July 27, 2024

MALNAD TV

HEART OF COFFEE CITY

ನೈರುತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ರೆಬಲ್ ಅಭ್ಯರ್ಥಿಗಳಿಗೆ ಉಚ್ಚಾಟಿಸಿ ಆದೇಶ

1 min read

 

ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಂಡಾಯದ್ದೆ ಪ್ರಮುಖ ಪಕ್ಷಗಳಿಗೆ ತಲೆಬಿಸಿಯಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ರೆಬಲ್ ಆಗಿ ಕಣಕ್ಕೆ ಇಳಿದಿರುವವರಿಗೆ ಕಾಂಗ್ರೆಸ್ ಉಚ್ಚಾಟನೆ ಅಸ್ತ್ರ ಪ್ರಯೋಗಿಸಿದೆ. ಪದವೀಧರರ ಕ್ಷೇತ್ರದ ಎಸ್.ಪಿ ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದ ನಂಜೇಶ್ ಬೆಣ್ಣೂರು ಇಬ್ಬರನ್ನೂ ಆರು ವರ್ಷಗಳ ಕಾಲ ಉಚ್ಚಾಟಿಸಿ ಕೆ.ಪಿ.ಸಿ.ಸಿ ಆದೇಶ ಹೊರಡಿಸಿದೆ.

ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಎರಡೂ ಪಕ್ಷಗಳಿಗೆ ಬಂಡಾಯದ ಬೇಗೆ ಕಾಡುತ್ತಿದೆ, ಕಾಂಗ್ರೆಸ್ ಪಕ್ಷದಿಂದ ಆಯನೂರು ಮಂಜುನಾಥ್ ಸ್ಪರ್ಧೆಯಿಂದ ಬಂಡಾಯ ಸಾರಿರುವ ಶಿವಮೊಗ್ಗ ಮೂಲದ ಎಸ್.ಪಿ ದಿನೇಶ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕೆ.ಕೆ ಮಂಜುನಾಥ್ ಕುಮಾರ್ ವಿರುದ್ಧ ಕೈ ಪಕ್ಷದವರೆ ಆದ ನಂಜೇಶ್ ಬೆಣ್ಣೂರು ಸ್ಪರ್ಧೆಗೆ ಇಳಿದಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಮನವೊಲಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆ ದಿನೇಶ್ ಹಾಗೂ ನಂಜೇಶ್ ಇಬ್ಬರನ್ನು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಜೆ.ಸಿ ಚಂದ್ರಶೇಖರ್ ಮುಂದಿನ 6 ವರ್ಷಗಳವರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ್ದಾರೆ. ಶಿಸ್ತು ಉಲ್ಲಂಘನೆ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಈ ಉಚ್ಚಾಟನೆ ಆದೇಶವನ್ನು ಪ್ರಕಟಿಸಲಾಗಿದೆ.

ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯವರೇ ಆಗಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲೋಕೇಶ್ ತಾಳಿಕಟ್ಟೆ ಅವರನ್ನು ಸಹಾ ಉಚ್ಚಾಟನೆ ಮಾಡಿ ಕೆ.ಪಿ.ಸಿ.ಸಿ ( ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ ) ಆದೇಶ ಹೊರಡಿಸಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!