May 4, 2024

MALNAD TV

HEART OF COFFEE CITY

ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಶ್ರೀಗಂಧದ ಮರಗಳು ನಾಶ

1 min read

ಚಿಕ್ಕಮಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ಶ್ರೀಗಂಧದ ಮರಗಳು ಸುಟ್ಟು ಕರಕಲಾಗಿರುವ ಘಟನೆ ತರೀಕೆರೆ ತಾಲ್ಲೂಕಿನ ಶಿವಪುರ ಸಮೀಪ ನಡೆದಿದೆ. ಬಿರು ಬೇಸಿಗೆ ಹಿನ್ನೆಲೆಯಲ್ಲಿ ಬದುಗಳಿಗೆ ಹಚ್ಚಿದ ಬೆಂಕಿ ಹತ್ತಾರು ಎಕರೆ ತೋಟಕ್ಕೆ ಆವರಿಸಿ ಲಕ್ಷಾಂತರ ಮೌಲ್ಯದ ಶ್ರೀಗಂಧದ ಮರಗಳು ಸುಟ್ಟು ಕರಕಲಾಗಿವೆ.

ಆಕಸ್ಮಿಕ ಬೆಂಕಿ ತಗುಲಿ ನೂರಾರು ಶ್ರೀಗಂಧದ ಮರಗಳು ತರೀಕೆರೆಯ ಶಿವಪುರ ತೋಟದಲ್ಲಿ, ಬೆಂಕಿಗಾಹುತಿಯಾಗಿವೆ, ಶ್ರೀಗಂಧದ ಫೇಮಸ್ ಬೆಳೆಗಾರ ವಿಶುಕುಮಾರ್ ತೋಟದಲ್ಲಿ ಈ ಬೆಂಕಿ ಅನಾಹುತ ನಡೆದಿದ್ದು, ಇದೇ ವೇಳೆ ಹನಿ ನೀರಾವರಿಗೆ ಅಳವಡಿಸಿದ್ದ ಪ್ಲಾಸ್ಟಿಕ್ ಪೈಪ್ ಗಳು ಸಹಾ ಬೆಂಕಿಗಾಹುತಿಯಾಗಿವೆ.

ಬದುಗಳಿಗೆ ಬೆಂಕಿ ಹಚ್ಚಿದಾಗ ಅದು ಆಕಸ್ಮಿಕವಾಗಿ ತೋಟಕ್ಕೆ ಆವರಿಸಿರುವ ಶಂಕೆ ವ್ಯಕ್ತವಾಗಿದ್ದು, ನೂರಾರು ಮರಗಳು ಸುಟ್ಟು ಕರಕಲಾಗಿ, ಲಕ್ಷಾಂತರ ರೂ. ನಷ್ಟ, ಉಂಟಾಗಿದೆ ಎಂದು ಬೆಳೆಗಾರ ವಿಶುಕುಮಾರ್ ತಿಳಿಸಿದ್ದಾರೆ. ಘಟನೆ ಸಂಬಂಧ ಅರಣ್ಯ ಇಲಾಖೆಗೆ ದೂರು ಸಹಾ ನೀಡಲಾಗಿದೆ. ಬೇಸಿಗೆ ಸಮೀಪಿಸುತ್ತಿರುವ ಹೊತ್ತಲ್ಲೇ ಜಿಲ್ಲೆಯಲ್ಲಿ ಅಗ್ನಿ ಅನಾಹುತಗಳು ದಿನೆ ದಿನೇ ಹೆಚ್ಚುತ್ತಿವೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!