May 20, 2024

MALNAD TV

HEART OF COFFEE CITY

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ, ಗಾಂಧಿ ಚರಕ ಶುದ್ಧಿ

1 min read

 

ಚಿಕ್ಕಮಗಳೂರು: ಅಗತ್ಯವಸ್ತುಗಳ ಬೆಲೆಏರಿಕೆಯನ್ನು ವಿರೋಧಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಸೋಮವಾರ ನಗರದ ಆಜಾದ್‍ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರ ಹಿಡಿದು 7-8 ವರ್ಷ ಕಳೆ ದಿದೆ. ಹಿಂದೆಂದು ಕಾಣದಷ್ಟು ಬೆಲೆಏರಿಕೆಯಾಗಿದೆ. ಆದರೆ ಬಿಜೆಪಿ ಮುಖಂಡರು ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂಷಿಸಿದರು.

ದಿನನಿತ್ಯ ಬೆಲೆಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗುತ್ತಿದ್ದಾರೆ. ಬೆಲೆಏರಿಕೆ ಯನ್ನು ತಡೆಗಟ್ಟುವ ಬದಲು ಕೋಮುದ್ವೇಷ ಮೂಡಿಸುವ ವಿಚಾರಗಳನ್ನು ಮುನ್ನೆಲೆಗೆ ತಂದು ಜನರನ್ನು ದಾರಿ ತಪ್ಪಿಸುತ್ತಿರುವುದು ವಿಷಾಧನೀಯ ಎಂದರು.ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರದ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡದೇ ಧರ್ಮದ ವಿಚಾರಗ ಳನ್ನು ಮುನ್ನಲೆಗೆ ತಂದು ಜನರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ತಿಳಿಸಿ ದರು.

ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ 6.800 ಕೊವೀಡ್ ವಾರಿಯರ್ಸ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಇಂದು ಅವರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆ ಕುಟುಂಬಗಳು ಇಂದು ಬೀದಿಗೆ ಬಂದಿವೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಧರ್ಮ, ಜಾತಿ ಸಂಘರ್ಷದಿಂದ ಹೊರಬಂದು ಯುವ ಜನತೆಗೆ ಉದ್ಯೋಗ ಸೃಷ್ಟಿ, ಬೆಲೆಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್  ಅಜಿತ್ ಕುಮಾರ್ ಮಾತನಾಡಿ, ಜನರು ಬೆಲೆಏರಿಕೆ ಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೆಲೆಏರಿಕೆಗೆ ಕಡಿವಾಣ ಹಾಕಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದಲ್ಲಿ ಜಾತಿ ವಿಷಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯನ್ನು ಬಿಟ್ಟು ಹಿಜಾಬ್, ಹಲಾಲ್, ಮಸೀದಿ ಮೈಕ್ ವಿಚಾರವನ್ನು ಎಳೆದು ತಂದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. 700 ರೂ. ಇದ್ದ ರಸಗೊಬ್ಬರ ಬೆಲೆ ಇಂದು 2ಸಾವಿರ ರೂ.ಗೆ ಏರಿಕೆಯಾಗಿದೆ. ಅಡುಗೆ ಅನಿಲ 1ಸಾವಿರಕ್ಕೆ ಏರಿಕೆಯಾಗಿದೆ. ಅಡುಗೆ ಎಣ್ಣೆ 200 ರೂ.ಗೆ ಏರಿಕೆಯಾಗಿದೆ. ಬೆಲೆಏರಿಕೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಬೇಕು. ಇಲ್ಲದಿ ದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿ ಸಿದರು.

4ಜನ ಜಿಲ್ಲಾ ಉಸ್ತುವಾರಿಗಳು ಬಂದು ಹೋದರು. ಅತೀವೃಷ್ಟಿ ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರ ನೀಡಲು ಸಾಧ್ಯವಾಗಿಲ್ಲ, ಅತೀವೃಷ್ಟಿಯಿಂದ ನಷ್ಟಕ್ಕೆ ಒಳಗಾದ ಮೂಡಿಗೆರೆ ತಾಲ್ಲೂಕು ಮಲೆಮನೆ ಗ್ರಾಮಸ್ಥರು ಕಳಸದಿಂದ ಚಿಕ್ಕಮ ಗಳೂರು ಜಿಲ್ಲಾ ಕೇಂದ್ರವರೆಗೂ ಪಾದಯಾತ್ರೆ ನಡೆಸಲು ಮುಂದಾಗಿದ್ದು ಜೆಡಿಎಸ್ ಪಕ್ಷ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಎಚ್.ಎಚ್.ಮಂಜಪ್ಪ, ವಕ್ತಾರ ಹೊಲದಗದ್ದೆ ಗಿರೀಶ್, ತಿಮ್ಮಶೆಟ್ಟಿ, ನಗರಸಭೆ ಸದಸ್ಯ ಎ.ಸಿ.ಕುಮಾರ್, ಗೋಪಿ, ಮುಖಂಡರಾದ ದೇವಿಪ್ರಸಾದ್, ಮಾನ ಮಿರಾಂಡಾ, ನಿಸಾರ್ ಅಹಮದ್, ಸಿ.ಕೆ. ಮೂರ್ತಿ, ದೇವರಾಜ್ ಅರಸ್, ಲಕ್ಷ್ಮಣ್, ಜಯಂತಿ, ಮಂಜು ಇದ್ದರು.

ಇದೇ ವೇಳೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಬರಮತಿ ಆಶ್ರಮದಲ್ಲಿರುವ ಗಾಂಧೀಜಿ ಚರಕದ ಮುಂದೇ ಸಂಸದ ತೇಜಸ್ವಿಸೂರ್ಯ ಕುಳಿತು. ಚರಕ ನಡೆಸಿದ್ದು, ಚರಕ ಅಶುದ್ಧಿಯಾಗಿದೆ. ಮಹಾತ್ಮ ಗಾಂಧೀಜಿಯವರು ಬಳಸಿ ಚರಕವನ್ನು ಮುಟ್ಟುವ ಯೋಗ್ಯತೆ ಬಿಜೆಪಿಯವರಿಗಿಲ್ಲ. ಈ ನಿಟ್ಟಿನಲ್ಲಿ ಚರಕ ಅಶುದ್ಧವಾ ಗಿದ್ದು, ಗೋಮೂತ್ರದಿಂದ ಚರಕವನ್ನು ಶುದ್ಧಗೊಳಿಸಿದರು.

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!