May 20, 2024

MALNAD TV

HEART OF COFFEE CITY

ಗ್ರಾಮದ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ವೈದ್ಯರ ನಡೆ ಹಳ್ಳಿಯ ಕಡೆ ವಿನೂತನ ಕಾರ್ಯಕ್ರಮ

1 min read

ಚಿಕ್ಕಮಗಳೂರು : ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಬಸ್ಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಲಿತಮ್ಮ ಹಾಗೂ ಕೆ ಆರ್ ಪೇಟೆ ಗ್ರಾಮ ಪಂಚಾಯಿತಿ ಪಿ ಡಿ ಓ ಗಂಗಾಧರ ಚಾಲನೆ ನೀಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಕೆ ಆರ್ ಪೇಟೆ – ವ್ಯಾಪ್ತಿಯ ಕೆಳಗಣೆ ಹಾಗೂ ಬಿಕ್ಕೆಮನೆ ಗ್ರಾಮದಲ್ಲಿ ಮನೆ ಭೇಟಿ ಮಾಡಿ, ಆರೋಗ್ಯ ತಪಾಸಣೆ ನಡೆಸಿದ ವೈದ್ಯಾಧಿಕಾರಿಗಳಾದ ಡಾ. ವಿದ್ಯಾಸಾಗರ್ ಕರೋನ ಬಗ್ಗೆ ಸೋಂಕಿನ ಲಕ್ಷಣಗಳಿದ್ದರೆ ಸ್ಥಳದಲ್ಲಿಯೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ನೀಡಿದರು, ಹಾಗೂ ತಪ್ಪದೇ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳುವ ಅಂತೆ ತಿಳಿಸಿ ಪ್ರತಿಯೊಬ್ಬರೂ ಮಾಸ್ಕನ್ನು ಕಡ್ಡಾಯವಾಗಿ ಹಾಕುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಹೊರಗಡೆ ಹೋಗಿ ಬಂದ ನಂತರ ಮನೆ ಒಳಗಡೆ ಹೋಗುವ ಮೊದಲು, ಕೈಕಾಲುಗಳನ್ನು ಸಾಬೂನಿಂದ ತೊಳೆದುಕೊಂಡು ಹೋಗುವಂತೆ, ಅಥವಾ ಸ್ಯಾನಿಟೈಜರ್ ಉಪಯೋಗಿಸುವಂತೆ ತಿಳಿಸಿದರು. ಈ ಮನೆ ಭೇಟಿಯ ಸಂದರ್ಭದಲ್ಲಿ 45 ಜನರಿಗೆ ಕರೋನ ಪರೀಕ್ಷೆ ಮಾಡಿಸಲಾಯಿತು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲಗೌಡ, ಪ್ರಶಾಂತ್, ಪಿಡಿಒ ನಾಗರಾಜ್ ಕಾರ್ಯದರ್ಶಿ ಧರ್ಮೇಗೌಡ, ಹಿರಿಯ ಆರೋಗ್ಯ ಮೇಲ್ವಿಚಾರಕರಾದ. ಆಶಾ, ಜಿ.ಡಿ. ಮೂರ್ತಿ, ಎಂ.ಎಲ್.ಹೆಚ್.ಪಿ. ಗಂಗಾಧರ್, ಆರೋಗ್ಯ ಸುರಕ್ಷಾ ಅಧಿಕಾರಿ ವಿನಿತ, ಗ್ರಾಮ ಪಂಚಾಯಿತಿ ಸಿಬ್ಬಂಧಿ ನಾಗೇಶ್, ಫಾರ್ಮಸಿಸ್ಟ್ ಸುರೇಶ್, ಆರೋಗ್ಯ ಸುರಕ್ಷಾ ಅಧಿಕಾರಿ ಜಯಾ, ಆನಂದ್, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ, https://www.youtube.com/channel/UCmBISI2sn_0gamb44UFj-vQ

 

Credits:

 

Music : latest 2020 6 different no copyright news background music, royalty free (black mart)

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!