ನಕ್ಸಲರ ಶರಣಾಗತಿ ದಿನವಿಡೀ ನಡೆದ ಘಟನೆ
1 min read
ಆರು ಜನ ನಕ್ಸಲರನ್ನು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತರಾಗುವ ಪ್ರಕ್ರಿಯೆಯ ಕೊನೆ ಕ್ಷಣದಲ್ಲಿ ಅವರನ್ನು ಬೆಂಗಳೂರಿಗೆ ಶೀಫ್ಟ್ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹಕಚೇರಿ ಕೃಷ್ಣದಲ್ಲಿ ಆರು ಜನ ನಕ್ಸಲರು ಶರಣಾದರು.
ಶೃಂಗೇರಿ ತಾಲೂಕು ಬಳೆಗೇರೆ ಗ್ರಾಮದ ಮಂಡಗಾರು ಲತಾ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಗಂಡಿ ಕುತ್ತಲೂರು ಗ್ರಾಮದ ಸುಂದರಿ ಕುತ್ತಲೂರು, ಮೂಡಿಗೆರೆ ಬಾಳೆಹೊಳೆ ಗ್ರಾಮದ ವಜಜಾಕ್ಷಿ, ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಹಾರೋಹಳ್ಳಿ ಗ್ರಾಮದ ಮಾರೆಪ್ಪ ಆರೋಟಿ(ಜಯಣ್ಣ), ತಮಿಳುನಾಡು ವೆಲ್ಲೂರು ರಾಣೀಪೇಟ್ ಕೆ.ವಸಂತ, ಕೇರಳ ಅತ್ತಿಮಲಾ ತಲಪ್ಪುಳ ಜಿಷಾ ಅವರ ಶರಣಾಗತಿಗೆ ಇಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ದಿಢೀರ್ ನಡೆದ ಬೆಳವಣಿಯಿಂದ ಅವರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆದೊಯ್ದರು.
ನಕ್ಸಲರ ಶರಣಾಗತಿ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ದೃಢಪಡಿಸುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಭದ್ರತೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ ತುಕಡಿ ಗಳನ್ನು ನಕ್ಸಲರನ್ನು ಕರೆತರುವ ಆಯಾಕಟ್ಟಿನ ಜಾಗಕ್ಕೆ ನೇಮಿಸಿ ಸಕಲ ಸಿದ್ಧತೆಗಳನ್ನು ನಡೆಸಿತ್ತು.
ಆರು ಜನ ನಕ್ಸಲರು ಮೊದಲು ನಗರದ ಪ್ರವಾಸಿಮಂದಿರಕ್ಕೆ ಆಗಮಿಸಿ ನಂತರ ಜಿಲ್ಲಾಡಳಿತದ ಮುಂದೇ ಶರಣಾಗತಿಯಾಗುತ್ತಾ ರೆಂದು ತಿಳಿದ ಪೊಲೀಸರು ಪ್ರವಾಸಿಮಂದಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬೀಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ನಕ್ಸಲರು ಆಗಮಿಸುವ ಮಾರ್ಗದಲ್ಲಿಯೂ ಸಹ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಸುಲಲಿತವಾಗಿ ಬರುವಂತೆ ವ್ಯವಸ್ಥೆ ಯನ್ನು ಕಲ್ಪಿಸಲಾಗಿತ್ತು.
ಪ್ರವಾಸಿ ಮಂದಿರದ ಮುಖ್ಯದ್ವಾರ ಹಾಗೂ ಒಳಾಂಗಣ, ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರ ಸೇರಿದಂತೆ ಸುತ್ತಮುತ್ತಲು ಬಾರೀ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು ಹಾಗೇ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದಲ್ಲಿ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಿ ತಪಾಸಣೆ ನಡೆಸಿ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಸರ್ವಾಜನಿಕರ ಸಂಚಾರವನ್ನು ನಿಷೇಧಿಸಲಾಗಿತ್ತು.
ಮಲೆನಾಡಿನ ಅರಣ್ಯ ಪ್ರದೇಶದಿಂದ ಕಮಿಟಿ ಸದಸ್ಯರ ಜತೆ ಪೊಲೀಸರ ಬಾರೀ ಭದ್ರತೆಯಲ್ಲಿ ನಕ್ಸಲರನ್ನು ಚಿಕ್ಕಮಗಳೂರು ನಗರಕ್ಕೆ ಕರೆತರುತ್ತಿದ್ದಂತೆ ದಿಢೀರ್ ನಡೆದ ಬೆಳವಣಿಗೆಯಿಂದ ಅವರನ್ನು ಬೆಂಗಳೂರಿಗೆ ನೇರವಾಗಿ ಕರೆದೊಯ್ಯಲಾಯಿತು. ನಕ್ಸಲ್ ಸಂಬಂಧಿಕರು, ಸಂಘಟಕರು, ಮಾಜಿ ನಕ್ಸಲರು ಸೇರಿದಂತೆ ಅನೇಕರು ಪ್ರವಾಸಿಮಂದಿರದಲ್ಲಿ ಜಮಾವಣೆಗೊಂಡಿದ್ದರು. ಇನ್ನೇನು ಪ್ರವಾಸಿ ಮಂದಿರಕ್ಕೆ ಆರು ಜನ ನಕ್ಸಲರು ಆಗಮಿಸುತ್ತಾರೆಂದು ಕಾತುರದಿಂದ ಕಾಯುತ್ತಿದ್ದ ವೇಳೆ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ಆರು ಜನ ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯ ಕ್ಷಣದ ಬದಲಾವಣೆಯಿಂದ ಆರು ಜನ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಲಿದ್ದಾರೆ ಘೋಷಿಸಿದರು.
ಕೊನೆಯ ಕ್ಷಣದ ಬದಲಾವಣೆಯಿಂದ ಸ್ಥಳದಲ್ಲೊಂದಿಷ್ಟು ಗೊಂದಲದ ವಾತವರಣ ನಿರ್ಮಾಣವಾಗಿತ್ತು. ಕಾತುರದಿಂದ ಕಾಯು ತ್ತಿದ್ದ ಒಂದಿಷ್ಟು ಮಂದಿಗೆ ನಿರಾಸೆ ಮೂಡಿಸಿತು. ಪ್ರವಾಸಿಮಂದಿರಕ್ಕೆ ದೂರ ದೂರದಿಂದ ಆಗಮಿಸಿದ್ದ ನಕ್ಸಲರ ಸಂಬಂಧಿಕರು, ಸಂಘಟಕರು, ಮಾಜಿ ನಕ್ಸಲರು ಸೇರಿದಂತೆ ಪ್ರಮುಖರನ್ನು ಪೊಲೀಸ್ ಇಲಾಖೆ ವಾಹನದಲ್ಲಿ ಬೆಂಗಳೂರಿಗೆ ಕಳಿಸಿಕೊಡ ಲಾಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

