ಭೀಕರ ಕಾರು ಅಪಘಾತ ಸಿ.ಡಿ.ಎ ಮಾಜಿ ಅಧ್ಯಕ್ಷ ಸೇರಿ ಒಂದೇ ಕುಟುಂಬದ ಮೂವರು ದಾರುಣ ಸಾವು
1 min read
ಭೀಕರ ಕಾರು ಅಪಘಾತದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡರ ಡಿ.ಎಸ್. ಚಂದ್ರೇಗೌಡ ಹಾಗೂ ಅವರ ಪತ್ನಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ವಾಪಸ್ ಬರುವ ವೇಳೆ ಬೆಳ್ಳೂರು ಕ್ರಾಸ್ ಸಮೀಪದ ನಾಗತಿಹಳ್ಳಿ ಬಳಿ ಕಿಯಾ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
ತಮದೇ ಕಾರು ಚಲಾಯಿಸುತ್ತಿದ್ದ ಚಂದ್ರೇಗೌಡ ಹಾಗೂ ಅವರ ಪತ್ನಿ ಸರೋಜಮ್ಮ ಮತ್ತು ಕಾರಿನಲ್ಲಿದ್ದ ಅವರ ಕುಟುಂಬಸ್ಥರಾದ ಮಾಜಿ ನಗರಸಭೆ ಅಧ್ಯಕ್ಷ ನಿಂಗೇಗೌಡ ಪತ್ನಿ ಜಯಲಕ್ಷ್ಮಿ ಎಂಬುವವರು ಕೂಡಾ ಅಸುನೀಗಿದ್ದಾರೆ.
ವಿದೇಶಿ ಪ್ರವಾಸ ಮುಗಿಸಿ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದ ದಂಪತಿ ಇಂದು ಚಿಕ್ಕಮಗಳೂರಿಗೆ ವಾಪಸ್ ಹೊರಟಿದ್ದರು ಈ ವೇಳೆ ನಾಗತಿಹಳ್ಳಿ ಬಳಿ
ರಸ್ತೆಗೆ ಅಡ್ಡ ಬಂದ ಕರು ಒಂದನ್ನು ಢಿಕ್ಕಿ ತಪ್ಪಿಸಲು ಹೋಗಿ ಡಿವೈಡರ್ ಗೆ ಗುದ್ದಿದ ಕಿಯಾ ಕಾರು ಭೀಕರ ಅಪಘಾತಕ್ಕೀಡಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

