September 21, 2024

MALNAD TV

HEART OF COFFEE CITY

ಚಿಕ್ಕಮಗಳೂರು ನಗರಸಭೆಯಿಂದ ಮತ್ತೆ ಎಂ.ಜಿ ರಸ್ತೆ ಪಾರ್ಕಿಂಗ್ ಗೆ ಟೆಂಡರ್

1 min read

 

ಈ ಹಿಂದೆ ಒಮ್ಮೆ ನಗರದ ಎಂ.ಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ವಿಧಿಸುವ ಕುರಿತಾಗಿ ವ್ಯಾಪಕ ಟೀಕೆ, ವಿರೋಧಕ್ಕೆ ಗುರಿಯಾಗಿದ್ದ ಚಿಕ್ಕಮಗಳೂರು ನಗರಸಭೆ ಇದೀಗ ಮತ್ತೊಮ್ಮೆ ಅದೇ ಹುತ್ತಕ್ಕೆ ಕೈ ಹಾಕಿದೆ.

ನಗರದ ಪ್ರತಿಷ್ಠಿತ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನ ನಿಲ್ಲಿಸುವವರು ಇನ್ನು ಮುಂದೆ ಕಿಸೆಯಲ್ಲಿ ಹಣ ಇಟ್ಟುಕೊಂಡಿರಬೇಕು. ಚಿಕ್ಕಮಗಳೂರು ನಗರಸಭೆಯ ಈ ನೂತನ ಪದ್ದತಿ ಸಾರ್ವಜನಿಕರ ಜೇಬಿಗೆ ನೇರವಾಗಿ ಕತ್ತರಿ ಹಾಕಲು ಮುಂದಾಗಿರುವುದೇ ಇದಕ್ಕೆ ಕಾರಣ. ವಾಹನಗಳ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಟೆಂಡರ್ ಕರೆದಿರುವ ಇದೇ ಜನವರಿ 19 ಕ್ಕೆ ಬಹಿರಂಗ ಹರಾಜು ನಡೆಸಲಿದೆ. ಇದಕ್ಕೂ ಮೊದಲು ಇ- ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ಜನವರಿ 18 ಕ್ಕೆ ನಡೆಯಲಿದೆ.

10.79 ಲಕ್ಷ ಮೌಲ್ಯದ ಟೆಂಡರ್ ನಲ್ಲಿ ವಾಹನಗಳ ನಿಲುಗಡೆಗೆ ವಿವಿಧ ಹಂತಗಳಲ್ಲಿ ವಸೂಲಿಗೆ ಬಿಡ್ ಕರೆಯಲಾಗಿದೆ.

ನಾಲ್ಕು ಚಕ್ರದ ವಾಹನಗಳಿಗೆ ಪ್ರತಿ ಗಂಟೆಗೆ 10 ರೂ ನಿಗದಿ ಪಡಿಸಲಾಗಿದ್ದು, ದಿನ 24 ಗಂಟೆ ಪಾರ್ಕಿಂಗ್ ಗೆ 40 ರೂ ಶುಲ್ಕ ಕಟ್ಟ ಬೇಕಾಗುತ್ತದೆ.

ಈ ಹಿಂದೆಯೂ ಎಂ.ಜಿ.ರಸ್ತೆಯ ಪಾರ್ಕಿಂಗ್ ವಿಚಾರವಾಗಿ ವ್ಯಾಪಕ ವಿರೋಧ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ನಗರಸಭೆ ಪ್ರಸ್ತಾವನೆಯನ್ನು ಕೈ ಬಿಟ್ಟಿತ್ತು. ಇದೀಗ ಮತ್ತೆ ಅದೇ ಜೇನುಗೂಡಿಗೆ ಕೈ ಹಾಕುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಖಾತ್ರಿ ಯಾಗಿದೆ. ಎಂ.ಜಿ ರಸ್ತೆಯ ನಿವಾಸಿಗಳು, ವರ್ತಕರು ನಗರಸಭೆ ಯ ಈ ನಿರ್ಧಾರಕ್ಕೆ ಕೆಂಡಾಮಂಡಲರಾಗಿದ್ದು ಇದೊಂದು ಹಗಲು ದರೋಡೆ ಎಂದೇ ಟೀಕಿಸುತ್ತಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಎಲ್ಲೂ ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುತ್ತಿಲ್ಲ ಚಿಕ್ಕಮಗಳೂರು ನಗರಸಭೆ ಜನ ವಿರೋಧಿ ಎಂಬುದಕ್ಕೆ ಇದು ಸಾಕ್ಷಿ ಎಂದು ವಿರೋಧ ಪಕ್ಷಗಳ ಆರೋಪ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!