತಿ ತೋರಿಸುತ್ತಾರೆ ಎಂದು ಬಣ್ಣಿಸಿದರು.

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾಗಿದ್ದಾಗ ಅನೇಕ ಜನಪರ ಹೋರಾಟಗಳಲ್ಲಿ ಭಾಗವಹಿಸಿ ಸಾಮಾನ್ಯ ನಡಿಗೆ ಮಾಡಿದ್ದಾರೆ ಈಗ ಆರೋಗ್ಯ ಸಚಿವರಾಗಿರುವ ಅವರು ಜಿಲ್ಲೆಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವಂತೆ ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ ಮಾತನಾಡಿ ಜಿಲ್ಲಾಸ್ಪತ್ರೆಗಳು ಸೇರಿದಂತೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜನರಿಕ್  ಮೆಡಿಸಿನ್ ಸುಲಭವಾಗಿ ರೋಗಿಗಳಿಗೆ ದೊರೆಯುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ಇದ್ದು ಜೊತೆಗೆ ಇವರುಗಳಿಗೆ ಬಿಲ್ಡಿಂಗ್ ನಿರ್ಮಿಸಿ ವೈದ್ಯರು, ದಾದಿಯರು ಅಲ್ಲೆ ವಾಸವಿದ್ದು ಜನರ ಸೇವೆ ಮಾಡಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಅಮೇರಿಕ, ಸಿಂಗಾಪುರ ಮಾದರಿಯಲ್ಲಿ ರಾಜ್ಯದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳನ್ನು ನಿರ್ಮಿಸುವ ಜೊತೆಗೆ ಎಲ್ಲಾ ರೋಗಗಳಿಗೆ ಉತ್ತಮವಾದ ಆರೋಗ್ಯ ಸೇವೆ ಸಿಗುವಂತೆ ಮಾಡಿದರೆ ಬೇರೆ ಬೇರೆ ದೇಶಗಳಿಗೆ ಚಿಕಿತ್ಸೆಗಾಗಿ ಹೋಗುವುದು ತಪ್ಪುತ್ತದೆ ಜೊತೆಗೆ ಬಡವರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರುಗಳಾದ ಜಿ.ಹೆಚ್. ಶ್ರೀನಿವಾಸ್, ಕೆ.ಎಸ್. ಆನಂದ್, ಮುಖಂಡರುಗಳಾದ ಡಾ|| ಡಿ.ಎಲ್. ವಿಜಯ್‌ಕುಮಾರ್, ಹೆಚ್.ಪಿ ಮಂಜೇಗೌಡ, ಕೆ.ಮಹಮದ್, ಎಂ.ಸಿ.ಶಿವಾನಂದಸ್ವಾಮಿ, ವೆಂಕಟೇಶ್‌ನಾಯ್ಡ್, ತನೋಜ್, ನಯಾಜ್‌ಅಹಮ್ಮದ್, ಅಕ್ಬರ್‌ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!