ಲವರ್ ಮದುವೆಗೆ ತೆರಳಿ ಯುವತಿ ರಂಪಾಟ : ಪ್ರೀತಿಸಿ ಮೋಸ ಮಾಡಿದ ಆರೋಪ
1 min read
ಲವರ್ ಗೆ ಕೈ ಕೊಟ್ಟು ಮತ್ತೊಂದು ಮದುವೆಯಾಗಲು ಮುಂದಾದ ವೇಳೆ
ಮದುವೆ ಮಂಟಪಕ್ಕೆ ತೆರಳಿ ಮೋಸ ಹೋದ ಯುವತಿಯ ರಂಪಾಟ ನಡೆಸಿದ್ದಾಳೆ.
ಚಿಕ್ಕಮಗಳೂರು ನಗರದ ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು ನೊಂದ ಯುವತಿ ಅಶ್ವಿನಿಯಿಂದ ಗಲಾಟೆ ನಡೆಸಿದ್ದು, ಶರತ್ ನನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದು ಈತ
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರೋ ಆರೋಪ ಮಾಡಿದ್ದಾಳೆ
ಇಂದು ನಡೆಯುತ್ತಿದ್ದ ಶರತ್ ಮದುವೆ ಮನೆಗೆ ಬಂದು ತನ್ನನ್ನು ಮದುವೆಯಾಗು ಎಂದು ಪಟ್ಟು ಹಿಡಿದಿದ್ದಾಳೆ
ಘಟನೆಯಿಂದ ಮದುವೆ ಮಂಟಪದಲ್ಲಿ ಆತಂಕ ಉಂಟಾಗಿತ್ತು, ಬೇಲೂರು ಮೂಲದ ಅಶ್ವಿನಿ
ಚಿಕ್ಕಮಗಳೂರಿನ ಕಲ್ಯಾಣ ನಗರದ ಶರತ್ ವಿರುದ್ಧ 8 ತಿಂಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ನಿನ್ನೆ ಶರತ್ ಮನೆಯ ಮುಂದೆ ಆಶ್ವಿನಿ ಏಕಾಂಗಿ ಹೋರಾಟ ಮಾಡಿದ್ದಳು.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಘಟನೆ ಬಗ್ಗೆ ನೊಂದ ಯುವತಿ ಅಶ್ವಿನಿ ಹೇಳಿಕೆ ನೀಡಿದ್ದು
ಇದೆ ಮದುವೆ ಮಂಟಪದಲ್ಲಿ ನನ್ನ ಮದುವೆಯಾಗಬೇಕು
ಅಲ್ಲಿಯವರೆಗೂ ನಾನು ಹೋರಾಟ ಮಾಡುತ್ತೇನೆ
ನಾನು ಬರುವ ಮೊದಲೇ ಮದುವೆಯಾಗಿದೆ
ನನ್ನನ್ನು ಶರತ್ ಮದುವೆಯಾಗಬೇಕು
ಹಣ ಕೊಡ್ತೀವಿ ಇಲ್ಲಿಂದ ಹೋಗು ಅಂದ್ರು
ನನಗೆ ಯಾವುದೇ ಹಣ ಬೇಡ ನನ್ನ ಮದುವೆ ಆಗಬೇಕಷ್ಟೆ ಎಂದಿದ್ದಾಳೆ.
ಸದ್ಯ ಕಲ್ಯಾಣ ಮಂಟಪದಿಂದ ತೆರಳಿದ ನೊಂದ ಯುವತಿ
ಪೊಲೀಸ್ ಠಾಣೆಗೆ ತೆರಳೋದಾಗಿ ಹೇಳಿದ್ದು ಮಹಿಳಾ ಆಯೋಗಕ್ಕೂ ದೂರು ನೀಡುವುದಾಗಿ ತಿಳಿಸಿದ್ದಾಳೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

