ಭದ್ರಾ ಅಭಯಾರಣ್ಯದಲ್ಲಿ ಅಕ್ರಮ ಕಡಿತಲೆ: ಇಲಾಖೆಯ ಮೂವರು ಅಮಾನತು
1 min readಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಕಡತಲೆ ಪ್ರಕರಣ ಸಂಬಂಧ ಮೂವರು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ಭದ್ರಾ ಅಭಯಾರಣ್ಯ ವ್ಯಾಪ್ತಿಯ ತಣಗೀಬೈಲು, ಅಯ್ಯನಕೆರೆ, ಗುರುಪುರ ಗುಡ್ಡದ ಬೀರನಹಳ್ಳಿ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಾನಿ, ಬೀಟೆ, ತೇಗದ ಮರ ಗಳನ್ನು ಕಡಿತಲೆ ಮಾಡಲಾಗಿತ್ತು. ಲಕ್ಷಾಂತರ ರೂ.ನಷ್ಟವಾಗಿದ್ದ ಕೇಸ್ ನಲ್ಲಿ, ಅಭಯಾರಣ್ಯದೊಳಗೆ ಪ್ರವೇಶ ಸಾಧ್ಯವಿರಲಿಲ್ಲ, ಅಂತದರಲ್ಲಿ ಲಕ್ಷಾಂತರ ರೂ. ಮೌಲ್ಯದ ಮರಗಳ ಕಡತಲೆ ಯಾಗಿದ್ದು ಹೇಗೆ ಇದರ ಹಿಂದೆ ಅರಣ್ಯಧಿಕಾರಿಗಳ ಕುಮ್ಮಕು ಮತ್ತು ನಿರ್ಲಕ್ಷ್ಯದಿಂದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದರು.
ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಫಾರೆಸ್ಟ್ ಗಾರ್ಡ್ ಸದ್ದಾಂ ಹುಸೇನ್, ಅರುಣ್ ಹಾಗೂ ಡಿ.ಆರ್.ಎಫ್.ಓ ಸುನೀಲ್ ಅವರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಪ್ರಕರಣದ ಗಂಭೀರತೆ ಅರಿತ ಮೇಲಾಧಿಕಾರಿಗಳು ಈ ಅಮಾನತು ಆದೇಶ ಹೊರಡಿಸಿದ್ದಾರೆ ಆದರೆ ಇನ್ನೂ ಕೆಲವು ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಸಂಶಯ ವ್ಯಕ್ತವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g