May 20, 2024

MALNAD TV

HEART OF COFFEE CITY

ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರಿಗೆ ತಕ್ಕಂತೆ ತೆರಿಗೆ ನಿಗಧಿ ಮಾಡಿ – ಬಡವರಿಗೆ ಅನುಕೂಲ ಮಾಡಿ – ಎಚ್.ಡಿ.ತಮ್ಮಯ್ಯ

1 min read

ನಗರ ವ್ಯಾಪ್ತಿಯಲ್ಲಿರುವ ವ್ಯಾಪಾರಸ್ಥರಿಗೆ ಹೆಚ್ಚಿನ ತೆರಿಗೆ ವಿಧಿಸಿರುವುದು ಅವೈಜ್ಞಾನಿಕವಾಗಿದೆ, ಇದನ್ನು ಪರಿಷ್ಕರಿಸಿ ಸಣ್ಣ ವ್ಯಾಪಾರಸ್ಥರಿಗೆ ಮತ್ತು ದೊಡ್ಡ ವ್ಯಾಪಾರಸ್ಥರಿಗೆ ಬೇರೆ-ಬೇರೆ ತೆರಿಗೆಯನ್ನು ನಿಗಧಿ ಮಾಡಿ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ ಅವರ ಅಧ್ಯಕ್ಷತೆಯಲ್ಲಿ  ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ  ಅವರು ಸಾಮಾನ್ಯ ವಾಣಿಜ್ಯ ಮಳಿಗೆಗಳ ಹೆಸರು ಉಲ್ಲೇಖಿಸಿ ಸಲಹೆ  ನೀಡಿದರು.ನಗರದಲ್ಲಿ ಇನ್ನೂ  ಶೇ.50 ರಷ್ಟು ವಾಣಿಜ್ಯ ಪರವಾನಿಗೆಯನ್ನೇ ನೀಡಿಲ್ಲö. ಯಾರಿಗೆ ಬ್ಯಾಂಕ್ ಸಾಲ ಬೇಕೋ ಅವರು ಪರವಾನಿಗೆ ಪಡೆದಿದ್ದಾರೆ. ಈ ಬಗ್ಗೆ ಗಮನಹರಿಸಿ ಎಂದರು. ಎಂಜಿ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳಂತೆ ಕಲ್ಯಾಣ ನಗರ ಅಥವಾ ನಗರ ಹೊರವಲಯದಲ್ಲಿರುವ  ವಾಣಿಜ್ಯ ಮಳಿಗೆಗಳಿಗೂ ಏಕಸಮಾನವಾದ ತೆರಿಗೆ ವಿಸಿದರೆ ಹೇಗೆ ಎಂದು ಪ್ರಶ್ನಿಸಿ ಈಗ ನಿಗಪಡಿಸಿರುವ ವಾಣಿಜ್ಯ ತೆರಿಗೆ ಅವೈಜ್ಞಾನಿಕ ಕ್ರಮ.ನಗರಸಭೆಗೆ ಆದಾಯವನ್ನೂ ಹೆಚ್ಚಿಸಬೇಕು. ಹೆಚ್ಚಿಸುವ ಭರದಲ್ಲಿ ಸಾಮಾನ್ಯ ಜನರ ಜೇಬಿಗೆ ಕೈಹಾಕಿ ಕಿತ್ತುಕೊಳ್ಳಬಾರದು.ಕೂಡಲೇ ತೆರಿಗೆ ಪರಿಷ್ಕರಿಸಿ ಅನುಕೂಲ ಮಾಡಿಕೊಡಿ ಎಂದರು.

