May 20, 2024

MALNAD TV

HEART OF COFFEE CITY

ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಜೆಡಿಎಸ್ ಒತ್ತಾಯ

1 min read

 

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾದ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಜೆಡಿಎಸ್ ವತಿಯಿಂದ ಹನುಮಂತಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು ಮಾತನಾಡಿ ಸಚಿವ ಈಶ್ವರಪ್ಪನವರು ಕಾಮಗಾರಿ ಯಲ್ಲಿ ಶೇ.40 ರಷ್ಟು ಕಮೀಷನ್ ನೀಡಬೇಕು ಎಂದು ಒತ್ತಡ ನೀಡುತ್ತಿದ್ದು ಇದರಿಂದ ಮನನೊಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರ ಸಹೋದರ ತಿಳಿಸಿದ ಪ್ರಕಾರ ಸಚಿವರ ಜೊತೆಗೆ ಸುಮಾರು 4 ಕೋಟಿ ರೂ. ಹೆಚ್ಚು ಕೆಲಸ ಮಾಡಿದ್ದರು. ಕಾಮಗಾರಿ ಕೆಲಸದಲ್ಲಿ ಶೇ.40 ರಷ್ಟು ಕಮೀಷನ್ ಕೊಡುವ ಹಿನ್ನೆಲೆಯಲ್ಲಿ ಅವರಿಗೆ ಬಿಲ್ ಪಾವತಿ ಮಾಡದೇ ಮಾನಸಿಕವಾಗಿ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ದೂರಿದರು.ಸಚಿವ ಈಶ್ವರಪ್ಪನವರು ಅವರದ್ದೇ ಸರ್ಕಾರದ ಗುತ್ತಿಗೆದಾರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೊಡುವ ಮೂಲಕ ಕಾಮಗಾರಿ ನಡೆಸಿರುವ ಬಿಲ್ ಪಾವತಿಸದಿರುವುದರಿಂದ ಮಾನಸಿಕ ಮನನೊಂದು ಸಂತೋಷ್ ಪಾಟೀಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆಲ್ಲಾ ಕಾರಣರಾದ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಹಿಂದೂಪರ ಕಾಳಜಿ ಹೊಂದಿರುವ ಈಶ್ವರಪ್ಪನವರು ಹಿಂದೂ ಯುವಕ ಆತ್ಮಹತ್ಯೆ ಮಾಡಿಕೊ ಳ್ಳುವಷ್ಟು ಕಿರುಕುಳ ನೀಡಿರುವುದು ಅವರ ಸ್ಥಾನಕ್ಷೆ ಶೋಭೆ ತರುವುದಿಲ್ಲ. ಗುತ್ತಿಗೆದಾರ ಡೆತ್‍ನೋಟ್‍ನಲ್ಲಿ ಈಶ್ವರಪ್ಪನವರಿಂದ ಸಾವಪ್ಪಿರುವುದಾಗಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಕೂಡಲೇ ಈಶ್ವರಪ್ಪನವರ ವಿರುದ್ಧ ಶಿಸ್ತುಕ್ರಮ ಕೈಗೊಂಡು ಗುತ್ತಿಗೆದಾರರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಮುಖಂಡ ಬಿ.ಎಂ.ತಿಮ್ಮಶೆಟ್ಟಿ, ನಗರಾಧ್ಯಕ್ಷ ಎ.ಸಿ.ಕುಮಾರ್, ಮುಖಂಡರುಗಳಾದ ಸಿ.ಕೆ.ಮೂರ್ತಿ, ದೇವಿಪ್ರಸಾದ್, ಆನಂದೇಗೌಡ, ಎನ್.ಎನ್.ಚಂದ್ರಶೇಖರ್, ಚಾಂದ್‍ಭಾಷ, ಎಂ.ಎಸ್. ಮಂಜುನಾಥ್, ದೇವರಾಜ್ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!