ಈ ಸ್ವತ್ತು ಮಾಡಿಕೊಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಿಸಿ ಪ್ರತಿಭಟನೆ
1 min readತರೀಕೆರೆ : ಗ್ರಾಮದ ಎಲ್ಲರಿಗೂ ಈ ಸ್ವತ್ತು ಪಕ್ಕಾ ಪೋಡಿ ಮಾಡಿಕೊಡುವಂತೆ ಹಾಗೂ ಗ್ರಾಮವನ್ನು ಭದ್ರಾ ಹುಲಿ ಯೋಜನೆಯಿಂದ ಕೈ ಬಿಡಬೇಕೆಂದು ಆಗ್ರಹಿಸಿ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಕೆಂಚಿಕ್ಕೊಪ್ಪ ಗ್ರಾಮಸ್ಥರು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿ ಗ್ರಾಮ ಪಂಚಾಯಿತಿ ಮುಂದೆ ಧರಣಿ ಆರಂಭಿಸಿದರು.
ನರಸಿಂಹರಾಜ ಪುರದಲ್ಲಿ ಭದ್ರಾ ಅಣೆಕಟ್ಟು ನಿರ್ಮಾಣವಾದ ಸಂದರ್ಭದಲ್ಲಿ ಅಣೆಕಟ್ಟಿನ ಹಿಂಭಾಗದಲ್ಲಿದ್ದ ಗ್ರಾಮದ ಜನರನ್ನು ತರೀಕೆರೆಯ ಕೆಂಚಿಕೊಪ್ಪ, ಮಾಳಿಕೊಪ್ಪ, ಮಠದಹಳ್ಳಿ, ದೊಡ್ಡಕುಂದೂರು ಸೇರಿದಂತೆ ಬೇರೆ ಬೇರೆ ಗ್ರಾಮಗಳಿಗೆ ಸ್ಥಳಾಂತರಿಸಿದರು. ಈಗೆ ಸ್ಥಳಾಂತರಗೊಂಡು 50 ವರ್ಷಗಳೆ ಕಳೆದರೂ ಇಲ್ಲಿ ನೆಲೆಸಿರುವ 50 ಮನೆಗಳಿಗೆ ಹೋರತು ಪಡಿಸಿ ಉಳಿದ ಯಾವ ಮಲನೆಗಳಿಗೂ ವಾಸ ಯೋಗ್ಯ ಇ ಸ್ವತ್ತು ಪಕ್ಕಾ ಪೋಡಿ ಮಾಡಿ ದಾಖಲೆಗಳನ್ನು ನೀಡಿರುವುದಿಲ್ಲ. ಇದರಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ. ಇಲ್ಲಿನ ಕೆಂಚಿಕೊಪ್ಪ, ಮಾಳಿಕೊಪ್ಪ, ಮಠದಹಳ್ಳಿ, ದೊಡ್ಡಕುಂದೂರು ಸೇರಿದಂತೆ ಮುಂತಾದ ಗ್ರಾಮದ ಜನರು ಪಕ್ಕಾ ಪೋಡಿ, ಇ ಸೊತ್ತು ಒದಗಿಸುವಂತೆ ಹಾಗೂ ಹುಲಿ ಯೋಜನೆ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗು ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ನಡೆಸಲು ಮುಂದಾಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g