ಬುಡಕಟ್ಟು ಜನಾಂಗದವರಿಗೆ ಮಳೆಗಾಲದಲ್ಲಿ ಕೊಡಬೇಕಾದ ಆಹಾರ ಸಾಮಗ್ರಿಗಳನ್ನ ಇನ್ನೂ ನೀಡದ ಜಿಲ್ಲಾಡಳಿತ
1 min read
ಚಿಕ್ಕಮಗಳೂರು.: ವಾರ್ಷಿಕವಾಗಿ ಯತೇಚ್ಛವಾಗಿ ಮಳೆ ಸುರಿಯುವ ಜಿಲ್ಲೆಯ ಮಲೆನಾಡು ಭಾಗದ ಬುಡಕಟ್ಟು ಜನಾಂಗದವರಿಗೆ ಮಳೆಗಾಲದಲ್ಲಿ ನೀಡುವ ಆಹಾರ ಸಾಮಗ್ರಿಗಳನ್ನ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಇನ್ನೂ ನೀಡಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರತಿ ವರ್ಷದಂತೆ ಈ ವರ್ಷವೂ ಮಳೆಗಾಳದಲ್ಲಿ ಬುಡಕಟ್ಟು ಜನಾಂಗದವರಿಗೆ ಆಹಾರ ಸಾಮಾಗ್ರಿ ನೀಡಿ ಅದು ಖಾಲಿ ಆಗುವ ಹಂತಕ್ಕೆ ಬಂದಿದೆ. ಆದರೆ, ಜಿಲ್ಲೆಯಲ್ಲಿ ಅದಕ್ಕೆ ಇನ್ನೂ ಟೆಂಡರ್ ಕೂಡ ಕರೆದಿಲ್ಲ. ಬುಡಕಟ್ಟು ಜನಾಂಗದವರಿಗೆ ಆಹಾರ ನೀಡಲು ಬಂದ ಎಂಟು ಕೋಟಿ ರೂಪಾಯಿ ಜಿಲ್ಲಾಧಿಕಾರಿ ಅಕೌಂಟ್‍ನಲ್ಲಿ ಹಾಗೇ ಉಳಿದಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಹಣವೂ ಖರ್ಚಾಗಿಲ್ಲ. ಫಲಾನುಭವಿಗಳಿಗೆ ಆಹಾರ ಸಾಮಗ್ರಿಯೂ ಸಿಕ್ಕಿಲ್ಲ. ಸರ್ಕಾರ ಪ್ರತಿ ವರ್ಷ ಮಳೆಗಾಲದಲ್ಲಿ ಮಲೆನಾಡಿನ ಕುಗ್ರಾಮಗಳು ಹಾಗೂ ಬುಡಕಟ್ಟು ಜನಾಂಗದವರಿಗೆ ಅನುಕೂಲವಾಗಲೆಂದು ಜೂನ್ ತಿಂಗಳಿಂದ ನವೆಂಬರ್‍ವರೆಗೂ ಆಹಾರ ಸಾಮಾಗ್ರಿಗಳನ್ನ ಉಚಿತವಾಗಿ ನೀಡುತ್ತೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬಂದು ಬಂದ ಹಣವೂ ಖಾಲಿಯಾಗಿ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿಯೂ ಸಿಕ್ಕಿದೆ. ಆದರೆ, ಚಿಕ್ಕಮಗಳೂರಲ್ಲಿ 6 ಸಾವಿರಕ್ಕೂ ಹೆಚ್ಚು ಕುಟುಂಬಗಳು ಈ ಯೋಜನೆ ವ್ಯಾಪ್ತಿಯಲ್ಲಿದ್ದು, ಈ ಯೋಜನೆಗೆಂದು ಬಂದ ಸುಮಾರು ಎಂಟು ಕೋಟಿ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿ ಹಾಗೇ ಉಳಿದಿದ್ದು ಮಳೆಗಾಲ ಮುಗಿದರೂ ಅವರಿಗೆ ಆಹಾರ ಸಾಮಾಗ್ರಿ ಸಿಕ್ಕಿಲ್ಲ. ನಮಗೆ ಮಳೆಗಾಲದಲ್ಲಿ ಬೇಕಾದ ಆಹಾರ ಸಾಮಾಗ್ರಿಗಳನ್ನ ಇನ್ನೂ ನೀಡಿಲ್ಲ. ಬುಡಕಟ್ಟು ಜನಾಂಗದವರ ಮೇಲೆ ಏಕಿಂತಾ ಬೇಜವಾಬ್ದಾರಿ ಎಂದು ಬುಡಕಟ್ಟು ಜನಾಂಗದವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇಲಾಖೆಯ ಅಧಿಕಾರಿಗಳು ಕೂಡ ಪರ್ಸಂಟೇಜ್ ರೀತಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಸಂದೇಹ ಉಂಟಾಗಿದೆ. ಡಿಸೆಂಬರ್ 20ರೊಳಗೆ ನಮ್ಮ ಹಕ್ಕನ್ನ ನಮಗೆ ನೀಡದಿದ್ದರೆ 6 ಸಾವಿರ ಕುಟುಂಬಗಳು ಡಿಸಿ ಕಚೇರಿ ಬಾಗಿಲಲ್ಲಿ ಕೂರೋದಾಗಿ ಎಚ್ಚರಿಕೆ ನೀಡಿದ್ದಾರೆ. ಗಿರಿಜನರಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡುವ ಯೋಜನೆಯಡಿಯಲ್ಲಿ ಜಿಲ್ಲಾಡಳಿತ ಇದುವರೆಗೂ ಪೌಷ್ಟಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಲ್ಲ. ಈ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಟೆಂಡರ್ ಆಗಿಲ್ಲ ಎಂಬ ಕುಂಟು ನೆಪ ಹೇಳುತ್ತಾ ಸೌಲಭ್ಯವನ್ನು ಗಿರಿಜನರಿಗೆ ನೀಡುತ್ತಿಲ್ಲ. ಅಧಿಕಾರಿಗಳು ಕಮೀಶನ್ ದಂಧೆಯಲ್ಲಿ ತೊಡಗಿರುವ ಕಾರಣದಿಂದ ಯೋಜನೆ ಜಾರಿ ವಿಳಂಬವಾಗುತ್ತಿದೆ. ಮಕ್ಕಳು ಕೂಡ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಸರ್ಕಾರ ಕೊಡುವ ಮೊಟ್ಟೆ, ಬೇಳೆ-ಕಾಳುಗಳಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತಿತ್ತು. ನೆನಪಿನ ಶಕ್ತಿಯೂ ಚೆನ್ನಾಗಿರೋದು. ಆದರೆ, ಸರ್ಕಾರ ಕೊಟ್ಟರೂ ಅಧಿಕಾರಿಗಳು ಕೊಟ್ಟಿಲ್ಲ. ಎಲ್ಲಾ ಜಿಲ್ಲೆಯಲ್ಲೂ ಯೋಜನೆ ಜಾರಿಗೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಏಕೆ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿರೋ ಬುಡಕಟ್ಟು ಜನಾಂಗದವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g