ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲು ಸಿದ್ದರಾಮಯ್ಯಗೆ ಧಮ್ ಇಲ್ಲ : ಮಾಜಿ ಶಾಸಕ ಸಿ.ಟಿ ರವಿ
1 min read
ವಾಲ್ಮೀಕಿ ಅಭಿವೃದ್ಧಿ ನಿಗಮದ ನಕಲಿ ಖಾತೆಗೆ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲು ಸಿ.ಎಂ ಸಿದ್ದರಾಮಯ್ಯಗೆ ಧಮ್ ಇಲ್ಲ, ಕೇಸ್ ನಲ್ಲಿ ನನ್ನನ್ನು ಎಲ್ಲಿ ಎಳೆದು ತರುತ್ತಾರೋ ಎಂಬ ಭಯದಲ್ಲಿ ಧಮ್ ಲೆಸ್ ಆಗಿದ್ದು ನೀವು ನಾಗೇಂದ್ರ ಚಡ್ಡಿ ಎಳೆದರೆ ಅವರು ನಿಮ್ಮ ಪಂಚೆ ಎಳೆಯುತ್ತಾರೆ ಎಂದು ಮುಖ್ಯಮಂತ್ರಿಯವರನ್ನು ಮಾಜಿ ಶಾಸಕ ಸಿ.ಟಿ ರವಿ ಕಾಲೆಳೆದಿದ್ದಾರೆ.
ಬೇನಾಮಿ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿರುವ ಸಿ.ಟಿ ರವಿ ಈ ಪ್ರಕರಣದಲ್ಲಿ ಸರ್ಕಾರವೇ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದ್ದು, ಕಾಂಗ್ರೆಸ್ ಸರ್ಕಾರ ಭ್ರಷ್ಟರ ರಕ್ಷಣೆಗೆ ನಿಂತಿದೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಕಾಣಿಸುತ್ತಿದ್ದೆ ಎಂದು ರವಿ ಆರೋಪಿಸಿದ್ದಾರೆ. ಜೂನ್ 6 ರೊಳಗೆ ಸಚಿವ ನಾಗೇಂದ್ರ ರಾಜೀನಾಮೆ ಪಡೆಯದಿದ್ದರೆ ರಾಜ್ಯ ಸರ್ಕಾರದ ವಿರುದ್ಧವೇ ನಾವು ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ ಹಾಗಾಗಿ ಅಲ್ಲಿನ ಚುನಾವಣೆಗೆ ಈ ಹಣ ವರ್ಗಾವಣೆ ಆಗಿರಬಹುದು ಎಂಬ ಅನುಮಾನ ಇದೆ ಎಂದು ಹೇಳಿರುವ ಸಿ.ಟಿ ರವಿ ಎಸ್ಸಿಪಿಟಿಎಸ್.ಪಿ ಅನುದಾನದ 25 ಸಾವಿರ ಕೋಟಿ ಹಣ ಡೈವರ್ಟ್ ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಸಿ.ಟಿ ರವಿ ಬಿಜೆಪಿ ಅಭ್ಯರ್ಥಿಯಾಗಿ ಎಂಎಲ್.ಸಿ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ನಾಳಿನ ಲೋಕಸಭಾ ಫಲಿತಾಂಶ ಬಿಜೆಪಿ ಪರ ಬರಲಿದ್ದು ಕಾಂಗ್ರೆಸ್ EVM ಗಳ ಮೇಲೆ ಆರೋಪ ಮಾಡಲಿದೆ ಎಂದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

