ಅಗಲಿದ ಕವಿ ಸಿದ್ದಲಿಂಗಯ್ಯನವರಿಗೆ ನುಡಿ ನಮನ ಸಲ್ಲಿಸಿದ ಎಂ.ಪಿ ಕುಮಾರಸ್ವಾಮಿ
1 min readಚಿಕ್ಕಮಗಳೂರು : ದಲಿತ ಕವಿ ಸಿದ್ದಲಿಂಗಯ್ಯನವರ ಅಗಲಿಕೆಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಾಹಿತ್ಯದ ಮೂಲಕ ವಿದಾಯ ಹೇಳಿದ್ದಾರೆ. ದಲಿತ ಕವಿ ಸಿದ್ದಲಿಂಗಯ್ಯನವರು ಅಗಲಿರುವುದು ರಾಜ್ಯದ ಶೋಷಿತ ಜನಾಂಗಕ್ಕೆ ನೋವಿನ ಸಂಗತಿ. ದಲಿತ ಚಳುವಳಿ ಉತ್ತುಂಗದ ಮಟ್ಟದಲ್ಲಿದ್ದಾಗ ಅವರ ಸಾಹಿತ್ಯ ಅ ಚಳುವಳಿಗೊಂದು ಪ್ರೇರಣೆಯಾಗಿತ್ತು. ಸ್ವಾಭಿಮಾನದ ಕಿಚ್ಚನ್ನ ಮನೆಮನೆಗೆ ತಲುಪಿಸುವ ಸಾಹಿತ್ಯವಾಗಿತ್ತು ಎಂದಿದ್ದಾರೆ. ಅವರು ಒಳ್ಳೆಯ ಚಿಂತನೆಯನ್ನ ಕರ್ನಾಟಕದ ಜನ ಹಾಗೂ ಶೋಷಿತರಿಗೆ ಕೊಟ್ಟಿದ್ದಾರೆ. ಓರ್ವ ಬಂಡಾಯದ ಸಾಹಿತಿಯನ್ನ ನಾವು ಕಳೆದುಕೊಂಡಿದ್ದೇವೆ. ಅವರು ಕೊಟ್ಟ ಸಾಹಿತ್ಯವನ್ನ ಅವರ ಅಭಿಮಾನಿಗಳಿಗೆ ಅರ್ಪಿಸಿ, ಸಿದ್ದಲಿಂಗಯ್ಯನವರ ಆತ್ಮಕ್ಕೂ ಈ ಸಾಹಿತ್ಯವನ್ನ ಅರ್ಪಿಸುತ್ತೇನೆ ಎಂದು ಅವರ ಸಾಹಿತ್ಯದ ಒಂದು ತುಣಿಕನ್ನ ಹಾಡುವ ಮೂಲಕ ಅವರ ಸಾಹಿತ್ಯವನ್ನ ಮತ್ತೊಮ್ಮೆ ನೆನಪಿಸಿದ್ದಾರೆ. ಅವರು ಅಂಬೇಡ್ಕರ್ ಹಾಗೂ ಅವರ ಹೋರಾಟದ ನೆನಪಿನ ಬಗ್ಗೆ ಸಿದ್ದಲಿಂಗಯ್ಯವನರು ಹಾಡಿನಲ್ಲಿ ಇದೆ ಎಂದು, “ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ ಆಕಾಶದ ಅಗಲಕ್ಕೂ ನಿಂತ ಆಲವೇ, ಮಲದ ಜೊತೆಗೆ ಛಲದ ಪಾಠ ಕಲಿಸುವವರು ಯಾರೋ ಎಂದು ಅಂಬೇಡ್ಕರ್ ಬಗ್ಗೆ ಅವರ ಸಾಹಿತ್ಯದಲ್ಲಿನ ತುಣಕನ್ನ ಹಾಡಿದ್ದಾರೆ. ನೀವು ನಮ್ಮನ್ನ ಎದ್ದು ನಿಲ್ಲಿಸಿದ್ದೀರಿ. ನಮ್ಮನ್ನ ನಡೆಸುವವರು ಯಾರೋ ಎಂದು ಅಂಬೇಡ್ಕರ್ ಬಗ್ಗೆ ಹೇಳಿದ್ದಾರೆ. ಅವರು ಅನೇಕ ಸಾಹಿತ್ಯ ಬರೆದಿದ್ದು ಇಂದು ನಮ್ಮನ್ನ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://www.youtube.com/channel/UCmBISI2sn_0gamb44UFj-vQ
Credits:
Music : latest 2020 6 different no copyright news background music, royalty free (black mart)
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g