May 20, 2024

MALNAD TV

HEART OF COFFEE CITY

ನಗರದ ಸಮಗ್ರ ಅಭಿವೃದ್ಧಿಗೆ ಒತ್ತು : ಬಸವರಾಜ್

1 min read

ಚಿಕ್ಕಮಗಳೂರು-ನಗರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡುವುದರ ಜೊತೆಗೆ ಸಾರ್ವಜನಿಕರ ಸೇವಾ ಕೆಲಸಗಳು ನಿಗದಿತ ಸಮಯಕ್ಕೆ ಸರಿಯಾಗಿ ಅವರಿಗೆ ತೊಂದರೆ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ನಗರಸಭೆ ನೂತನ ಪೌರಾಯುಕ್ತ ಬಿ.ಸಿ ಬಸವರಾಜ್ ತಿಳಿಸಿದರು.ಅವರು ಜು.7 ರ ಸರ್ಕಾರಿ ಆದೇಶದಂತೆ ಇಂದು ನಗರಸಭೆ ಪೌರಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ನಗರಸಭೆ ಅಧಿಕಾರಿಗಳು- ಸಿಬ್ಬಂದಿಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಿಗದಿತ ಸಮಯದೊಳಗೆ ಅವರ ಕೆಲಸಗಳನ್ನು ತುರ್ತಾಗಿ ಮಾಡಿಕೊಡುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.ನಗರದಲ್ಲಿ ಸ್ವಚ್ಚತೆ ಕಾಪಾಡುವಂತೆ ನಾಗರೀಕರಲ್ಲಿ ಮನವಿ ಮಾಡಿದ ಅವರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ವಿಂಗಡಣೆ ಮಾಡಿ ಕಸ ಸಂಗ್ರಹ ಗಾಡಿಗೆ ಹಾಕುವಂತೆ ವಿನಂತಿಸಿದರು.
ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರು ಕೆಲವು ವರ್ತಕರು ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ ತಪಾಸಣೆ ವೇಳೆ ಸಿಕ್ಕಿದರೆ ಅಂತಹ ವರ್ತಕರ ವಿರುದ್ಧ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ ಅವರ ಉದ್ದಿಮೆ ಪರವಾನಗಿ ರದ್ದುಪಡಿಸುವುದರ ಜೊತೆಗೆ ಅಂಗಡಿ ಮುಚ್ಚಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.ಕೆಲವು ಬಡಾವಣೆಗಳಲ್ಲಿ ನಗರಸಭೆಯಿಂದ ಸರಬರಾಜಾಗುತ್ತಿರುವ ನೀರನ್ನು ಎತೇಚ್ಚವಾಗಿ ಹಾನಿ ಮಾಡುತ್ತಿದ್ದಾರೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ನಲ್ಲಿಗಳಿಗೆ ಟ್ಯಾಪ್ ಅಳವಡಿಕೊಳ್ಳಬೇಕೆಂದು ಸೂಚಿಸಿದರು.

ಸಾರ್ವಜನಿಕರು ತಮ್ಮ ನಿವೇಶನದ ಖಾತೆ ಬದಲಾವಣೆ, ಇ-ಖಾತೆ, ಕಟ್ಟಡ ಪರವಾನಗಿ ಪಡೆಯುವಲ್ಲಿ ಕಛೇರಿಯಿಂದ ವಿಳಂಭವಾಗುತ್ತಿದೆ ಎಂಬ ದೂರುಗಳಿದ್ದರೆ ಕೂಡಲೇ ಅಂತವರು ಮುಖತಹ ಭೇಟಿ ಮಾಡಿ ಅಥವಾ ದೂರವಾಣಿ ಮೂಲಕ ತಿಳಿಸಿದರೆ ಸೂಕ್ತ ಅಧಿಕಾರಿಯನ್ನು ಕರೆದು ತಕ್ಷಣ ಕೆಲಸ ಮಾಡಿಕೊಂಡಲು ಬದ್ದರಾಗಿದ್ದೇವೆ ಎಂದರು.ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಗಮನ ಸೆಳೆದಾಗ ಕಳೆದ 2 ತಿಂಗಳಿಂದಲೇ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು ಈವರೆಗೆ ಒಟ್ಟು ನಾಲ್ಕು ಸಾವಿರ ಸಂತಾನಹರಣ ಚಿಕಿತ್ಸೆ ಮಾಡಿ ಅವುಗಳು ವಾಸಿಸುವಲ್ಲಿಗೆ ತಂದುಬಿಡುತ್ತಿದ್ದೇವೆ ಕಾರಣ ಪ್ರಾಣಿ ಹತ್ಯೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಸ್ಪಷ್ಠಪಡಿಸಿದರು.ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಕಸ ಸಂಗ್ರಹಣೆ ಮಾಡಿದ ಸಂದರ್ಭದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು ಬರುತ್ತಿವೆ ಇದರಿಂದಾಗಿ ಇಂದಾವರದ ಕಸ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ಬಾಟಲಿ ಕರಗಿಸಲು ತುಂಬಾ ತೊಂದರೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ನಗರಸಭೆಯಿಂದ ನಿಷೇಧಿಸಿ ಗಾಜಿನ ಲೋಟ ಹಾಗೂ ಬಾಟಲಿಗಳಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು ಆಲೋಚಿಸಲಾಗಿದೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನೂತನ ಪೌರಾಯುಕ್ತ ಬಿ.ಸಿ.ಬಸವರಾಜ್ ಇವರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!