ರಾಷ್ಟ್ರೀಯ ಹೆದ್ದಾರಿ ಎಡವಟ್ಟು : ನಾಮಫಲಕಗಳಲ್ಲಿ ಸಖತ್ ಕನ್ಫ್ಯೂಷನ್
1 min read
ಶಿವಮೊಗ್ಗ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ಹೆದ್ದಾರಿ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ನಡುವೆ ಟೋಲ್ ಗಳ ಹಾವಳಿಯೂ ವಿಪರೀತಗೊಂಡಿದೆ, ಅಲ್ಲದೇ ನಾಮಫಲಕಗಳ ಎಡವಟ್ಟು ಮಾತ್ರ ಸಹಿಸಲಸಾಧ್ಯ.
ಬೆಂಗಳೂರು ಹೊನ್ನಾವರ ಚತುಷ್ಪಥ ರಸ್ತೆಯಲ್ಲಿ( BH 206) ಸಂಚರಿಸೋ ಪ್ರಯಾಣಿಕರು ಒಮ್ಮೆ ಇದನ್ನು ಗಮನಿಸಿ,, ಕಡೂರಿನಿಂದ ಬೆಂಗಳೂರಿಗೆ 992 ಕಿ.ಮೀ..! ದೂರವಿದೆ ಅಂತೆ , ಅದೇ
ಕಡೂರಿನಿಂದ ದಾಬಸ್ ಪೇಟೆಗೆ ಕೇವಲ 167 ಕಿ.ಮೀ..!. ಅಂತೆ ಅಬ್ಬಾ ಏನ್ರಿ ಇದು ಎಂದು ಹುಬ್ಬೇರಿಸಬೇಡಿ, ಇದು ಎನ್.ಎಚ್ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಮಹಾ ಎಡವಟ್ಟು, ಕಡೂರಿನಿಂದ ಬೇಲೂರು 105 ಕಿ.ಮೀ..!. ಇದೆಯಂತೆ,
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇಂತಹ ಫಲಕಗಳ ಅವಾಂತರ ಒಂದೆರಡಲ್ಲ, ಕಡೂರಿನಿಂದ ಬೆಂಗಳೂರು ಸಂಪರ್ಕಿಸುವ ರಸ್ತೆಯಲ್ಲಿ ಯಡವಟ್ಟುಗಳ ಸರಮಾಲೆಯೇ ಎದ್ದು ಕಾಣುತ್ತದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ತಪ್ಪಿಗೆ ಪ್ರಯಾಣಿಕರು ಗಲಿಬಿಲಿ ಯಾಗುವಂತಾಗಿದೆ. ಗೂಗಲ್ ಮ್ಯಾಪ್ ಹಾಕಿ ಬಂದವರ ದಾರಿ ತಪ್ಪಿಸಿದ ಹೆದ್ದಾರಿ ಪ್ರಾಧಿಕಾರ ಈ ರೀತಿ ಮಾಡಿರುವುದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ.
ಕಡೂರು TO ಬೆಂಗಳೂರು 186 KM ಬದಲು 992 ಕಿ.ಮೀ ಎಂದು ನಮೂದು ಮಾಡಿರುವುದು ಗಾಬರಿ ಹುಟ್ಟಿಸಿದೆ. 85 ಕಿಲೋಮಿಟರ್ ದೂರದಲ್ಲಿರೋ ಹಾಸನ ಕಡಿಮೆ ಮಾಡಿ 65 ಕಿ.ಮೀ ಎಂದು ಬರೆಯಲಾಗಿದೆ. ಒಂದಲ್ಲ ಎರಡಲ್ಲ ಬಹುತೇಕ ಊರುಗಳ ಕಿ.ಮೀ ಅಂತರದ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಿದೆ.
ಕುವೆಂಪು ವಿಶ್ವವಿದ್ಯಾನಿಲಯ ಶಿವಮೊಗ್ಗದ ಶಂಕರಘಟ್ಟದಲ್ಲಿದೆ
ಆದರೆ ಕಡೂರು ಬಳಿಯೇ ದೊಡ್ಡ ಬೋರ್ಡ್ ಹಾಕಿರುವುದು ವಿದ್ಯಾರ್ಥಿಗಳಲ್ಲೂ ಗೊಂದಲ ಮೂಡಿಸಿದೆ. ಸರಿಯಾದ ಸೂಚನಾ ಫಲಕವಿಲ್ಲದೆ ಅಪಘಾತಗಳು ಸಹಾ ನಿತ್ಯ ಹೆಚ್ಚುತ್ತಿದ್ದು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸವಾರರು ಹಾಗೂ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g