May 20, 2024

MALNAD TV

HEART OF COFFEE CITY

ನನ್ನ ಮಣ್ಣು, ನನ್ನ ದೇಶ ಅಭಿಯಾನ

1 min read

ಚಿಕ್ಕಮಗಳೂರು-ಜನರ ಮಾನಸಿಕತೆಯನ್ನು ಒಗ್ಗೂಡಿಸಿ ನಾವು ಭಾರತೀಯರೆಂಬ ಭಾವನೆಯನ್ನು ಗಟ್ಟಿಗೊಳಿಸಲು “ನನ್ನ ಮಣ್ಣು, ನನ್ನ ದೇಶ” ಎಂಬ ಅಭಿಯಾನವನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ತಿಳಿಸಿದರು.ಅವರು ಇಂದು ಸಮೀಪದ ನಲ್ಲೂರಿನ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ “ನನ್ನ ಮಣ್ಣು ನನ್ನ ದೇಶ”ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶದ ಜನರನ್ನು ಒಗ್ಗೂಡಿಸಲು ಬಿಜೆಪಿ ಈ ಅಭಿಯಾನವನ್ನು ಕೈಗೆತ್ತಿಕೊಂಡಿದೆ, ಈ ಮೂಲಕ ಹಲವಾರು ರೀತಿಯ ಪ್ರಯತ್ನ ಮಾಡುತ್ತಿದೆ. ನೆಲ, ಜಲ, ಭೂಮಿ ವಿಷಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಒಡೆದಾಳುವ ರಾಜಕೀಯಕ್ಕೆ ಬಳಕೆ ಮಾಡುತ್ತಿರುವುದನ್ನು ಖಂಡಿಸಿದರು.ಭಾಷೆ, ನೆಲ, ಜಲ, ಜಮೀನು ಅವೆಲ್ಲವೂ ಕೂಡ ಜನರನ್ನು ಒಗ್ಗೂಡಿಸುವ ಪ್ರಯತ್ನವಾಗಿದ್ದು, ಜನರ ಭಾವನೆಯನ್ನು ಜೋಡಿಸಲು ಈ ಅಭಿಯಾನದ ಉದ್ದೇಶವಾಗಿದೆ ಎಂದ ಅವರು ಭಾವನಾತ್ಮಕವಾಗಿ ದೇಶದ ಜನರೆಲ್ಲಾ ಒಂದು ಎಂಬ ಭಾವನೆಯಿಂದ “ನನ್ನ ಮಣ್ಣು ನನ್ನ ದೇಶ” ಅಭಿಯಾನದ ಮೂಲಕ ಗಟ್ಟಿಗೊಳಿಸಲಾಗುತ್ತಿದೆ ಎಂದರು.

ದೇಶವನ್ನು ವಿಭಜನೆ ಮಾಡಲು ಹೊರಟಿರುವವರಿಗೆ ಈ ಅಭಿಯಾನದ ಮೂಲಕ ನಾವೆಲ್ಲಾ ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡಲು ಬದ್ಧರಾಗಿದ್ದೇವೆ, ಈ ನಿಟ್ಟಿನಲ್ಲಿ ಈ ಅಭಿಯಾನ ಚಿಕ್ಕ ಪ್ರಯತ್ನವಾಗಿ ಸಹಕಾರಿಯಾಗಲಿದೆ ಎಂದು ಹೇಳಿದರು.ಮುಂಬರುವ ಲೋಕಸಭಾ ಚುನಾವಣೆ ಸಂಬAಧ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಗಮನ ಸೆಳೆದಾಗ ಮಾತುಕತೆ ನಡೆಯುತ್ತಿದೆ, ಒಪ್ಪಂದ ಗಟ್ಟಿಯಾದ ನಂತರ ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದರು.ಜಗತ್ತಿನ 20 ಕ್ಕೂ ದೇಶಗಳು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿದ್ದಾರೆ ಆದರೆ ಇಲ್ಲಿರುವ ಕೆಲವು ರಾಜಕೀಯ ಪಕ್ಷದ ಮುಖಂಡರು ಇದನ್ನು ಸಹಿಸಿಕೊಳ್ಳದೆ ತಿರುಚುತ್ತಿದ್ದಾರೆ. ಸನಾತನ ಧರ್ಮಕ್ಕೆ ಅಪಚಾರ ಮಾಡಿ ಹೇಳಿಕೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಭಾರತವನ್ನು ಭಾರತ ಎಂದು ಕರೆಯಲು ವಿರೋಧಿಸುತ್ತಿರುವ ಇವರು ಸಮಾಜ ಒಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ ಇದನ್ನು ನೋಡಿದರೆ ಸಾಮೂಹಿಕ ಮತಾಂತರಗೊAಡವರAತೆ ಅಥವಾ ಸಮೂಹ ಸನ್ನಿಗೊಳಗಾದವರಂತೆ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

 

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಸಿ ಕಲ್ಮರುಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ತತ್ವದಡಿ ಬಿಜೆಪಿ ಒಂದು ವಿಭಿನ್ನವಾದ ರಾಜಕೀಯ ಪಕ್ಷವಾಗಿದೆ ಎಂದು ತಿಳಿಸಿದರು.ದೇಶದ ವಿಚಾರವನ್ನು ಗತವೈಭವಕ್ಕೆ ಕೊಂಡೊಯ್ಯಬೇಕೆAಬ ದೃಷ್ಠಿಯಿಂದ ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಉಳಿಸುವ ನಿಟ್ಟಿನಲ್ಲಿ ದೇಶ ಕಟ್ಟುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರ ಆದೇಶಿಸಿರುವಂತೆ “ನನ್ನ ಮಣ್ಣು, ನನ್ನ ದೇಶ” ಎಂಬ ಅಭಿಯಾನ ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಭಾರತವನ್ನು ಕಟ್ಟಲಿಕ್ಕೆ ಪ್ರತಿ ಗ್ರಾಮದಿಂದ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ಆ ಮೂಲಕ ದೇಶದ ಜನರನ್ನು ಒಗ್ಗೂಡಿಸಲು ಕೆಲಸ ಮಾಡುತ್ತಿದ್ದೇವೆ, ಇಂದು ನಲ್ಲೂರಿನಲ್ಲಿ ಸಾಂಕೇತಿಕವಾಗಿ ಪ್ರಾರಂಭವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ ಶೆಟ್ಟಿ, ಸಿಡಿಎ ಮಾಜಿ ಅಧ್ಯಕ್ಷರುಗಳಾದ ಆನಂದ್, ರಂಗನಾಥ್, ಮುಖಂಡ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಗ್ರಾಮಸ್ಥರುಗಳಾದ ಶಾಂತಪ್ಪ, ಪವನ್ ಮತ್ತಿತರರಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!