May 20, 2024

MALNAD TV

HEART OF COFFEE CITY

ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಮೇದ ಸಮುದಾಯ ಸಮಾಜದೊಂದಿಗೆ ಹಾಸು ಹೊಕ್ಕಾಗಿದೆ- ಎಚ್. ಡಿ ತಮ್ಮಯ್ಯ

1 min read

ಚಿಕ್ಕಮಗಳೂರು- ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಮೇದ ಸಮುದಾಯ ಸಮಾಜದೊಂದಿಗೆ ಹಾಸು ಹೊಕ್ಕಾಗಿದೆ ಎಂದು ಶಾಸಕ ಎಚ್. ಡಿ ತಮ್ಮಯ್ಯ ಹೇಳಿದರು.
  ನಗರದ ಜಿಲ್ಲಾ ಬಿದಿರು ಮತ್ತು ಬೆತ್ತ ಕೆಲಸಗಾರರ ಸಂಘ ಮತ್ತು ಮೇದ ಯುವ ಅಭಿವೃದ್ಧಿ ಸಂಘದ ವತಿಯಿಂದ ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಸಮುದಾಯ ಭವನ ನಿವೇಶನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.  ಮೇದ ಸಮುದಾಯ ಹುಟ್ಟುದ ಮಗುವಿಗೆ ತೊಟ್ಟಿಲು ನೀಡುವುದರಿಂದ ಹಿಡಿದು ಸಾವಿಗೆ ಚಟ್ಟ ನೀಡುವವರೆಗೂ ಸಮಾಜದೊಂದಿಗೆ ಬೆರೆತಿದ್ದು, ಅವರನ್ನು ಹೊರತುಪಡಿಸಿ ಮನುಕುಲ ಜೀವಿಸಲು ಸಾಧ್ಯವಿಲ್ಲಎಂದುಹೇಳಿದರು.  ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ, ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತವಾಗಿರುವ ಮೇದ ಸಮುದಾಯ ಸ್ವಾಭಿಮಾನಿ ಸಮುದಾಯವಾಗಿದ್ದು, ಅವರ ಅಭಿವೃದ್ಧಿಗೆ ನಾವೆಲ್ಲರೂ ಕಟಿಬದ್ಧರಾಗಿದ್ದೇವೆ ಎಂದು ಹೇಳಿದರು.

ಶಾಸಕನಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಬುದ್ಧ, ಬಸವ, ಅಂಬೇಡ್ಕರ್‍ರವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ಅದರಂತೆ ದೀನ,ದಲಿತರು, ಅಲ್ಪಸಂಖ್ಯಾತರು  ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಗೆ ಬದ್ಧನಾಗಿದ್ದೇನೆ ಎಂದು ಹೇಳಿ ಅದವರು ನಾನು ಶಾಸಕನಲ್ಲ ಜನಸೇವಕ ಎಂದು ಹೇಳಿದರು.  ಮೇದ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ನಿವೇಶನವನ್ನು ಕಾಯ್ದಿರಿಸಿ ಅನುದಾನವನ್ನು ಸಹ ತರಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಅನುದಾನವನ್ನು ಮಂಜೂರು ಮಾಡಿಸಿ ಸಮುದಾಯ ಭವನವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.  ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್  ಅಭಿನಂದನೆ ಸ್ವೀಕರಿಸಿ ಮಾತನಾಡಿ ತೆರವು ಗೊಂಡಿದ್ದ ಕಸಾಯಿ ಖಾನೆÉ ನಿವೇಶನವನ್ನು ಸಂಘದ ಸದಸ್ಯರ ಮನವಿಯ ಮೇರೆಗೆ ಹಲವು ಸವಾಲುಗಳ ನಡುವೆಯೂ ದಿಟ್ಟ ನಿರ್ಧಾರ ಕೈಗೊಂಡು, ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ಕೈಗೊಂಡು ಮಂಜೂರು ಮಾಡಿಸಿದ್ದೇನೆ. ಅದರೊಂದಿಗೆ ಅಗತ್ಯವಿರುವ ಅನುದಾನವನ್ನು ಕಾಯ್ದಿರಿಸುವ ಮೂಲಕ ಮೇದ ಸಮುದಾಯಕ್ಕೆ ನನ್ನ ಅವಧಿಯಲ್ಲಿ ನೆಲೆ ಕಲ್ಪಿಸಿದ ಆತ್ಮ ತೃಪ್ತಿ ಇದೆ ಎಂದು ಹೇಳಿದರು.
 ನಗರಸಭೆ ಪೌರಾಯುಕ್ತ ಬಿ ಸಿ ಬಸವರಾಜ್ ಮಾತನಾಡಿ ಸಮುದಾಯದ ಅಭಿವೃದ್ಧಿಗೆ ನಗರಸಭೆ ಸದಾ ನಿಮ್ಮೊಂದಿಗೆ ಇರುತ್ತದೆ ಸಮುದಾಯದ ನಿವೇಶನ ರಹಿತರಿಗೆ  ಸೂರು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನಮಾಡುವುದಾಗಿಹೇಳಿದರು.

  ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ನಗರದ ಯುವ ಕಲಾವಿದ ರಮೇಶ್ ಬಂಗಾರು ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಪಿ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ವಿ ಶೋಭಾ,ಸಮುದಾಯದ ಮುಖಂಡರಾದ ಕೆ ಕುಮಾರ್, ಮಹೇಶ್, ಸಿ ಕೆ ಜಗದೀಶ್, ಮನೋಹರ್, ಮಂಜುನಾಥ್, ಬಿ ರವಿ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುಮಾ ಅರವಿಂದ್ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ನೀಲಮ್ಮ ಶ್ರೀನಿವಾಸ್ ಸ್ವಾಗತಿಸಿ, ಶಿಕ್ಷಕ ಕೇಶವ ನಿರೂಪಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!