ನಗರದಲ್ಲಿ  ಬೀದಿನಾಯಿಗಳ ಹಾವಳಿ ತುಂಬಾ ಹೆಚ್ಚಾಗಿದೆ ಮಕ್ಕಳು ಹೊರಬರಲು ಹೆದರುತ್ತಿದ್ದಾರೆ. ಕಾನೂನು ಅಡೆತಡೆ, ಪ್ರಾಣಿದಯಾ ಸಂಘದ ಆಕ್ಷೇಪದ ನಡುವೆಯೂ ನಾಯಿಗಳ ನಿಯಂತ್ರಣ ಮಾಡಲು ಅವಕಾಶಗಳಿವೆ. ಈ ಬಗ್ಗೆ ಚಿಂತನೆ ನಡೆಸಿ ಎಂದರು.ಅಮೃತ್ ಕುಡಿವ ನೀರಿನ ಯೋಜನೆ ಪೂರ್ಣಗೊಂಡಿದೆ ಎಂದು ನಗರಸಭೆ  ಹಸ್ತಾಂತರ ಮಾಡಿಕೊಂಡಿದೆ. ಅಮೃತ್ ಯೋಜನೆಯಲ್ಲಿ ಇನ್ನೂ ಕಾಮಗಾರಿ  ಅಪೂರ್ಣವಾಗಿವೆ. ಯಾವ ಆಧಾರದಲ್ಲಿ ತನ್ನ ಸುಪರ್ದಿಗೆ ಪಡೆಯಲಾಯಿತು. ತೆಗೆದುಕೊಳ್ಳುವ ಮುನ್ನ ಎಲ್ಲ ಸದಸ್ಯರಿಂದ ನಿರಕ್ಷೇಪಣಾ ಪತ್ರ  ಪಡೆಯಬೇಕಿತ್ತು ಎಂದರು.
ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ ಮಾತನಾಡಿ,  ವಾಣಿಜ್ಯ ತೆರಿಗೆಯನ್ನು ಒಮ್ಮೆ ಹೆಚ್ಚಳ ಮಾಡಿದ ಮೇಲೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಕಡಿಮೆ ಮಾಡಿದ್ದೇವೆ. ದೊಡ್ಡ ಅಂಗಡಿ, ಚಿಕ್ಕ ಅಂಗಡಿ ಎಂದು ವಿಂಗಡಿಸಿ ತೆರಿಗೆ ವಿಸಿದ್ದೇವೆ. ಇದೂ ಹೆಚ್ಚಾಯಿತು ಎಂದರೆ ಮತ್ತೆ ಪರಿಶೀಲಿಸಬಹುದು ಎಂದರು.
ಒಮ್ಮೆ ವಾಣಿಜ್ಯ ತೆರಿಗೆ ಪರಿಷ್ಕರಣೆ ಮಾಡಿದಾಗ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಇಲ್ಲ ದಿದ್ದರೆ ಹಳೆ ದರವನ್ನೇ ವಸೂಲಿ ಮಾಡುವ ಅಪಾಯವಿದೆ ಎಂದು  ಸದಸ್ಯ ರಾಜಶೇಖರ ಸಲಹೆ ನೀಡಿದರು.
ನಗರಸಭೆಯಲ್ಲಿ ಕುಡಿವ ನೀರು, ಸ್ವಚ್ಛತೆ ಮತ್ತಿತರೆ ಪ್ರಕರಣಗಳನ್ನು ತುರ್ತು ಎಂದು ಪರಿಗಣಿಸಿ ಅನುದಾನ ಬಳಸಿಕೊಳ್ಳಬಹುದು. ಆದರೆ, ಕಾಂಕ್ರಿಟ್ ರಸ್ತೆö, ಇಂಟರ್‌ಲಾಕ್ ಅಳವಡಿಕೆಯನ್ನು ಟೆಂಡರ್ ಇಲ್ಲದೆಯೇ ಮಾಡಿರುವುದು ಯಾವ ತುರ್ತು. ಈ ಬಗ್ಗೆ ಸದಸ್ಯರು ದಾಖಲೆ ಸಮೇತ ವರದಿ ನೀಡಿದ್ದಾರೆ. ಟೆಂಡರ್ ಇಲ್ಲದೆ ಕಾಮಗಾರಿಯನ್ನು ಆಯುಕ್ತರು ಮತ್ತು ಅಧ್ಯಕ್ಷರು ಮಾಡಿರುವ ಬಗ್ಗೆ ಹೇಗೆ ಸಮರ್ಥನೆ ನೀಡುತ್ತೀರಿ.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್, ಸದಸ್ಯರುಗಳು ಉಪಸ್ಥಿತರಿದ್ದರು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!