ಸಿ.ಟಿ ರವಿ ಸೋತಾಗ ಹಾಲಿನ ಅಭಿಷೇಕ ಮಾಡಿಸಿಕೊಂಡ ಭೋಜೇಗೌಡರಿಗೆ ಮುಯ್ಯಿ ಕೊಡಲ್ವಾ : ಸಿ.ಟಿ.ಆರ್ ಗೆ ಕಿಚಾಯಿಸಿದ ಎಚ್ ಎಚ್ ದೇವರಾಜ್
1 min read![](https://www.malnadtv.com/wp-content/uploads/2024/02/devraj.jpg)
ಸಿ.ಟಿ ರವಿಗೆ ಸ್ವಾಭಿಮಾನ, ಆತ್ಮಗೌರವ ಇದ್ದರೆ ವಿಧಾನಸಭೆ ಚುನಾವಣೆ ವೇಳೆ ನೀವು ಸೋತಾಗ ಹಾಲಿನ ಅಭಿಷೇಕ ಮಾಡಿಕೊಂಡ ಎಸ್ಎಲ್ ಭೋಜೇಗೌಡರಿಗೆ ಮುಯ್ಯಿ ಕೊಡುತ್ತೀರಾ ಅಥವಾ ಅವರಿಗೆ ಮತ ಹಾಕಿ ಎಂದು ಯಾವ ಮುಖ ಇಟ್ಕೊಂಡು ಜನರ ಮುಂದೆ ಹೋಗ್ತೀರಾ ಎಂದು ಕೆ.ಪಿ.ಸಿ.ಸಿ ವಕ್ತಾರ ಎಚ್ಎಚ್ ದೇವರಾಜ್ ಸಿ.ಟಿ ರವಿಗೆ ಕಿಚಾಯಿಸಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಎಲ್ ಎಲ್ ಭೋಜೇಗೌಡ ಸ್ಪರ್ಧೆಯಲ್ಲಿ ಗೆಲ್ಲಲು ವಾಮಮಾರ್ಗ ಹಿಡಿಯುವುರದಲ್ಲಿ ನಿಪುಣ, ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ ನಯಾ ಪೈಸೆ ಕೆಲಸ ಮಾಡಿಲ್ಲ ಎಂದು ಕೆ.ಪಿ.ಸಿ.ಸಿ ವಕ್ತಾರ ಎಚ್ಎಚ್ ದೇವರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಶಿಕ್ಷಕರ ವೃತ್ತಿಗೆ ಗೌರವವಿದೆ, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ ಮಂಜುನಾಥ್ ಕುಮಾರ್ ಗೆ ಮತಹಾಕಿ ಗೆಲ್ಲಿಸುವ ಮೂಲಕ ಅದನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು. ಚಿಕ್ಕಮಗಳೂರು ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ ರವಿ ಸೋತಾಗ ಕ್ಷೀರ ಅಭಿಷೇಕ ಮಾಡಿಸಿಕೊಂಡಿದ್ದ ಎಸ್ಎಲ್ ಭೋಜೇಗೌಡರಿಗೆ ಮತ ಹಾಕಿ ಎಂದು ಯಾವ ಮುಖ ಇಟ್ಕೊಂಡು ಶಿಕ್ಷಕರ ಬಳಿ ಹೋಗುತ್ತೀರಾ ನಿಮಗೆ ನೈತಿಕತೆ ಇದೆಯಾ ಎಂದು ದೇವರಾಜ್ ಪ್ರಶ್ನೆ ಮಾಡಿದರು. ನಿಮ್ಮ ಸೋಲಿಗೆ ಕಾರಣವಾದ ಭೋಜೇಗೌಡರ ಸೋಲಿಸಿ ನೀವು ಕ್ಷೀರಾಭಿಷೇಕ ಮಾಡಿಸಿಕೊಳ್ಳಿ ಆ ಮೂಲಕ ಮುಯ್ಯಿಗೆ ಮುಯ್ಯಿ ಕೊಡಿ ಎಂದು ಸಿ.ಟಿ ರವಿಗೆ ಕಿವಿಮಾತು ಹೇಳಿದ್ದಾರೆ. ಸಿ.ಟಿ ರವಿ ಆತ್ಮಗೌರವ ಇದ್ದರೆ ಸ್ವಾಭಿಮಾನ ಇದ್ದರೆ ಮುಯ್ಯಿ ಕೊಡಿ ಇಲ್ಲವಾದರೆ ನೀವು ಸೈದ್ದಾಂತಿಕ ದಿವಾಳಿ ಆಗಿದ್ದೀರಾ ಎಂದು ನಾನು ಭಾವಿಸುತ್ತೇನೆ ಎಂದು ಎಚ್ಎಚ್ ದೇವರಾಜ್ ತೀಕ್ಷ್ಣವಾಗಿ ವಾಗ್ಜರಿ ಪ್ರಯೋಗಿಸಿದ್ದಾರೆ. ಬಿಜೆಪಿ ಅಧಃಪತನ ಆದಂತೆ ಗೋಚರಿಸುತ್ತಿದೆ ಎಂದಿರುವ ಅವರು ಹಾಲಿನ ಅಭಿಷೇಕ ಮಾಡಿಸಿಕೊಂಡು ವಿಜೃಂಭಿಸಿದ ಭೋಜೇಗೌಡರಿಗೆ ಮತ ಕೇಳಲು ಯಾವ ಮುಖ ಇಟ್ಕೊಂಡು ಹೋಗ್ತೀರಾ ಎಂದು ಚೇಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಕೆ ಮಂಜುನಾಥ್ ಕುಮಾರ್ ಅವರನ್ನು ಡಮ್ಮಿ ಕ್ಯಾಂಡಿಡೇಟ್ ಎಂದು ಬಿಂಬಿಸುತ್ತಿರುವ ಭೋಜೇಗೌಡ ಸೋಲು ಖಚಿತ ಎಂದು ಅವರು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g