ಪದವೀಧರರ ಬೇಡಿಕೆ ಈಡೇರಿಸಲು ಪರಿಷತ್ ನಲ್ಲಿ ಧ್ವನಿಯಾಗುತ್ತೇನೆ : ರಘುಪತಿ ಭಟ್
1 min read
ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧೆಗಿಳಿದು ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಐದೂವರೆ ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ತೊಡಗಿರುವ ಕೆ. ರಘುಪತಿ ಭಟ್ ವೀರ ಸೈನಿಕರ ನಾಡು ಕೊಡಗಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಂದೇ ಬಿಂಬಿತ ಆಗಿರುವ ರಘುಪತಿ ಭಟ್ ಮಡಿಕೇರಿ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದರು. ಮೊದಲಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ , ಜನರಲ್ ತಿಮ್ಮಯ್ಯ ಹಾಗೂ ಕಾವೇರಿ ಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಮಾತನಾಡಿದ ರಘುಪತಿ ಭಟ್ ಪದವೀಧರರ ಬೇಡಿಕೆ ಈಡೇರಿಸಲು ಶಿಕ್ಷಕರ ಮತ್ತು ಸರ್ಕಾರಿ ನೌಕರರ ಸಮಸ್ಯೆ ಪರಿಹರಿಸಲು ವಿಧಾನ ಪರಿಷತ್ ನಲ್ಲಿ ನಿಮ್ಮ ಧ್ವನಿಯಾಗಲು ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ ಅನುಭವ ಇರುವ ನನ್ನನ್ನು ಬೆಂಬಲಿಸಿ ಹರಸುವಂತೆ ವಿನಂತಿ ಮಾಡಿದರು. ಸಭೆಯಲ್ಲಿ ಕೊಡವ ಸಮಾಜದ ಅಧ್ಯಕ್ಷ ಎಂ.ಸಿ ನಾಣಯ್ಯ ಬಿಜೆಪಿ ಕಾರ್ಯಕರ್ತರಾದ ಅಪ್ಪಣ್ಣ ಚೇತನ್ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g