ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲರಾದ ಜಿಲ್ಲಾ ಬಿಜೆಪಿ ಜನಪ್ರತಿನಿಧಿಗಳು ಹೆಚ್ ಹೆಚ್ ದೇವರಾಜ್
1 min readಚಿಕ್ಕಮಗಳೂರು : ರಾಜ್ಯ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಬಿಡಿಗಾಸು ಸಿಗದಿರುವುದು ಆಚ್ಚರಿ ಉಂಟುಮಾಡಿದೆ ಜಿಲ್ಲೆಯಲ್ಲಿ ನಾಲ್ವರು ಬಿ.ಜೆ.ಪಿ ಶಾಸಕರು ಉಪಸಭಾಪತಿ ಸಂಸತ್ ಸದಸ್ಯರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಇದ್ದರು ಸಹ ಅನುದಾನ ತರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆ.ಡಿ.ಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಆರೋಪಿಸಿದ್ದಾರೆ.
ಪ್ರಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯ ನಂತರ ಮಾತನಾಡಿದ ಅವರು ಮಲೆನಾಡಿನಲ್ಲಿ 4 ವರ್ಷಗಳಿಂದ ಶಾಶ್ವತ ಅತಿವೃಷ್ಠಿ ಸಂಭವಿಸಿ ಕಾಫೀ, ಅಡಿಕೆ, ನಾಶವಾಗಿದೆ ಆದರೂ ಬಜೆಟ್‌ನಲ್ಲಿ ಯಾವುದೇ ಪರಿಹಾರ ಘೋಷಿಸಿಲ್ಲ ಹೊಸ ಯೋಜನೆಗಳು ಪ್ರಕಟಿಸಿಲ್ಲ. ಎಲ್ಲಾ ವರ್ಗದ ಜನರಿಗೂ ನಿರಾಶೆಯಾಗಿದೆ ಒತ್ತುವರಿ ಸಮಸ್ಯೆ, ನಿರಾವರಿ ಯೋಜನೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಯಾವುದಕ್ಕೂ ಬಜೆಟ್‌ನಲ್ಲಿ ಹಣ ಇಟ್ಟಿಲ್ಲ ಎಂದು ದೇವರಾಜ್ ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು 120 ಕೋಟಿ ವೆಚ್ಚ ಮಾಡಿ ಅಮೃತ್ ಜೋಜನೆ ಕಾಮಗಾರಿ ನಡೆಸುವ ಮೂಲಕ ಸಾವ್ಜನಿಕರ ದುಡ್ಡನ್ನು ಲೂಟಿ ಮಾಡಿದ್ದಾರೆ. ಈ ಯೋಜನೆಯ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದು, ಕಾಮಗಾರಿ ಇದುವರೆಗೂ ಪೂರ್ಣಾಗೊಳ್ಳದೆ ಕಳಪೆಯಾಗಿದೆ. ಯೂಜಿಡಿ ಕಾಮಗಾರಿ ಕೂಡ ಆಮೆ ಗತಿಯಲ್ಲಿ ಸಾಗುತ್ತಿದ್ದು, ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆ ಎಂದು ಆರೋಪಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g