ಮಹಿಳಾ ಪರ ಧ್ವನಿ, ಸಮಾಜ ಸೇವಕಿ ಮೋಹಿನಿ ಸಿದ್ದೇಗೌಡ ಇನ್ನಿಲ್ಲ
1 min read
ಚಿಕ್ಕಮಗಳೂರು: ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ಸಮಾಜ ಸೇವೆ ತೊಡಗಿಕೊಂಡು ಹೆಣ್ಣು ಮಕ್ಕಳ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತಿದ್ದ ಮೋಹಿನಿ ಸಿದ್ದೇಗೌಡ ಅವರು ಇಹಲೋಕ ತ್ಯಜಿಸಿದ್ದಾರೆ. ಇವರು ಕಳೆದ 42 ವರ್ಷಗಳಿಂದ ನಗರದಲ್ಲಿ ಕಸ್ತೂರಿ ಬಾ ಸದನ ಹಾಗೂ ಕೌಟುಂಬಿಕ ಸಲಹಾ ಕೇಂದ್ರ ನಡೆಸುತ್ತಿದ್ದರು. ಈ ಕೇಂದ್ರದ ಮೂಲಕ ವರದಕ್ಷಿಣೆ ಪ್ರಕರಣ, ಮಹಿಳಾ ದೌರ್ಜನ್ಯ, ದಾಂಪತ್ಯದಲ್ಲಿ ವಿರಸ, ಬಹುಪತ್ನಿತ್ವ, ಮದ್ಯಪಾನ ವ್ಯಸನಿಗಳ ಕುಟುಂಬ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆ ಬಗೆಹರಿಸುವಲ್ಲಿ ಮೋಹಿನಿ ಸಿದ್ದೇಗೌಡ ಮಹತ್ವದ ಪಾತ್ರ ವಹಿಸಿದ್ದರು. ಜಿಲ್ಲೆಯ ಹಳ್ಳಿ-ಹಳ್ಳಿಗಳನ್ನು ಸುತ್ತಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತಿದ್ದ ಇವರು. ಸಾಕಷ್ಟು ಮಹಿಳೆಯರ ಶೋಷಣೆ ಪ್ರಕರಣಗಳನ್ನು ಗರಿಷ್ಠ ಮಟ್ಟದಲ್ಲಿ ಬಗೆಹರಿಸುವ ಪ್ರಯತ್ನ ಮಾಡಿದ್ದರು. ಸಾರಾಯಿ ವಿರುದ್ಧ ಉಗ್ರ ಹೋರಾಟ ನಡೆಸಿದ್ದ ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಅವರ ಜೀವನದ ಅರ್ಧ ಭಾಗವನ್ನು ಕೋರ್ಟ್ನಲ್ಲಿಯೇ ಕಳೆದಿದ್ದರು. ಸಮಾಜ ಸೇವೆ ಕ್ಷೇತ್ರದಲ್ಲಿ ತಾವು ತೋರಿದ ಸಾಧನೆಗೆ 2020ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತ್ತು. ಮೋಹಿನಿ ಸಿದ್ದೇಗೌಡ ಅವರ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಮೂಡಿಗೆರೆಯಲ್ಲಿ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು. ಸಂಜೆ 5 ರಿಂದ 6.30 ರ ಒಳಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

