May 20, 2024

MALNAD TV

HEART OF COFFEE CITY

ಅಹಂಕಾರ ಮತ್ತು ಮಮಕಾರ ನಮ್ಮ ಶತ್ರುಗಳು : ಶುಭ ಅರ್ತ ಪ್ರಣವ ಮಾತಾಜಿ.

1 min read

 

ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಗೀತಾ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಶಾರದಾ ಮಠದ ಶ್ರೀ ಸುಬ್ರಥ ಪ್ರಣವ ಮಾತಾಜಿ, ಸಾಧನೆಗೆ ಯಾವುದೇ ಪ್ರಯತ್ನ ಮಾಡಿದರೂ ಹಿಂಜರಿಕೆ ಮತ್ತು ಭಯ ಇದ್ದರೆ ನಾವು ಅನಿಸಿದ್ದನ್ನು ಸಾಧಿಸಲಾರೆವು, ಬಧುಕಿಗೆ ಅರ್ಥ ಬರುವುದು ನಮಗೆ ತಿಳಿದ ಜ್ಞಾನದಂತೆ ಬದುಕಿದಾಗ, ಅಹಂಕಾರ ಮತ್ತು ಮಮಕಾರಗಳು ನಮ್ಮ ಶತ್ರುಗಳು ; ಅವೆರೆಡ್ಡನ್ನು ಜಾಯಿಸಿದಾಗ ಮಾತ್ರ ಬದುಕಿಗೆ ಜಯ. ಗೀತೆಯ ಕೊನೆಯಲ್ಲಿ ಕೃಷ್ಣನು ತಾನು ಬೋಧಿಸಿದ್ದನ್ನು ವಿಮರ್ಶಿಸಿ, ಪರೀಕ್ಷಿಸಿ ಸ್ವೀಕರಿಸು ಎಂದಿರುವುದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಕನ್ನಡಿ, ಭಗವದ್ಗೀತವು ಕೇವಲ ಧರ್ಮ ಗ್ರಂಥ ವಾಗದೆ ಶ್ರೇಷ್ಠ ತತ್ವ ಜ್ಞಾನ ಮತ್ತು ಮನಶಾಸ್ತ್ರ ಗ್ರಂಥವು ಕೂಡ ಆಗಿದೆ. ಜಗತ್ತಿನ ಬಹುತೇಕ ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳನ್ನು ಈ ಗ್ರಂಥವು ಪ್ರೇರೇಪಿಸಿದೆ ಎಂದರು.

ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ಸತ್ಯ ಸಂದೇಶವೇ ಗೀತೆಯ ಸಾರ, ಸ್ವಾಮಿ ವಿವೇಕಾನಂದ ಮತ್ತು ಗಾಂಧೀಜಿಯವರಿಗೆ ಭಗವದ್ಗೀತಾಾವೆ ಪ್ರೇರಣಾ ಗ್ರಂಥವಾಗಿತ್ತು ಎಂದರು. ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಕೆ ಸಿ ಶಂಕರ್ ಅವರು ಭಗವದ್ಗೀತವು ಹಿಂದೂ ಧರ್ಮದ ಎಲ್ಲಾ ಗ್ರಂಥಗಳ ಸಾರ, ಮಾನವ ಜನಾಂಗವು ಸತ್ಯ ಧರ್ಮ, ಮತ್ತು ನೀತಿಯುತವಾಗಿ ಬದುಕಲು ಸಮಗ್ರ ಕೈಪಿಡಿ ಎಂದು ಹೇಳಿ, ಜಗತ್ತಿನ ತತ್ವಶಾಸ್ತ್ರದ ಅಡಿಪಾಯವೇ ಭಗವದ್ಗೀತಾ ಎಂದು ನುಡಿದರು. ಶಾಲೆಯ ಪ್ರಾಂಶುಪಾಲರಾದಂತ ಶ್ರೀ ರಾಘವೇಂದ್ರ ಉಪ ಪ್ರಾಂಶುಪಾಲೆ ಶ್ರೀಮತಿ ಶಮ್ಮಿ ಉಪಸ್ಥಿದ್ದರಿದ್ದರು. ಶಾಲಾ ವಿದ್ಯಾರ್ಥಿಗಳು ಭಗವದ್ಗೀತಾ ಸ್ಲೋಗಗಳನ್ನು ಪಠಣ ಮಾಡಿದರು. ವಿದ್ಯಾರ್ಥಿನಿ ಪ್ರೇರಣಾ ಸ್ವಾಗತಿಸಿ ನುಡಿ ನಿರೂಪಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!